Flashback 2022 : 2022ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರರು

ಟಿ20 ಅಬ್ಬರದ ನಡುವೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ ಎನ್ನುವ ವಾದ ನಡೆಯುತ್ತಿದೆ. ಆದರೆ, 2022ರಲ್ಲಿ ಹಲವು ಟೆಸ್ಟ್ ಪಂದ್ಯಗಳು ಟೆಸ್ಟ್ ಮೇಲೆ ಜನರ ಆಸಕ್ತಿಯನ್ನು ಹೆಚ್ಚಿಸಿದ್ದು ನಿಜ. ಹಲವು ಆಟಗಾರರು, ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.

2022ರಲ್ಲಿ ಇದುವರೆಗೆ 40 ಟೆಸ್ಟ್ ಪಂದ್ಯಗಳು ನಡೆದಿವೆ. ಹಲವು ಪಂದ್ಯಗಳು ಸಾಕಷ್ಟು ಕುತೂಹಲಕಾರಿಯಾಗಿದ್ದವು, ರೋಚಕ ಸೋಲು ಗೆಲುವುಗಳಿಗೆ ಈ ವರ್ಷ ಸಾಕ್ಟಿಯಾಗಿದೆ. ಇಂಗ್ಲೆಂಡ್ ತಂಡ ಈ ವರ್ಷ ಟೆಸ್ಟ್ ಮಾದರಿಯ ದೃಷ್ಟಿಕೋನವನ್ನೇ ಬದಲಾಯಿಸುವಂತೆ ಪ್ರದರ್ಶನ ನೀಡಿತು.

ಬ್ರೆಂಡನ್ ಮೆಕಲಮ್ ತಂಡದ ಕೋಚ್ ಆದ ನಂತರ ಇಂಗ್ಲೆಂಡ್ ಟೆಸ್ಟ್ ಆಡುವ ರೀತಿಯನ್ನು ಬದಲಾಯಿಸಿದರು. ಟಿ20, ಏಕದಿನ ಮಾದರಿಯಂತೆ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ಬೆನ್‌ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಯಶಸ್ವಿ ಟೆಸ್ಟ್ ತಂಡ ಎನಿಸಿಕೊಂಡಿತು. ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯನ್ನು ಅವರು ಕ್ಲೀನ್ ಸ್ವೀಪ್ ಮಾಡಿದರು.

Flashback 2022: ಟೆನಿಸ್‌ಗೆ ರೋಜರ್ ಫೆಡರರ್ ವಿದಾಯ: ಪ್ರತಿಸ್ಪರ್ಧಿಗಳ ಬಾಂಧವ್ಯಕ್ಕೆ ಸಾಕ್ಷಿಯಾದ ಜಗತ್ತು!Flashback 2022: ಟೆನಿಸ್‌ಗೆ ರೋಜರ್ ಫೆಡರರ್ ವಿದಾಯ: ಪ್ರತಿಸ್ಪರ್ಧಿಗಳ ಬಾಂಧವ್ಯಕ್ಕೆ ಸಾಕ್ಷಿಯಾದ ಜಗತ್ತು!

2022ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಮ್, ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋ, ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೆನ್ ಈ ವರ್ಷದಲ್ಲಿ ಹೆಚ್ಚು ಯಶಸ್ಸು ಕಂಡ ಬ್ಯಾಟರ್ ಗಳಾಗಿದ್ದಾರೆ. ಇನ್ನು 2022ರಲ್ಲಿ ಟೆಸ್ಟ್ ಮಾದರಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರರ ವಿವರ ಇಲ್ಲಿದೆ. 450 ಕ್ಕಿಂತ ಹೆಚ್ಚು ರನ್ ಗಳಿಸಿರುವ ಆಟಗಾರರ ಸರಾಸರಿಯನ್ನು ಮಾತ್ರ ಇಲ್ಲಿ ಪರಿಗಣಿಸಲಾಗಿದೆ.

ಅತಿ ಹೆಚ್ಚು ಸರಾಸರಿ ಹೊಂದಿರುವ ಚಂಡಿಮಲ್

ಅತಿ ಹೆಚ್ಚು ಸರಾಸರಿ ಹೊಂದಿರುವ ಚಂಡಿಮಲ್

ಅಚ್ಚರಿ ಎನ್ನುವಂತೆ ಮೊದಲನೇ ಸ್ಥಾನದಲ್ಲಿ ಶ್ರೀಲಂಕಾದ ದಿನೇಶ್ ಚಂಡಿಮಲ್ ಇದ್ದಾರೆ. 2022ರಲ್ಲಿ ಶ್ರೀಲಂಕಾ ಬ್ಯಾಟರ್ ಆರು ಟೆಸ್ಟ್ ಗಳನ್ನು ಆಡಿದ್ದಾರೆ. 10 ಇನ್ನಿಂಗ್ಸ್‌ಗಳಲ್ಲಿ ಅವರು 719 ರನ್ ಗಳಿಸಿದ್ದಾರೆ. ಮೂರು ಬಾರು ಅವರು ಅಜೇಯರಾಗಿ ಉಳಿದಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ 206 ರನ್ ಗಳಿಸಿದ್ದು, ಈ ವರ್ಷ ಅವರು ಗಳಿಸಿದ ಗರಿಷ್ಠ ರನ್ ಆಗಿದೆ.

102.7 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇದು ಈ ವರ್ಷದವರೆಗಿನ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಮಾಡಿದ ಅತ್ಯುತ್ತಮ ಸರಾಸರಿಯಾಗಿದೆ. ಜೇ ಓವರ್‌ಟರ್ನ್, ರವೀಂದ್ರ ಜಡೇಜಾ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಕೂಡ ಉತ್ತಮ ಸರಾಸರಿ ಹೊಂದಿದ್ದರು ಅವರು 2 ಅಥವಾ 3 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.

ಭಾರತ vs ಬಾಂಗ್ಲಾದೇಶ: 2ನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ವಾಸಿಂ ಜಾಫರ್ ಭವಿಷ್ಯ

ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್

ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್

ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಸದ್ಯ ಅತಿ ಹೆಚ್ಚು ಚರ್ಚೆಯಲ್ಲಿರುವ ಆಟಗಾರ, ಅವರು ಇದುವರೆಗೆ ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ ಮೂರು ಪಂದ್ಯಗಳಲ್ಲಿ ಅವರು ಸತತವಾಗಿ ಶತಕ ಗಳಿಸಿದ್ದಾರೆ.

ಅವರು ಆರು ಇನ್ನಿಂಗ್ಸ್‌ಗಳಲ್ಲಿ 80 ಸರಾಸರಿ ಮತ್ತು 92.13 ಸ್ಟ್ರೈಕ್‌ರೇಟ್‌ನಲ್ಲಿ 480 ರನ್ ಗಳಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಸರಣಿಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಅವರು ಶತಕ ದಾಖಲಿಸಿದರು.

ಟೆಸ್ಟ್‌ನಲ್ಲಿ ರಿಷಬ್ ಪಂತ್ ಉತ್ತಮ ಆಟ

ಟೆಸ್ಟ್‌ನಲ್ಲಿ ರಿಷಬ್ ಪಂತ್ ಉತ್ತಮ ಆಟ

ಟಿ20 ಮತ್ತು ಏಕದಿನ ಮಾದರಿಯಲ್ಲಿ ರಿಷಬ್ ಪಂತ್ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದರು. ಆದರೆ, ಪಂತ್ ಟೆಸ್ಟ್ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೆಚ್ಚು ಸರಾಸರಿ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಪಂತ್ ಕೂಡ ಇದ್ದಾರೆ. 10 ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ಅವರು 64.22 ಸರಾಸರಿಯಲ್ಲಿ 578 ರನ್ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್‌ನ ಕ್ರೇಗ್ ಬೈತ್‌ವೈಟ್ 62.45 ಸರಾಸರಿಯಲ್ಲಿ 578 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ 10 ಪಂದ್ಯಗಳಲ್ಲಿ 71.3 ಸರಾಸರಿಯಲ್ಲಿ 1079 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ 6 ಪಂದ್ಯಗಳಲ್ಲಿ 71.2 ಸರಾಸರಿಯಲ್ಲಿ 641 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ ಸರಾಸರಿ 67.26 ಆಗಿದ್ದು, ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಸರಾಸರಿ 66.31 ಆಗಿದೆ. ಮಾರ್ನಸ್ ಲ್ಯಾಬುಸ್ಚಾಗ್ನೆ 10 ಟೆಸ್ಟ್ ಪಂದ್ಯಗಳ 18 ಇನ್ನಿಂಗ್ಸ್‌ಗಳಲ್ಲಿ 58.93 ಸರಾಸರಿಯೊಂದಿಗೆ 943 ರನ್ ಗಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, December 21, 2022, 20:29 [IST]
Other articles published on Dec 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X