ಗೆಲ್ಲುವ ಪ್ರಯತ್ನವನ್ನೇ ಮಾಡಲಿಲ್ಲ ಗಂಭೀರ್ ಪಡೆ

Posted By:

ಬೆಂಗಳೂರು, ಏಪ್ರಿಲ್ 17: ಡೇರ್‌ಡೆವಿಲ್ಸ್ ಎಂಬ ಹೆಸರಿದ್ದರೂ 'ನೈಟ್ ರೈಡರ್ಸ್'ನ ದೈತ್ಯರ ಎದುರು ಡೆಲ್ಲಿ ತಂಡದವರ ಧೈರ್ಯ ಮಂಕಾಯಿತು. ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಟಗಾರರು ಹೆಚ್ಚೇನೂ ಪ್ರತಿರೋಧ ತೋರದೆ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಶರಣಾದರು.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ತನ್ನ ಸಾಮರ್ಥ್ಯ ಮೆರೆದ ಕೆಕೆಆರ್‌ಗೆ ಡಿಡಿ ತಂಡ ಸುಲಭದ ತುತ್ತಾಯಿತು. ಐಪಿಎಲ್‌ನ ಎಲ್ಲ ಪಂದ್ಯಗಳು ಬಹುತೇಕ ರೋಚಕತೆ ಮೂಡಿಸಿದ್ದವು. ಅಂತಹದ್ದೇ ರೋಚಕ ಕ್ಷಣಗಳನ್ನು ಸವಿಯಲು ಬಯಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಡೆಲ್ಲಿ ತಂಡ ನಿರಾಸೆ ಮೂಡಿಸಿತು.

ಐಪಿಎಲ್ 2018: ಡೆಲ್ಲಿ ವಿರುದ್ಧ ಕೆಕೆಆರ್ ಗೆ ಭರ್ಜರಿ ಜಯ

ಟಿ 20 ಪಂದ್ಯದಲ್ಲಿ 71 ರನ್‌ಗಳ ಸೋಲು ಬಹು ದೊಡ್ಡ ಅಂತರದ್ದು. ರಿಶಬ್ ಪಂತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ ಅವರಂತೆ ಒಬ್ಬ ಆಟಗಾರ ಉತ್ತಮ ಆಟವಾಡಿದ್ದರೂ ಪಂದ್ಯ ಕೌತುಕದ ಘಟ್ಟಕ್ಕೆ ತಲುಪುತ್ತಿತ್ತು ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ ಕೆಕೆಆರ್ ಗೆಲುವಿಗೆ ಮತ್ತು ಹೆಣಗಾಡುತ್ತಲೇ ಪಂದ್ಯ ಮುಗಿಸಿದ ಡೆಲ್ಲಿ ತಂಡದ ಸೋಲಿಗೆ ತಲಾ ಐದು ಕಾರಣಗಳನ್ನು ನೋಡೋಣ ಬನ್ನಿ.

ಮೂರನೇ ಓವರ್‌ನಲ್ಲಿ ನರೇನ್ ಔಟ್

ಮೂರನೇ ಓವರ್‌ನಲ್ಲಿ ನರೇನ್ ಔಟ್

ಕೆಕೆಆರ್ ಆಡಿದ ಮೊದಲ ಓವರ್‌ ಮೇಡನ್ ಆಗಿತ್ತು. ಟ್ರೆಂಟ್ ಬೋಲ್ಟ್, ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಅವರಿಗೆ ಖಾತೆ ತೆರೆಯಲು ಅವಕಾಶವನ್ನೇ ನೀಡಲಿಲ್ಲ. ಮೂರನೇ ಓವರ್‌ನಲ್ಲಿ ಸುನೀಲ್ ನರೇನ್ ವಿಕೆಟ್ ಒಪ್ಪಿಸಿದರು.

ಆದರೆ ನಂತರ ಬಂದ ರಾಬಿನ್ ಉತ್ತಪ್ಪ ಮೂರು ಸಿಕ್ಸರ್‌ಗಳನ್ನು ಸಿಡಿಸಿ ರನ್ ಸರಾಸರಿ ವೇಗ ಹೆಚ್ಚಿಸಿದರು.

ಕೆಕೆಆರ್ ಪರ ದಾಖಲಾದದ್ದು 15 ಸಿಕ್ಸರ್

ಕೆಕೆಆರ್ ಪರ ದಾಖಲಾದದ್ದು 15 ಸಿಕ್ಸರ್

ಉತ್ತಪ್ಪ, ಲಿನ್ ಮತ್ತು ದಿನೇಶ್ ಕಾರ್ತಿಕ್ ಔಟಾದರೂ ಇನ್ನೊಂದೆಡೆ ನಿತೀಶ್ ರಾಣಾ ರನ್ ವೇಗವನ್ನು ತಗ್ಗಲು ಬಿಡಲಿಲ್ಲ. ಕಾರ್ತಿಕ್ ವಿಕೆಟ್ ಪತನದ ಬಳಿಕ ಬಂದ ಆಂಡ್ರೂ ರಸೆಲ್ ತಳವೂರಲು ಸಮಯ ತೆಗೆದುಕೊಳ್ಳುವ ಗೋಜಿಗೇ ಹೋಗಲಿಲ್ಲ.

ಜೀವದಾನ ನೀಡಿದ ರಾಯ್

ಜೀವದಾನ ನೀಡಿದ ರಾಯ್

ಆಂಡ್ರೂ ರಸೆಲ್ ಎದುರಿಸಿದ್ದು ಕೇವಲ 12 ಎಸೆತ. ಅದರಲ್ಲಿಯೇ 6 ಸಿಕ್ಸರ್‌ಗಳನ್ನು ಅವರು ಸಿಡಿಸಿದರು. ಆರು ರನ್ ಗಳಿಸಿದ್ದಾಗ ದೊರೆತ ಜೀವದಾನವನ್ನು ಅವರು ಸದುಪಯೋಗಪಡಿಸಿಕೊಂಡರು.

ಆರಂಭದಲ್ಲೇ ಕುಸಿತ

ಆರಂಭದಲ್ಲೇ ಕುಸಿತ

ಡೆಲ್ಲಿ ಡೇರ್‌ ಡೆವಿಲ್ಸ್ ತಂಡ ಉತ್ತಮ ಆರಂಭ ಪಡೆದುಕೊಳ್ಳಲು ಕೆಕೆಆರ್ ಅವಕಾಶ ನೀಡಲಿಲ್ಲ. ಹಿಂದಿನ ಪಂದ್ಯದ ಹೀರೊ ಜೇಸನ್ ರಾಯ್ ಮೊದಲ ಓವರ್‌ನಲ್ಲೇ ಸ್ಟಂಪ್‌ ಔಟ್ ಆದರು. ಬಳಿಕ ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಪೆವಿಲಿಯನ್ ಹಾದಿ ಹಿಡಿದರು.

ರನ್ ವೇಗಕ್ಕೆ ಕಡಿವಾಣ

ರನ್ ವೇಗಕ್ಕೆ ಕಡಿವಾಣ

ರಿಷಬ್ ಪಂತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್ ವೇಳೆ ಮಾತ್ರ ಕೆಕೆಆರ್ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಟ್ಟರು. ಉಳಿದಂತೆ ಎಲ್ಲ ಬ್ಯಾಟ್ಸ್‌ಮನ್‌ಗಳು ಸಮರ್ಥವಾಗಿ ಆಡುವಲ್ಲಿ ವಿಫಲರಾದರು

ಮೊದಲ ಓವರ್‌ನಲ್ಲೇ ಮೇಡನ್

ಮೊದಲ ಓವರ್‌ನಲ್ಲೇ ಮೇಡನ್

ಮೊದಲ ಐದು ಓವರ್‌ಗಳಲ್ಲಿ ಕೆಕೆಆರ್ ಕೇವಲ 35 ರನ್ ಗಳಿಸಿತ್ತು. ಈ ವೇಳೆ ಡೆಲ್ಲಿ ತಂಡದ ಬೌಲರ್‌ಗಳು ಬಿಗುವಿನ ಬೌಲಿಂಗ್ ನಡೆಸಿದ್ದರು. ಆದರೆ, ಉತ್ತಪ್ಪ ಅಬ್ಬರಿಸತೊಡಗಿದ ನಂತರ ಲಯ ಕಳೆದುಕೊಂಡರು.

ಟ್ರೆಂಟ್ ಬೋಲ್ಟ್ ಹೊರತುಪಡಿಸಿ ಉಳಿದ ವೇಗದ ಬೌಲರ್‌ಗಳು ತೀರಾ ದುಬಾರಿಯಾದರು.

ರಸೆಲ್‌ ಬ್ಯಾಟ್‌ನಿಂದ ಆರು ಸಿಕ್ಸರ್

ರಸೆಲ್‌ ಬ್ಯಾಟ್‌ನಿಂದ ಆರು ಸಿಕ್ಸರ್

ಆಂಡ್ರೂ ರಸೆಲ್ ಆರು ರನ್ ಗಳಿಸಿದ್ದಾಗ ನೀಡಿದ ಕ್ಯಾಚ್‌ಅನ್ನು ಜೇಸನ್ ರಾಯ್ ಹಿಡಿತಕ್ಕೆ ಪಡೆದುಕೊಳ್ಳುವಲ್ಲಿ ವಿಫಲರಾದರು. ಬಳಿಕ ರಸೆಲ್ ಮತ್ತೆ ಐದು ಸಿಕ್ಸರ್‌ಗಳನ್ನು ಸಿಡಿಸಿದರು. ಈ ಕ್ಯಾಚ್ ಡೆಲ್ಲಿ ತಂಡಕ್ಕೆ ದುಬಾರಿಯಾಯಿತು.

ಆರಂಭದಲ್ಲಿಯೇ ಆಘಾತ

ಆರಂಭದಲ್ಲಿಯೇ ಆಘಾತ

ಡೆಲ್ಲಿಗೆ ಉತ್ತಮ ಆರಂಭ ಒದಗಿಸುವಲ್ಲಿ ಬ್ಯಾಟ್ಸ್‌ಮನ್‌ಗಳು ಸಫಲರಾಗಲಿಲ್ಲ. 200ರನ್‌ಗಳ ಕಠಿಣ ಗುರಿಯನ್ನು ತಲುಪುವ ಪ್ರಯತ್ನವನ್ನೇ ಮಾಡಲಿಲ್ಲ.

ರಿಶಬ್ ಪಂತ್ ಹೋರಾಟ

ರಿಶಬ್ ಪಂತ್ ಹೋರಾಟ

ರಿಶಬ್ ಪಂತ್ 26 ಎಸೆತಗಳಲ್ಲಿ 43 ರನ್ ಗಳಿಸಿ ಕೆಕೆಆರ್‌ಗೆ ತಲೆನೋವಾಗುವ ಸೂಚನೆ ನೀಡಿದರು. 10 ರನ್ ಸರಾಸರಿಯಲ್ಲಿ ತಂಡದ ಮೊತ್ತ 86 ರನ್‌ ಆಗಿದ್ದಾಗ ಪಂತ್ ವಿಕೆಟ್ ಒಪ್ಪಿಸಿದರು.

ಮ್ಯಾಕ್ಸ್‌ವೆಲ್‌ಗೆ ಸಿಗದ ಬೆಂಬಲ

ಮ್ಯಾಕ್ಸ್‌ವೆಲ್‌ಗೆ ಸಿಗದ ಬೆಂಬಲ

ರಿಶಬ್ ಪಂತ್ ಮತ್ತು ಮ್ಯಾಕ್ಸ್‌ವೆಲ್‌ ಹೊರತುಪಡಿಸಿ ಮತ್ಯಾವ ಬ್ಯಾಟ್ಸ್‌ಮನ್‌ ಕೂಡ ಎರಡಂಕಿ ಮೊತ್ತ ತಲುಪಲು ಸಾಧ್ಯವಾಗಲಿಲ್ಲ. ಮ್ಯಾಕ್ಸ್‌ವೆಲ್‌ ಏಕಾಂಗಿಯಾಗಿ ಹೋರಾಡಿ 22 ಎಸೆತಗಳಲ್ಲಿ 47 ರನ್ ಗಳಿಸಿದರು. ಅವರಿಗೆ ಇತರೆ ಆಟಗಾರರಿಂದ ಬೆಂಬಲ ಸಿಗಲಿಲ್ಲ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 17, 2018, 9:31 [IST]
Other articles published on Apr 17, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ