ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೆಮಿಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಪಾಕಿಸ್ತಾನ ನಾಯಕನಿಗೆ ವಾರ್ನಿಂಗ್ ಕೊಟ್ಟ ಅಫ್ರಿದಿ

Former Cricketer Shahid Afridi Warn Babar Azam After Pakistan Enter Semifinal

ಬಾಂಗ್ಲಾದೇಶದ ವಿರುದ್ಧದ ಪಂದ್ಯದ ನಂತರ ಮಾಜಿ ಕ್ರಿಕೆಟಿಗ ಆಲ್‌ರೌಂಡರ್, ಶಾಹಿದ್ ಅಫ್ರಿದಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್‌ಗೆ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದ ಟಿ20 ವಿಶ್ವಕಪ್ ಪಯಣ ಮುಗಿದೇಹೋಯಿತು ಎಂದುಕೊಂಡಿರುವಾಗ ನೆದರ್ಲ್ಯಾಂಡ್ಸ್ ಅದ್ಭುತವೊಂದನ್ನು ಮಾಡಿತು. ದಕ್ಷಿಣ ಆಫ್ರಿಕಾ ವಿರುದ್ಧ 13 ರನ್‌ಗಳ ಜಯ ಸಾಧಿಸುವ ಮೂಲಕ ನೆದರ್ಲ್ಯಾಂಡ್ಸ್ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು.

ಬಾಂಗ್ಲಾದೇಶದ ವಿರುದ್ದ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ಸೆಮಿಫೈನಲ್‌ಗೆ ಪ್ರವೇಶ ಪಡೆಯಿತು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ನವೆಂಬರ್ 9 ರಂದು ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಈ ಪಂದ್ಯ ನಡೆಯಲಿದೆ.

ಟಿ20 ವಿಶ್ವಕಪ್ 2022: ಸೂರ್ಯಕುಮಾರ್ ಈಗಾಗಲೇ ನನಗೆ ಸರಣಿ ಶ್ರೇಷ್ಠ ಆಟಗಾರ; ಗೌತಮ್ ಗಂಭೀರ್ಟಿ20 ವಿಶ್ವಕಪ್ 2022: ಸೂರ್ಯಕುಮಾರ್ ಈಗಾಗಲೇ ನನಗೆ ಸರಣಿ ಶ್ರೇಷ್ಠ ಆಟಗಾರ; ಗೌತಮ್ ಗಂಭೀರ್

ಅಡಿಲೇಡ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಪಾಕಿಸ್ತಾನವು ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದ ಅಂತಿಮ ತಂಡವಾಯಿತು. ಪಾಕಿಸ್ತಾನದ ಉತ್ತಮ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ 126 ರನ್‌ಗಳನ್ನು ಗಳಿಸಿತು.

127 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನವು ಐದು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ಸಾಧಿಸಿತು. ವರ್ಚುವಲ್ ಕ್ವಾರ್ಟರ್-ಫೈನಲ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನದ ಗೆಲುವಿನ ಬಳಿಕ ಮಾತನಾಡಿದ ಅಫ್ರಿದಿ, ಪಾಕಿಸ್ತಾನ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Former Cricketer Shahid Afridi Warn Babar Azam After Pakistan Enter Semifinal

ಆರಂಭಿಕರಾಗಿ ಕಣಕ್ಕಿಳಿಯದಂತೆ ಸಲಹೆ

ಪಾಕಿಸ್ತಾನದ ನಾಯಕ ಬಾಬರ್ ಅಜಂ ಸದ್ಯ ಟಿ20 ವಿಶ್ವಕಪ್‌ನಲ್ಲಿ ತಮ್ಮ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಆದ್ದರಿಂದ ಪಾಕಿಸ್ತಾನದ ಆರಂಭಿಕರಾಗಿ ಕಣಕ್ಕಿಳಿಯದಂತೆ ಶಾಹಿದ್ ಅಫ್ರಿದಿ ಬಾಭರ್ ಅಜಮ್‌ಗೆ ಸಲಹೆ ನೀಡಿದ್ದಾರೆ.

ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಶಾಹಿದ್ ಅಫ್ರಿದಿ, "ಮೊಹಮ್ಮದ್ ಹ್ಯಾರಿಸ್, ಶಹಬಾದ್ ಖಾನ್ ಈಗ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ, ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊಹಮ್ಮದ್ ಹ್ಯಾರಿಸ್ ರಿಜ್ವಾನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಬಗ್ಗೆ ಬಾಬರ್ ಅಜಂ ಚಿಂತಿಸಬೇಕು. ಮೂರನೇ ಕ್ರಮಾಂಕದಲ್ಲಿ ಬಾಬರ್ ಬ್ಯಾಟಿಂಗ್ ಮಾಡಬೇಕು. ತಂಡ ಗೆಲ್ಲಬೇಕಾದರೆ ನೀವುಕಟ್ಟುನಿಟ್ಟಾಗಿರಬೇಕು ಮತ್ತು ಸಮತೋಲಿತ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಹೊಂದಿಕೊಳ್ಳಬೇಕು" ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶಾಹೀನ್ ಅಫ್ರಿದಿ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಹಿದ್ ಅಫ್ರಿದಿ, ಪಾಕಿಸ್ತಾನದ ಬೌಲಿಂಗ್‌ ಸಾಕಷ್ಟು ಉತ್ತಮವಾಗಿದೆ ಎಂದು ಹೇಳಿದರು. ಹ್ಯಾರಿಸ್ ರೌಫ್, ಶದಾಬ್ ಖಾನ್ ಕೂಡ ಉತ್ತಮ ಬೌಲಿಂಗ್ ಮಾಡಿದರು ಎಂದು ಹೇಳಿದರು. ಇದು 2009ರಲ್ಲಿ ಟಿ20 ವಿಶ್ವಕಪ್‌ ಗೆದ್ದ ಪಾಕಿಸ್ತಾನ ತಂಡದ ಬೌಲಿಂಗ್‌ ರೀತಿ ಇದೆ ಎಂದು ಹೇಳಿದರು.

ಬಾಂಗ್ಲಾದೇಶದ ವಿರುದ್ಧ ವೇಗಿ ಅಫ್ರಿದಿ 4 ಓವರ್‌ಗಳಲ್ಲಿ 22 ರನ್‌ ನೀಡಿ 4 ವಿಕೆಟ್‌ ಪಡೆದರು. ಮೊಹಮ್ಮದ್ ಹ್ಯಾರಿಸ್ (31) ಮತ್ತು ಶಾನ್ ಮಸೂದ್ (24) ರನ್ ಗಳಿಸುವ ಮೂಲಕ ಪಾಕಿಸ್ತಾನವು ಬಾಂಗ್ಲಾದೇಶದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. ವೇಗಿ ಶಾಹೀನ್ ಅವರ ಬೌಲಿಂಗ್ ಪರಾಕ್ರಮಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Sunday, November 6, 2022, 19:41 [IST]
Other articles published on Nov 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X