ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ ಟಿ20 ಭವಿಷ್ಯದ ಬಗ್ಗೆ ಭಾರತದ ಮಾಜಿ ವೇಗಿ 'ದೊಡ್ಡ' ಹೇಳಿಕೆ

Former Indian Pacer Dodda Ganesh Makes Big statement On KL Rahuls T20 Future

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯು ಭಾರತೀಯ ಕ್ರಿಕೆಟ್ ತಂಡಕ್ಕೆ ಅನೇಕ ನಕರಾತ್ಮಕ ಮತ್ತು ಧನಾತ್ಮಕ ಅಂಶಗಳನ್ನು ನೀಡಿದೆ. 2022ರ ಟಿ20 ವಿಶ್ವಕಪ್‌ ಮುಂದೆ ಇರುವಂತೆ ಸ್ಥಾನಪಲ್ಲಟಗಳು ಮತ್ತು ತಂಡದ ಸಂಯೋಜನೆಗಳನ್ನು ಪ್ರಯೋಗ ಮಾಡಲಾಯಿತು.

ಇದೇ ವೇಳೆ ಭಾರತವು ದೀಪಕ್ ಹೂಡಾ ಮತ್ತು ಸೂರ್ಯಕುಮಾರ್ ಯಾದವ್‌ ಅವರಂತಹ ಯುವ ಆಟಗಾರರು ಅಗ್ರ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದರು.

ಟಿ20 ವಿಶ್ವಕಪ್‌ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪ್ರಶ್ನಿಸಿದವರಿಗೆ ಜಾಡಿಸಿದ ಬಾಲ್ಯದ ಕೋಚ್ಟಿ20 ವಿಶ್ವಕಪ್‌ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪ್ರಶ್ನಿಸಿದವರಿಗೆ ಜಾಡಿಸಿದ ಬಾಲ್ಯದ ಕೋಚ್

ಮೊದಲನೆಯದಾಗ ದೀಪಕ್ ಹೂಡಾ ನಂಬರ್ 3ರಲ್ಲಿ ಅತ್ಯುತ್ತಮ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ನಂತರ ಸೂರ್ಯಕುಮಾರ್ ಯಾದವ್‌ ಭಾನುವಾರ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶತಕ ಗಳಿಸಿದರು.

ಟಿ20 ವಿಶ್ವಕಪ್‌ಗೆ ಸ್ಥಾನ ಭದ್ರ

ಟಿ20 ವಿಶ್ವಕಪ್‌ಗೆ ಸ್ಥಾನ ಭದ್ರ

ಮುಂದೆ ಬರುವ ಪ್ರಮುಖ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ ಸರಣಿಗಳಿಗೆ ಈಗಲೇ ತಮ್ಮ ಸ್ಥಾನ ಭದ್ರ ಮಾಡಿದ್ದಾರೆ. ಆದಾಗ್ಯೂ ಟಿ20 ವಿಶ್ವಕಪ್‌ಗೆ ಕೇವಲ ಮೂರು ತಿಂಗಳುಗಳು ಬಾಕಿ ಇರುವಾಗ ಭಾರತ ತನ್ನ ಖಾಯಂ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರನ್ನು ಕಳೆದುಕೊಳ್ಳುತ್ತಿದೆ.

ಸದ್ಯ ಶಸ್ತ್ರಚಿಕಿತ್ಸೆಯ ನಂತರ ಕೆಎಲ್ ರಾಹುಲ್ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಮೂರು ಐಪಿಎಲ್‌ಗಳಲ್ಲಿ ಅವರು 600ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ಯಾವುದೇ ಆವೃತ್ತಿಗಳಲ್ಲಿ ಅವರ ಸ್ಟ್ರೈಕ್ ರೇಟ್ 140.00 ದಾಟಲು ಸಾಧ್ಯವಾಗಲಿಲ್ಲ.

ಕೆಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ಸಿಡಿಯಬೇಕಿದೆ

ಟಿ20 ಪಂದ್ಯಗಳಲ್ಲಿ ದೀಪಕ್ ಹೂಡಾ ಮತ್ತು ಸೂರ್ಯಕುಮಾರ್ ಯಾದವ್ ತೋರುತ್ತಿರುವ ರೀತಿಯ ಪ್ರದರ್ಶನದಿಂದ, ಮಾಜಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ದೊಡ್ಡ ಗಣೇಶ್ ಅವರು ಕೆಎಲ್ ರಾಹುಲ್ ತಮ್ಮ ಸಾಕ್ಸ್ ಅನ್ನು ಎಳೆದು, ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ ಎಂದು ಭಾವಿಸಿದ್ದಾರೆ.

"ದೀಪಕ್ ಹೂಡಾ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ಉದ್ದೇಶದಿಂದ ಟಿ20 ಬ್ಯಾಟಿಂಗ್ ಅನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ತೋರಿಸಿದ್ದಾರೆ. ಕೆಎಲ್ ರಾಹುಲ್ ಕೂಡ 2016/17 ರಲ್ಲಿ ಆಡಿದ ರೀತಿಯಲ್ಲಿ ತಮ್ಮ ಸಾಕ್ಸ್ ಅನ್ನು ಎಳೆದುಕೊಂಡು ಬ್ಯಾಟಿಂಗ್ ಮಾಡುವ ಸಮಯ ಬಂದಿದೆ. ಅವರು ಐಪಿಎಲ್‌ನಲ್ಲಿ ಮಾಡುವಂತೆ ನಿಧಾನಗತಿ ಆಟವನ್ನು ಮುಂದುವರಿಸಿದರೆ, ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾರೆ," ಎಂದು ಭಾರತಕ್ಕಾಗಿ ನಾಲ್ಕು ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯವನ್ನು ಆಡಿರುವ ಕನ್ನಡಿಗ ದೊಡ್ಡ ಗಣೇಶ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಟಾಪ್ ಗೇರ್‌ನಲ್ಲಿ ಬ್ಯಾಟ್ ಮಾಡುವ ಬ್ಯಾಟ್ಸ್‌ಮನ್‌ಗಳು

ಟಾಪ್ ಗೇರ್‌ನಲ್ಲಿ ಬ್ಯಾಟ್ ಮಾಡುವ ಬ್ಯಾಟ್ಸ್‌ಮನ್‌ಗಳು

"ಪೃಥ್ವಿ ಶಾ, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್‌ನಂತಹ ಟಾಪ್ ಗೇರ್‌ನಲ್ಲಿ ಬ್ಯಾಟ್ ಮಾಡುವ ಈ ರೀತಿಯ ಬ್ಯಾಟ್ಸ್‌ಮನ್‌ಗಳು ಆಧುನಿಕ ದಿನದ ಟಿ20 ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ ಸಮಯ ನೀಡುವ ಅವಶ್ಯಕತೆಯಿದೆ. ಇದನ್ನು ಆಯ್ಕೆಗಾರರು ಗಮನಿಸಬೇಕು," ಎಂದು ಮತ್ತೊಂದು ಟ್ವೀಟ್‌ನಲ್ಲಿ ದೊಡ್ಡ ಗಣೇಶ್ ಬರೆದಿದ್ದಾರೆ.

ಟಿ20 ಸರಣಿಯಿಂದ ಹೊರಗುಳಿದಿರುವ ಕೆಎಲ್ ರಾಹುಲ್

ಟಿ20 ಸರಣಿಯಿಂದ ಹೊರಗುಳಿದಿರುವ ಕೆಎಲ್ ರಾಹುಲ್

ಇತ್ತೀಚೆಗೆ ಜರ್ಮನಿಯಲ್ಲಿ ತೊಡೆಸಂದು ಗಾಯಕ್ಕೆ ಕೆಎಲ್ ರಾಹುಲ್ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇನ್ನೂ ಒಂದೆರಡು ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿಯುವ ನಿರೀಕ್ಷೆಯಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಟಿ20 ಸರಣಿಯಿಂದ ಹೊರಗುಳಿದಿರುವ ಕೆಎಲ್ ರಾಹುಲ್, ಕೆಲವು ವರ್ಷಗಳಲ್ಲಿ ಹೊಟ್ಟೆಯ ಕೆಳಭಾಗಕ್ಕೆ ಸಂಬಂಧಿಸಿದ ಫಿಟ್‌ನೆಸ್ ಸಮಸ್ಯೆಗಳು, ತೊಡೆಸಂದು ಮತ್ತು ಮಂಡಿರಜ್ಜು ಗಾಯಗಳು ಸೇರಿದಂತೆ ಪುನರಾವರ್ತಿತವಾಗುತ್ತಿವೆ.

Story first published: Tuesday, July 12, 2022, 16:46 [IST]
Other articles published on Jul 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X