ಐಪಿಎಲ್ 2022ರ ಹರಾಜಿನಲ್ಲಿ ಕೃನಾಲ್ ಪಾಂಡ್ಯನನ್ನು ಖರೀದಿಸಬಹುದಾದ 3 ತಂಡಗಳು

ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬನಾದ ಕೃನಾಲ್ ಪಾಂಡ್ಯ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಪ್ರಸ್ತುತ ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ 100 ರನ್ ಗಳಿಸಿ, 3 ವಿಕೆಟ್‍ಗಳನ್ನು ಪಡೆದುಕೊಳ್ಳುವುದರ ಮೂಲಕ ಸಾಧಾರಣ ಎನಿಸಿಕೊಂಡಿದ್ದಾರೆ. ಈ ಬಾರಿ ನಿರೀಕ್ಷೆಗೆ ತಕ್ಕಂಥ ಆಟವನ್ನಾಡದ ಕೃನಾಲ್ ಪಾಂಡ್ಯನ ಹಿಂದಿನ ಆಟಗಳನ್ನು ಕಡೆಗಣಿಸುವಂತಿಲ್ಲ. ಮುಂಬೈ ಇಂಡಿಯನ್ಸ್ ತಂಡದ ಪರ ಕೃನಾಲ್ ಪಾಂಡ್ಯ ಹಲವಾರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ.

ಯುಎಇಯಲ್ಲಿ ಐಪಿಎಲ್ ಮುಂದುವರೆದಾಗ ಈ 3 ತಂಡಗಳು ಕಂಗಾಲಾಗುವುದು ಖಚಿತ!

ಈ ಬಾರಿಯ ಐಪಿಎಲ್ ಟೂರ್ನಿ ಆರಂಭವಾಗುವ ಮುನ್ನ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೃನಾಲ್ ಪಾಂಡ್ಯ ಉತ್ತಮ ಪ್ರದರ್ಶನ ನೀಡಿ ಮಿಂಚಿದರು.

ಧೋನಿಗೆ ಅವಕಾಶ ನೀಡಲು ಗಂಗೂಲಿ ಒಪ್ಪಿರಲಿಲ್ಲ, ಹತ್ತು ದಿನಗಳ ಕಾಲ ಒತ್ತಾಯ ಮಾಡಿದ್ದೆ: ಮಾಜಿ ಕ್ರಿಕೆಟಿಗ

ಮುಂಬೈ ಇಂಡಿಯನ್ಸ್ ತಂಡದ ಪರ ಈ ಹಿಂದೆ ಸಾಕಷ್ಟು ಉತ್ತಮ ಪ್ರದರ್ಶನಗಳನ್ನು ನೀಡಿದ್ದರೂ ಸಹ ಮುಂಬರುವ ಐಪಿಎಲ್ ಹರಾಜಿನಲ್ಲಿ ಕೃನಾಲ್ ಪಾಂಡ್ಯನನ್ನು ತಂಡದಲ್ಲಿ ಉಳಿಸಿಕೊಳ್ಳದೆ ಕೈಬಿಡುವ ಸಾಧ್ಯತೆಯಿದೆ. ಹೌದು ಕೇವಲ 5 ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ಆಯ್ಕೆ ಇರುವುದರಿಂದ ಮುಂಬೈನ ಕೃನಾಲ್ ಪಾಂಡ್ಯನನ್ನು ಉಳಿಸಿಕೊಳ್ಳದೆ ತಂಡದಿಂದ ಕೈಬಿಡಬಹುದು. ಹೀಗೇನಾದರೂ ಕೃನಾಲ್ ಪಾಂಡ್ಯನನ್ನು ಮುಂಬೈ ತಂಡ ಬಿಟ್ಟುಕೊಟ್ಟರೆ ಈ ಕೆಳಕಂಡ ತಂಡಗಳು ಆತನನ್ನು ಖರೀದಿಸುವ ಸಾಧ್ಯತೆಗಳಿವೆ.

1. ರಾಯಲ್ ಚಾಲೆಂಜರ್ಸ್ ಬೆಂಗಳೂರು

1. ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಾಷಿಂಗ್ಟನ್ ಸುಂದರ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಹೀಗಾಗಿ ಮುಂದಿನ ಹರಾಜಿನಲ್ಲಿ ಸುಂದರ್‌ನನ್ನು ತಂಡದಿಂದ ಕೈಬಿಡುವ ಸಾಧ್ಯತೆಯಿದ್ದು, ತಂಡಕ್ಕೆ ಒಂದೊಳ್ಳೆ ಆಲ್‌ರೌಂಡರ್‌ನ ಅಗತ್ಯವಿದ್ದು ಕೃನಾಲ್ ಪಾಂಡ್ಯನನ್ನು ಖರೀದಿಸುವ ಸಾಧ್ಯತೆಯಿದೆ.

2. ಡೆಲ್ಲಿ ಕ್ಯಾಪಿಟಲ್ಸ್

2. ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬರುವ ಐಪಿಎಲ್ ಹರಾಜಿನಲ್ಲಿ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್‌ನ್ನು ಉಳಿಸಿಕೊಳ್ಳಲಾಗದೆ ತಂಡದಿಂದ ಕೈಬಿಡುವ ಸಾಧ್ಯತೆಯಿದ್ದು, ತಂಡಕ್ಕೆ ಭಾರತದ ಆಲ್‌ರೌಂಡರ್‌ನ ಅಗತ್ಯತೆ ಬೀಳಲಿದ್ದು ಕೃನಾಲ್ ಪಾಂಡ್ಯನನ್ನು ಖರೀದಿಸುವ ಸಾಧ್ಯತೆಯಿದೆ.

3. ಸನ್ ರೈಸರ್ಸ್ ಹೈದರಾಬಾದ್

3. ಸನ್ ರೈಸರ್ಸ್ ಹೈದರಾಬಾದ್

ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟವನ್ನಾಡುವ ಆಟಗಾರರಿಲ್ಲದೆ ಸುಮಾರು 2 ವರ್ಷಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಪರಿತಪಿಸುತ್ತಿದೆ. ಹೀಗಾಗಿ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುವ ಆಲ್‌ರೌಂಡರ್‌ ಆಟಗಾರನ ಅಗತ್ಯತೆ ತುಂಬಾ ಇದ್ದು ಕೃನಾಲ್ ಪಾಂಡ್ಯಾನನ್ನು ಖರೀದಿಸುವ ಸಾಧ್ಯತೆಯಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, June 2, 2021, 20:48 [IST]
Other articles published on Jun 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X