ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ ಎರಡರಲ್ಲೂ ದ್ವಿಶತಕ ಸಿಡಿಸಿದ ನಾಲ್ವರು ಬ್ಯಾಟ್ಸ್‌ಮನ್‌ಗಳು

Virender sehwag

ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಕಾಲದವರೆಗೂ ಉತ್ತಮ ಪ್ರದರ್ಶನ ನೀಡುತ್ತಾ ಸಾಗುವುದು ಸುಲಭದ ಮಾತಲ್ಲ. ಬ್ಯಾಟ್ಸ್‌ಮನ್ ಆಗಿ ತಾಳ್ಮೆಯುತ ಆಟ ಜೊತೆಗೆ ಟೆಕ್ನಿಕಲಿ ಸೌಂಡ್ ಆಗಿರುವ ಆಟಗಾರನು ಟೆಸ್ಟ್ ಕ್ರಿಕೆಟ್ ಫಾರ್ಮೆಟ್‌ನಲ್ಲಿ ಹೆಚ್ಚು ಯಶಸ್ಸು ಸಾಧಿಸುತ್ತಾನೆ.

ನಾವು ಅನೇಕ ಆಟಗಾರರನ್ನು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸ್ಟಾರ್ ಆಗಿ ಮಿಂಚಿರುವುದನ್ನ ಕಂಡಿದ್ದೇವೆ. ಆದ್ರೆ ಅದೇ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಆ ಆಟಗಾರರು ಯಶಸ್ಸು ಕಾಣಲಿಲ್ಲ. ಅದೇ ರೀತಿಯಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಿದ್ದ ಕೆಲವು ಆಟಗಾರರು ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಮುಗ್ಗರಿಸಿದ್ದಾರೆ.

ಆದ್ರೆ ಈ ಎರಡೂ ಫಾರ್ಮೆಟ್‌ನಲ್ಲಿ ಮಿಂಚಿರುವ ಕೆಲವು ಆಟಗಾರರು ಸಹ ಇದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ರನ್‌ಗಳ ಮಳೆಯನ್ನೇ ಹರಿಸಿರುವ ಆಟಗಾರರು ಏಕದಿನ ಫಾರ್ಮೆಟ್‌ನಲ್ಲೂ ಅಷ್ಟೇ ಪ್ರಮಾಣದಲ್ಲಿ ಅಬ್ಬರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 400, 300, 200ರನ್ ಕಲೆಹಾಕಿರುವ ಆಟಗಾರರನ್ನ ನೋಡಿದ್ದೇವೆ. ಆದ್ರೆ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿರುವ ಕೆಲವೇ ಆಟಗಾರರನ್ನ ಕ್ರಿಕೆಟ್ ಜಗತ್ತು ಕಂಡಿದೆ.

ಹೀಗಿರುವಾಗ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲೆರಡಲ್ಲೂ ಉತ್ತಮ ಪ್ರದರ್ಶನದ ಜೊತೆಗೆ ಉಭಯ ಫಾರ್ಮೆಟ್‌ನಲ್ಲಿ ದ್ವಿಶತಕ ದಾಖಲಿಸಿರುವ ನಾಲ್ವರು ಆಟಗಾರರನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ದಾಖಲಿಸಿದ ಮೊದಲ ಆಟಗಾರ ಅಂದ್ರೆ ಅದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. 24 ಫೆಬ್ರವರಿ 2010ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 147 ಎಸೆತಗಳಲ್ಲಿ ಅಜೇಯ 200 ರನ್ ದಾಖಲಿಸಿದ ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗನಾಗಿ ಹೊರಹೊಮ್ಮಿದರು.

ಇನ್ನು ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಆರು ಬಾರಿ ದ್ವಿಶತಕ ದಾಖಲಿಸಿರುವ ಸಾಧನೆ ಮಾಡಿದ್ದಾರೆ.

ಕ್ರಿಸ್‌ ಗೇಲ್‌

ಕ್ರಿಸ್‌ ಗೇಲ್‌

ವೆಸ್ಟ್ ಇಂಡೀಸ್‌ ದೈತ್ಯ ಕ್ರಿಸ್‌ಗೇಲ್ ಈ ಸಾಧನೆ ಮಾಡಿದ ಮತ್ತೊಬ್ಬ ಬ್ಯಾಟರ್ ಆಗಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಕ್ರಿಸ್‌ಗೇಲ್ 2015ರ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ ದ್ವಿಶತಕ ಸಿಡಿಸಿ ಅಬ್ಬರಿಸಿದ್ರು. 147 ಎಸೆತಗಳಲ್ಲಿ 215 ರನ್ ಸಿಡಿಸಿದ ಕ್ರಿಸ್‌ಗೇಲ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 16 ಭರ್ಜರಿ ಸಿಕ್ಸರ್‌ಗಳಿದ್ದವು.

ಕ್ರಿಸ್‌ಗೇಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡು ಬಾರಿ ತ್ರಿಶತಕ ಕೂಡ ಸಿಡಿಸಿದ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ 333 ರನ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 317ರನ್ ದಾಖಲಿಸಿರುವ ಗೇಲ್, ನ್ಯೂಜಿಲೆಂಡ್ ವಿರುದ್ಧ 204 ರನ್ ಸಹ ಕಲೆಹಾಕಿದ್ದಾರೆ.

'ಅಪ್ಪನ ಕೈಲಾಗದ್ದನ್ನ ಮಗ ಮಾಡಿ ತೋರಿಸಿದ': 23 ವರ್ಷಗಳ ಬಳಿಕ ಕೋಚ್ ಚಂದ್ರಕಾಂತ್ ಪಂಡಿತ್ ಕನಸು ನನಸು

ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್

ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ 2011ರ ಡಿಸೆಂಬರ್‌ನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ಸಿಡಿಸಿ ಅಬ್ಬರಿಸಿದ್ರು. ಸಚಿನ್ ಬಳಿಕ ಈ ಸಾಧನೆ ಮಾಡಿದ ಎರಡನೇ ಕ್ರಿಕೆಟಿಗ ಎಂಬ ಬಿರುದು ಸಹ ಇವರಿಗಿದೆ. 149 ಎಸೆತಗಳಲ್ಲಿ 219 ರನ್ ಸಿಡಿಸಿದ ಸೆಹ್ವಾಗ್ ಇನ್ನಿಂಗ್ಸ್‌ನಲ್ಲಿ 25 ಬೌಂಡರಿ ಮತ್ತು ಏಳು ಅಮೋಘ ಸಿಕ್ಸರ್‌ಗಳಿದ್ದವು.

ಗೇಲ್ ರೀತಿಯಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡು ಬಾರಿ ತ್ರಿಶತಕ ದಾಖಲಿಸಿರುವ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ವಿರುದ್ಧ 309, ದಕ್ಷಿಣ ಆಫ್ರಿಕಾ ವಿರುದ್ಧ 319ರನ್ ಸಿಡಿಸಿದ್ದಾರೆ. ಆದ್ರೆ ವೀರೇಂದ್ರ ಸೆಹ್ವಾಗ್ ಮೂರು ಬಾರಿ ತ್ರಿಶತಕ ಸಿಡಿಸಿದ ವಿಶ್ವದಾಖಲೆಯನ್ನ ಕೇವಲ ಏಳು ರನ್‌ಗಳಲ್ಲಿ ಮಿಸ್ ಮಾಡಿಕೊಂಡರು. 2009ರಲ್ಲಿ ಶ್ರೀಲಂಕಾ ವಿರುದ್ಧ ವೀರೂ 293ರನ್‌ಗೆ ವಿಕೆಟ್ ಒಪ್ಪಿಸಿದ್ರು.

ಭಾರತ vs ಇಂಗ್ಲೆಂಡ್: ನಾಯಕನಿಗೆ ಶಾಕ್ ನೀಡಿದ ಕೊರೊನಾ: ರೋಹಿತ್ ಸ್ಥಾನದಲ್ಲಿ ಕಣಕ್ಕಿಳಿಯಬಲ್ಲ 3 ಆಟಗಾರರು

ಟೆಸ್ಟ್ ಕ್ರಿಕೆಟ್ ಆಡೋರಿಗೆ ಮತ್ತೊಂದು ಆಘಾತ !! | *Cricket | OneIndia Kannada
ರೋಹಿತ್ ಶರ್ಮಾ

ರೋಹಿತ್ ಶರ್ಮಾ

ರೋಹಿತ್ ಶರ್ಮಾ ರಾಂಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೊದಲೇ, ಏಕದಿನ ಕ್ರಿಕೆಟ್ ಫಾರ್ಮೆಟ್‌ನಲ್ಲಿ ಮೂರು ದ್ವಿಶತಕ ಸಿಡಿಸಿರುವ ಸಾಧನೆ ಮಾಡಿದ್ದರು. ಅದ್ರಲ್ಲೂ 13 ನವೆಂಬರ್ 2014ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆಯ 264ರನ್‌ಗಳನ್ನ ಸಿಡಿಸಿರುವುದನ್ನ ಯಾರೂ ಮರೆಯಲು ಸಾಧ್ಯವಿಲ್ಲ.

ಮೂರು ವರ್ಷಗಳ ನಂತರ 13 ಡಿಸೆಂಬರ್ 2017ರಂದು ಶ್ರೀಲಂಕಾ ವಿರುದ್ಧವೇ ರೋಹಿತ್ ಮತ್ತೊಂದು ದ್ವಿಶತಕ ದಾಖಲಿಸಿದ್ರು. ಇವೆರಡೂ ದ್ವಿಶತಕಕ್ಕೂ ಮೊದಲು 2 ನವೆಂಬರ್ 2013ರಂದು ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಮೊದಲ ಏಕದಿನ ದ್ವಿಶತಕದ ಸಾಧನೆ ಮಾಡಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಪರ ರೋಹಿತ್ 158 ಎಸೆತಗಳಲ್ಲಿ 209ರನ್ ದಾಖಲಿಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ರೋಹಿತ್ ಶರ್ಮಾ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಓಪನರ್ ಆಗಿ ಸಿಕ್ಕ ಅವಕಾಶವನ್ನ ಎರಡೂ ಕೈನಲ್ಲಿ ಬಾಚಿಕೊಂಡರು. ಸರಣಿಯುದ್ದಕ್ಕೂ ಅದ್ಭುತ ಆಟವಾಡಿದ ರೋಹಿತ್, ರಾಂಚಿ ಟೆಸ್ಟ್‌ನಲ್ಲಿ 255 ಎಸೆತಗಳನ್ನ ಎದುರಿಸಿ 212ರನ್ ಬಾರಿಸಿದ್ರು.

Story first published: Monday, June 27, 2022, 10:29 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X