ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಚ್ ರಮೇಶ್ ಪರ ಹರ್ಮನ್‌ಪ್ರೀತ್, ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್!

Harmanpreet, Smriti bat for Ramesh Powar’s continuation as coach

ನವದೆಹಲಿ, ಡಿಸೆಂಬರ್ 4: ಭಾರತದ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ರಮೇಶ್ ಪೊವಾರ್ ಅವರನ್ನು ಕೆಳಗಿಳಿಸಲು ಬಿಸಿಸಿಯ ತಯಾರಿಯಲ್ಲಿರುವುದು ಗೊತ್ತಾಗುತ್ತಲೇ ತಂಡದ ಇಬ್ಬರು ಅನುಭವಿ ಆಟಗಾರ್ತಿಯರು ಬಹಿರಂಗವಾಗೇ ರಮೇಶ್ ಪೊವಾರ್ ಪರ ಬ್ಯಾಟಿಂಗ್ ಶುರು ಮಾಡಿದ್ದಾರೆ.

ಐಪಿಎಲ್ 2019ಗಾಗಿ ಆಟಗಾರರ ಹರಾಜು ದಿನಾಂಕ, ಸ್ಥಳ ಘೋಷಣೆಐಪಿಎಲ್ 2019ಗಾಗಿ ಆಟಗಾರರ ಹರಾಜು ದಿನಾಂಕ, ಸ್ಥಳ ಘೋಷಣೆ

ಸೋಮವಾರ (ಡಿಸೆಂಬರ್ 3) ಹರ್ಮನ್ ಪ್ರೀತ್ ಕೌರ್ ಸದ್ಯ ಕೋಚ್ ಸ್ಥಾನದಲ್ಲಿರುವ ರಮೇಶ್ ಪೊವಾರ್ ಅವರೇ ಮುಂದೆಯೂ ಕೋಚ್ ಆಗಿ ಮುಂದುವರೆಯಬೇಕು ಎಂದಿದ್ದರು. ಈಗಿನ ಮಾಹಿತಿಯಂತೆ ಕೌರ್ ಮತ್ತು ಸ್ಮೃತಿ ಮಂಧಾನ ಪೊವಾರ್ ಪರ ಬಿಸಿಸಿಐಗೆ ಇ-ಮೇಲೆ ರವಾನಿಸಿದ್ದಾರೆ.

ಭಯೋತ್ಪಾದನೆಯ ಸುಳ್ಳು ಕಥೆ ಸೃಷ್ಟಿಸಿ ಬಂಧಿತನಾದ ಖವಾಜಾ ಸಹೋದರಭಯೋತ್ಪಾದನೆಯ ಸುಳ್ಳು ಕಥೆ ಸೃಷ್ಟಿಸಿ ಬಂಧಿತನಾದ ಖವಾಜಾ ಸಹೋದರ

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶುಕ್ರವಾರ (ನವೆಂಬರ್ 30) ಸೂಚನೆ ಹೊರಡಿಸಿ, ಭಾರತದ ಮಹಿಳಾ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು. ಅದರ ಬೆನ್ನಲ್ಲೇ ಈ ಪ್ರಕ್ರಿಯೆಗಳಾಗಿವೆ.

ವಿವಾದದ ಕಿಡಿ

ವಿವಾದದ ಕಿಡಿ

ಐಸಿಸಿ ಮಹಿಳಾ ವಿಶ್ವ ಟಿ20 ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ನಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರಿಗೆ ಆಡಲು ಅವಕಾಶ ನೀಡಿರಲಿಲ್ಲ. ಈ ಪಂದ್ಯದಲ್ಲಿ ಭಾರತ ಹೀನಾಯ ಸೋಲನುಭವಿಸಿತ್ತು. ಇದು ವಿವಾದದ ಹುಟ್ಟಿಗೆ ಕಾರಣವಾಗಿತ್ತು. ಈಗ ಕೌರ್ ಮತ್ತು ಮಂಧಾನ ರಮೇಶ್ ಪೊವಾರ್ ಬೆಂಬಲಕ್ಕೆ ನಿಂತಿರುವುದು ಮತ್ತೆ ವಿವಾದವನ್ನು ಕೆದಕಿದೆ.

ರಮೇಶ್ ನಮಗೆ ಸ್ಫೂರ್ತಿ

ರಮೇಶ್ ನಮಗೆ ಸ್ಫೂರ್ತಿ

ಬಿಸಿಸಿಐಗೆ ಇ-ಮೇಲ್ ಕಳಿಸಿರುವ ನಾಯಕಿ ಕೌರ್ ಮತ್ತು ಉಪನಾಯಕಿ ಮಂಧಾನ, 'ರಮೇಶ್ ನಮ್ಮ ಆಟವನ್ನು ಸುಧಾರಿಸಿರುವುದು ಮಾತ್ರವಲ್ಲ ನಮಗವರು ಸ್ಫೂರ್ತಿಯಾಗಿದ್ದಾರೆ. ಅವರನ್ನು ಕೋಚ್ ಜವಾಬ್ದಾರಿಯಿಂದ ಕೆಳಗಿಳಿಸುವ ನಿರ್ಧಾರವನ್ನು ಕೈ ಬಿಡಬೇಕು' ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಬಿಸಿಸಿಐಗೆ ಪೊವಾರ್ ಜವಾಬ್ದಾರಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸುವ ಅವಕಾಶವಿದೆ. ಇದನ್ನು ಅರಿತಿರುವ ಇಬ್ಬರೂ ಆಟಗಾರ್ತಿಯರು ಬಿಸಿಸಿಐಯನ್ನು ಕೋರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪೊವಾರ್ ಬೇಕೇಬೇಕು

ಪೊವಾರ್ ಬೇಕೇಬೇಕು

'ಪೊವಾರ್ ಅವರು ಇಡೀ ಭಾರತ ವನಿತಾ ಕ್ರಿಕೆಟ್ ತಂಡದ ಚಿತ್ರಣವನ್ನೇ ಬದಲಿಸಿದ್ದಾರೆ. ಅದು ತಾಂತ್ರಿಕವಾಗಿ ಮತ್ತು ತಾರ್ಕಿಕವಾಗಿಯೂ ಹೌದು. ಗೆಲ್ಲುವ ಮನಸ್ಥಿತಿಯನ್ನು ನಮ್ಮೊಳಗೆ ತುಂಬಿದವರು ಅವರೇ. ಅವರು ಕೋಚ್ ಆಗಿ ಮುಂದುವರೆಯಬೇಕು' ಎಂದು ಬಿಸಿಸಿಐಗೆ ಕಳಿಸಿರುವ ಇ ಮೇಲ್‌ನಲ್ಲಿ ಕೌರ್-ಮಂಧಾನ ಬರೆದಿದ್ದಾರೆ ಎನ್ನಲಾಗಿದೆ.

ಮಿಥಾಲಿಯನ್ನೇಕೇ ಆಡಿಸಿಲ್ಲ?

ಮಿಥಾಲಿಯನ್ನೇಕೇ ಆಡಿಸಿಲ್ಲ?

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಮಿಥಾಲಿಯನ್ನು ಆಡಿಸದಿರುವುದಕ್ಕೆ ಕಾರಣ ನೀಡಿದ್ದ ಪೊವಾರ್, ಮಿಥಾಲಿ ಸ್ವ ಹಿತಾಸಕ್ತಿಗಾಗಿ ಆಡುತ್ತಾರೆ. ನಮ್ಮ ಮೇಲೆ ಒತ್ತಡ ಹೇರುತ್ತಾರೆ, ನಮಗೆ ಬೆದರಿಕೆ ಒಡ್ಡುತ್ತಾರೆ ಎಂದು ದೂರಿದ್ದರು. ಆದರೆ ಇದಕ್ಕೆ ತಿರುಗೇಟು ನೀಡಿದ್ದ ಮಿಥಾಲಿ, ನಾನು ಅಭ್ಯಾಸ ಮಾಡುವಾಗ ಕೋಚ್ ನನ್ನ ಜೊತೆ ಬೇಕೆಂದೇ ಮಾತನಾಡದೆ ನನ್ನನ್ನು ಅವಮಾನಿಸಿದ್ದರು' ಎಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐ, ಕೋಚ್ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಲು ಕರೆ ನೀಡಿತ್ತು. ಆದರೆ ಈಗ ಕೌರ್-ಮಂಧಾನ ಬಿಸಿಸಿಐಗೆ ಕಳುಹಿಸಿರುವ ಮೇಲ್ ಪರಿಣಾಮವೇನಾದೀತೋ ಗೊತ್ತಿಲ್ಲ.

Story first published: Tuesday, December 4, 2018, 16:02 [IST]
Other articles published on Dec 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X