ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಮಾಜಿ ನಾಯಕ ಇಯಾನ್ ಚಾಪೆಲ್‌ಗೆ ಚರ್ಮದ ಕ್ಯಾನ್ಸರ್

Former Australian captain Ian Chappell diagnosed with skin cancer

ಸಿಡ್ನಿ, ಜುಲೈ 18: ತಾನು ಕ್ಯಾನ್ಸರ್ ಖಾಯಿಲೆ ವಿರುದ್ಧ ಹೋರಾಡುತ್ತಿರುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಗುರುವಾರ (ಜುಲೈ 18) ಹೇಳಿಕೊಂಡಿದ್ದಾರೆ. ಆದರೆ 75ರ ಹರೆಯದ ಚಾಪೆಲ್ ಮುಂದಿನ ತಿಂಗಳು ಕಾಮೆಂಟೇಟ್ ಮಾಡಲು ತಾನು ಸಾಕಷ್ಟು ಫಿಟ್ ಆಗಿರುವುದಾಗಿಯೂ ತಿಳಿಸಿದ್ದಾರೆ.

ವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾಗೆ ಪೃಥ್ವಿ ಅಲಭ್ಯ ಸಾಧ್ಯತೆವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾಗೆ ಪೃಥ್ವಿ ಅಲಭ್ಯ ಸಾಧ್ಯತೆ

1964ರಿಂದ 1980ರ ಅವಧಿಯಲ್ಲಿ ಚಾಪೆಲ್ ಒಟ್ಟು 75 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೆಲಿಯಾವನ್ನು ಪ್ರತಿನಿಧಿಸಿದ್ದರು. ಐದು ವಾರಗಳ ಕಾಲ ತೀವ್ರ ವಿಕಿರಣ ಚಿಕಿತ್ಸೆ(ಇಂಟೆನ್ಸ್ ರೇಡಿಯೇಶನ್ ಥೆರಪಿ)ಗೆ ಒಳಗಾಗಿರುವ ಇಯಾನ್, ಭುಜ, ಕುತ್ತಿಗೆ ಮತ್ತು ಕಂಕುಳು ಭಾಗದಲ್ಲಿದ್ದ ಚರ್ಮದ ಕ್ಯಾನ್ಸರನ್ನು ತೆಗೆಸಿಕೊಂಡಿದ್ದಾರೆ.

ವಿಶ್ವಕಪ್‌ ಫೈ. ಸೂಪರ್‌ ಓವರ್‌: ಜಿಮ್ಮಿ ಸಿಕ್ಸ್ ವೇಳೆ ಕೋಚ್ ಕೊನೆಯುಸಿರು!ವಿಶ್ವಕಪ್‌ ಫೈ. ಸೂಪರ್‌ ಓವರ್‌: ಜಿಮ್ಮಿ ಸಿಕ್ಸ್ ವೇಳೆ ಕೋಚ್ ಕೊನೆಯುಸಿರು!

'70ರ ಹರೆಯಕ್ಕೆ ಬಂದಾಗ ನಾವು ದುರ್ಬಲರೆಂದು ಅನ್ನಿಸತೊಡಗುತ್ತದೆ. ಅದರ ಮಧ್ಯೆ ನಾನು ಕೆಲ ವರ್ಷಗಳಿಂದ ಮಹಾಮಾರಿ ಚರ್ಮದ ಕ್ಯಾನ್ಸರ್‌ಗೆ ತುತ್ತಾಗಿದ್ದೇನೆ. ಆದರೆ ಇದು ಮೆಲನೋಮಸ್ ಬಗೆಯ ಕ್ಯಾನ್ಸರ್ ಅಲ್ಲ ಅನ್ನೋದು ಕೊಂಚ ಸಮಾಧಾನ ತಂದಿದೆ' ಎಂದು 'ದ ಡೈಲಿ ಟೆಲಿಗ್ರಾಫ್' ಜೊತೆ ಮಾತನಾಡುತ್ತ ಹೇಳಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಇಬ್ಬರು ಅದ್ಭುತ ಪ್ರತಿಭೆಗಳ ಹೆಸರಿಸಿದ ತೆಂಡೂಲ್ಕರ್ಟೀಮ್ ಇಂಡಿಯಾದ ಇಬ್ಬರು ಅದ್ಭುತ ಪ್ರತಿಭೆಗಳ ಹೆಸರಿಸಿದ ತೆಂಡೂಲ್ಕರ್

ಪ್ಯಾಥಾಲಜಿ ವರದಿಯ ಪ್ರಕಾರ ಇಯಾನ್‌ರಲ್ಲಿರುವ ಖಾಯಿಲೆ ಮೊದಲ ಹಂತದ್ದು. ಅಲ್ಲದೆ ಆಗಸ್ಟ್ 1ರಿಂದ ಆಸ್ಟ್ರೇಲಿಯಾದ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್ vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಕಾಮೆಂಟೇಟರ್ ಆಗಿ ಪಾಲ್ಗೊಳ್ಳಲು ಇಯಾನ್‌ಗೆ ಅನುಮತಿ ದೊರೆತಿದೆ. ಟೆಸ್ಟ್ ಸರಣಿಯು ಐದು ಪಂದ್ಯಗಳನ್ನು ಒಳಗೊಂಡಿರಲಿದೆ.

Story first published: Thursday, July 18, 2019, 15:26 [IST]
Other articles published on Jul 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X