ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಹರಿಹಾಯ್ದ ಮಾಜಿ ಪಾಕ್ ಕ್ರಿಕೆಟಿಗ ಸಲ್ಮಾನ್ ಬಟ್

Former Cricketer Salman Butt Outraged Against Pakistan Cricket Board For Preparing Flat Tracks

ತವರಿನಲ್ಲಿ ಫ್ಲಾಟ್ ಟ್ರ್ಯಾಕ್‌ಗಳನ್ನು ಸಿದ್ಧಪಡಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಪಾಕ್ ಮಾಜಿ ನಾಯಕ ಸಲ್ಮಾನ್ ಬಟ್ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಬಾಬರ್ ಅಜಮ್ ಅವರ ನಾಯಕತ್ವ ಕೌಶಲ್ಯಗಳ ಬಗ್ಗೆ ಸಲ್ಮಾನ್ ಬಟ್ ಅವರನ್ನು ಕೇಳಲಾಯಿತು.

ಸಲ್ಮಾನ್ ಬಟ್ ಅವರು ಬಾಬರ್ ಅಜಮ್ ಅವರ ಇತ್ತೀಚಿನ ಯಶಸ್ಸಿನ ಬಗ್ಗೆ ಶ್ಲಾಘಿಸಿದರು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನ ಕೌಶಲ್ಯಗಳನ್ನು ಗೌರವಿಸಲಾಗುತ್ತದೆ ಎಂದು ಹೇಳಿದರು.

IND vs SA: ಐಪಿಎಲ್ ಸೆನ್ಸೆಷನ್ ಉಮ್ರಾನ್ ಮಲಿಕ್ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು?IND vs SA: ಐಪಿಎಲ್ ಸೆನ್ಸೆಷನ್ ಉಮ್ರಾನ್ ಮಲಿಕ್ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು?

ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಿಗೆ ತಂತ್ರಗಾರಿಕೆ ಮಾಡಲು ಮತ್ತು ಗೆಲುವಿಗೆ ಅವಕಾಶ ನೀಡದ ಟ್ರ್ಯಾಕ್‌ಗಳನ್ನು ಸಿದ್ಧಪಡಿಸಿದ್ದಕ್ಕಾಗಿ ಬಟ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸಿದರು. ಈ ವರ್ಷದ ಆರಂಭದಲ್ಲಿ ಪಾಕಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಸೋತಿತು ಮತ್ತು ಟೆಸ್ಟ್ ಪಂದ್ಯಗಳಿಗೆ ಬಳಸಲಾದ ಪಿಚ್‌ಗಳು ಸಾಕಷ್ಟು ಟೀಕೆಗೆ ಒಳಗಾಗಿದ್ದವು.

Former Cricketer Salman Butt Outraged Against Pakistan Cricket Board For Preparing Flat Tracks

"ಬಾಬರ್ ಅಜಮ್ ಈಗ ಸ್ವಲ್ಪ ಸಮಯದವರೆಗೆ ನಾಯಕರಾಗಿದ್ದಾರೆ ಮತ್ತು ಅವರು ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಯಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಉತ್ತಮ ಪ್ರದರ್ಶನ ನೀಡಿದ್ದು, ಅವರು ಮುಂದೆ ಸುಧಾರಿಸುತ್ತಾರೆ," ಎಂದರು.

"ನಾವು ಕಡಿಮೆ ಆಡುವ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ ನಾಯಕನ ಕೌಶಲ್ಯ ಮತ್ತು ತಂತ್ರಗಾರಿಕೆ ಸಾಮರ್ಥ್ಯವು ಹೆಚ್ಚು ಗೋಚರಿಸುತ್ತದೆ. ಟೆಸ್ಟ್ ಕ್ರಿಕೆಟ್ ನಾಯಕನ ಸಾಮರ್ಥ್ಯವನ್ನು ನೋಡಲು ಉತ್ತಮ ಅವಕಾಶವನ್ನು ನೀಡುತ್ತದೆ. ಆದರೆ ನಾವು ತವರಿನಲ್ಲಿ ಮಾಡುವ ಈ ರೀತಿಯ ಪಿಚ್‌ಗಳು ನಾಯಕನಿಂದ ಎಲ್ಲವನ್ನೂ ದೂರ ಮಾಡುತ್ತವೆ," ಎಂದು ಪಾಕ್ ಮಾಜಿ ಕ್ರಿಕೆಟಿಗ ಕಿಡಿಕಾರಿದರು.

ಐಸಿಸಿ ಮಹಿಳಾ ಏಕದಿನ ರ್‍ಯಾಂಕಿಂಗ್ ಬಿಡುಗಡೆ; ಅಗ್ರ ಹತ್ತರಲ್ಲಿ ಮಿಥಾಲಿ ರಾಜ್, ಸ್ಮೃತಿ ಮಂಧಾನಐಸಿಸಿ ಮಹಿಳಾ ಏಕದಿನ ರ್‍ಯಾಂಕಿಂಗ್ ಬಿಡುಗಡೆ; ಅಗ್ರ ಹತ್ತರಲ್ಲಿ ಮಿಥಾಲಿ ರಾಜ್, ಸ್ಮೃತಿ ಮಂಧಾನ

"ನೀವು ಪಿಚ್ ಅನ್ನು ನೋಡಿ ಸ್ಪಿನ್ನರ್‌ಗಳು ಆಡುತ್ತಾರೆ ಎಂದು ಹೇಳಬಹುದು. ಐದನೇ ದಿನದವರೆಗೆ ಫಲಿತಾಂಶವನ್ನು ಕಾಯ್ದಿರಿಸುವುದು ಕಷ್ಟ. ಇದು ನಾಯಕನ ಕೌಶಲ್ಯವನ್ನು ಪರೀಕ್ಷಿಸುವುದಿಲ್ಲ. ಪಾಕಿಸ್ತಾನವು ಈ ಹಿಂದೆಯೂ ತವರಿನಲ್ಲಿ ಸೋತಿದೆ, ಆದರೆ ಮುಂದೊಂದು ದಿನ ನಾವು ಪಂದ್ಯಗಳನ್ನು ಗೆಲ್ಲುತ್ತೇವೆ," ಎಂದು ಸಲ್ಮಾನ್ ಬಟ್ ಹೇಳಿದರು.

Former Cricketer Salman Butt Outraged Against Pakistan Cricket Board For Preparing Flat Tracks

ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ನಾಯಕನಿಗೆ ಉತ್ತಮ ಬೌಲಿಂಗ್ ದಾಳಿಯ ಅಗತ್ಯವಿದೆ ಎಂದ ಅವರು, ಪಾಕಿಸ್ತಾನವು ಉತ್ತಮ ಬೌಲರ್‌ಗಳನ್ನು ಹೊಂದಿದ್ದರೂ, ತವರಿನಿಂದ ದೂರದಲ್ಲಿ ಸತತವಾಗಿ ಗೆಲ್ಲಲು ಬೌಲರ್‌ಗಳಿಗೆ ಹೆಚ್ಚಿನ ಅನುಭವದ ಅಗತ್ಯವಿದೆ ಎಂದು ಸಲ್ಮಾನ್ ಬಟ್ ಅಭಿಪ್ರಾಯಪಟ್ಟರು.

Ind vs RSA ಸರಣಿಗೂ ಮುನ್ನ ನಮ್ಮ ಹುಡುಗರು ಫುಲ್ ಡ್ರಿಲ್ | Oneindia Kannada

"ನೀವು ನಾಯಕನ ಮಾತ್ರ ಮೇಲೆ ಜವಾಬ್ದಾರಿಯನ್ನು ಹಾಕಲು ಸಾಧ್ಯವಿಲ್ಲ. ಬಾಬರ್ ಅಜಮ್ ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದಾರೆ. ಆದರೆ ಬೌಲರ್‌ಗಳು ಅನನುಭವಿ ಮತ್ತು ಹೆಚ್ಚಿನ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿಲ್ಲ. ಶಾಹೀನ್ ವಿಶ್ವ ದರ್ಜೆಯ ಪ್ರತಿಭೆಯಾದರೂ, ಅವರು ಹೆಚ್ಚು ಅನುಭವವನ್ನು ಗಳಿಸಬೇಕಾಗಿದೆ. ಸ್ಪಿನ್ನರ್‌ಗಳ ವಿಷಯದಲ್ಲೂ ಇದೇ ಆಗಿದೆ. ಬ್ಯಾಟಿಂಗ್ ಮೂಲಕ ರನ್ ಮಾಡುವ ಸ್ಪಿನ್ನರ್ ನಮ್ಮ ಬಳಿ ಇಲ್ಲ," ಎಂದು ಸಲ್ಮಾನ್ ಬಟ್ ತಿಳಿಸಿದರು.

Story first published: Tuesday, June 7, 2022, 23:20 [IST]
Other articles published on Jun 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X