ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಲ್ಕು ಹೊಸ ದೇಶಗಳಿಗೆ ಏಕದಿನ ಕ್ರಿಕೆಟ್ rankingನಲ್ಲಿ ಸ್ಥಾನ

four more nations added to the icc cricket ranking

ಬೆಂಗಳೂರು, ಜೂನ್ 1: ಇದೀಗ ತಾನೆ ಬೆಳೆಯುತ್ತಿರುವ ನೇಪಾಳ, ಸ್ಕಾಟ್ಲೆಂಡ್, ನೆದರ್‌ಲೆಂಡ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡಗಳು ಐಸಿಸಿ ಏಕದಿನ rankingನಲ್ಲಿ ಸ್ಥಾನ ಪಡೆದಿದೆ.

ಐಸಿಸಿಯು ತನ್ನ ಏಕದಿನ ranking ರಾಷ್ಟ್ರಗಳನ್ನು ವಿಸ್ತರಣೆ ಮಾಡಿದ್ದು, ಅದು ಜೂನ್ 1ರಿಂದ ಜಾರಿಗೊಂಡಿದೆ.

ಇನ್ನು ಮುಂದೆ ಈ ನಾಲ್ಕೂ ತಂಡಗಳು ಪಟ್ಟಿಯಲ್ಲಿ ಇರುವ ಉಳಿದ ತಂಡಗಳೊಂದಿಗೆ ಸರಣಿಗಳನ್ನು ಆಡಲಿವೆ. ಈ ತಂಡಗಳು ಐಸಿಸಿಯ ranking ಪಟ್ಟಿಯಲ್ಲಿ ರೇಟಿಂಗ್ ಪಾಯಿಂಟ್‌ಗಳನ್ನು ಪಡೆದುಕೊಳ್ಳಲಿವೆ.

ಕೊಹ್ಲಿಯ ಬ್ಯಾಟಿಗೂ, ರಾಯುಡು ಬ್ಯಾಟಿಂಗೂ ಏನದು ಲಿಂಕು?ಕೊಹ್ಲಿಯ ಬ್ಯಾಟಿಗೂ, ರಾಯುಡು ಬ್ಯಾಟಿಂಗೂ ಏನದು ಲಿಂಕು?

ಕಳೆದ ವರ್ಷ ನಡೆದ ಐಸಿಸಿ ವರ್ಲ್ಡ್‌ ಕ್ರಿಕೆಟ್‌ ಲೀಗ್‌ನಲ್ಲಿ 13 ತಂಡಗಳ ಜತೆ ಸೆಣಸುವ ಅವಕಾಶ ಪಡೆದಿದ್ದ ನೆದರ್‌ಲೆಂಡ್, ಏಕದಿನ ಕ್ರಿಕೆಟ್ ಮಾನ್ಯತೆಯನ್ನು ಪಡೆದುಕೊಂಡಿತ್ತು.

ಐಸಿಸಿ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ (2018) ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿರುವ ಸ್ಕಾಟ್ಲೆಂಡ್, ನೇಪಾಳ ಮತ್ತು ಯುಎಇಗಳು ಸಹ ಏಕದಿನ ಮಾನ್ಯತೆ ಗಳಿಸಿಕೊಳ್ಳುವಲ್ಲಿ ಸಫಲವಾಗಿವೆ.

12 rank ಪಡೆದಿರುವ ಐರ್ಲೆಂಡ್ ತಂಡಕ್ಕಿಂತ 10 ಪಾಯಿಂಟ್‌ಗಳನ್ನು ಪಡೆದಿರುವ ಸ್ಕಾಟ್ಲೆಂಡ್ ತಂಡ 28 ಪಾಯಿಂಟ್‌ಗಳೊಂದಿಗೆ 13ನೇ ಸ್ಥಾನದಲ್ಲಿದೆ.

ಬಿಕೆಸಿ ನೆಟ್ಸ್ ನಲ್ಲಿ ವಿರಾಟ್ ಕೊಹ್ಲಿ ಭರ್ಜರಿ ತಾಲೀಮುಬಿಕೆಸಿ ನೆಟ್ಸ್ ನಲ್ಲಿ ವಿರಾಟ್ ಕೊಹ್ಲಿ ಭರ್ಜರಿ ತಾಲೀಮು

18 ಪಾಯಿಂಟ್‌ಗಳೊಂದಿಗೆ ಯುಎಇ 14ನೇ ಸ್ಥಾನದಲ್ಲಿದೆ. ನೆದರ್‌ಲೆಂಡ್ 13 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರೆ, ನೇಪಾಳದ ಖಾತೆ ಇನ್ನೂ 'ಶೂನ್ಯ'ದಲ್ಲಿದೆ. ಈ ಎರಡೂ ತಂಡಗಳು ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ ಬಳಿಕ ಪಟ್ಟಿಯಲ್ಲಿ ಪಾಯಿಂಟ್‌ಗಳನ್ನು ಪಡೆದುಕೊಳ್ಳಲಿದೆ.

ಹೊಸ ತಂಡಗಳ ಸೇರ್ಪಡೆಯಿಂದ ಟೆಸ್ಟ್ ಮಾನ್ಯತೆ ಪಡೆದ 12 ದೇಶಗಳ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪಟ್ಟಿಯಲ್ಲಿ 125 ಅಂಕ ಪಡೆದಿರುವ ಇಂಗ್ಲೆಂಡ್ ತಂಡ ಮೊದಲ ಸ್ಥಾನದಲ್ಲಿದ್ದರೆ, ಭಾರತ 122 ಅಂಕಗಳೊಂದಿಗೆ ಎರಡನೆಯ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

Story first published: Friday, June 1, 2018, 16:46 [IST]
Other articles published on Jun 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X