ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾರಾ, ತೆಂಡೂಲ್ಕರ್‌ಗೆ ಸಡ್ಡು ಹೊಡೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

Hitman Rohit has better average as opening batsman than Sachin and Lara

ಬೆಂಗಳೂರು, ಜುಲೈ 02: 2015ರ ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಭಾರತ ತಂಡದ ರೋಹಿತ್‌ ಶರ್ಮಾ ಅಗ್ರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಇದಕ್ಕೆ ಅವರ ಬ್ಯಾಟಿಂಗ್‌ ದಾಖಲೆಗಳೇ ಸಾಕ್ಷಿ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಆರಂಭಿಕ ಬ್ಯಾಟ್ಸ್‌ಮನ್‌ ಆಗಿ 32 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ರೋಹಿತ್‌, 2015ರ ಬಳಿಕ 15 ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ, ಅದಕ್ಕೂ ಮೀರಿ 17 ಶತಕಗಳನ್ನು ಬಾರಿಸಿದ್ದಾರೆ ಎಂಬುದು ವಿಶೇಷ. ಇನ್ನು ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲೂ ಅಬ್ಬರಿಸುತ್ತಿರುವ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಮಂಗಳವಾರ ತಮ್ಮ 4ನೇ ಶತಕ ಸಿಡಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಟೀಮ್‌ ಇಂಡಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು (230) ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ಬರೆದ ರೋಹಿತ್‌, ವಿಶ್ವ ಕ್ರಿಕೆಟ್‌ನಲ್ಲಿ ಸೀಮಿತ ಓವರ್‌ಗಳ ಮಾದರಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಭಾರಿ ಯಶಸ್ಸು ಕಂಡ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಬಾಂಗ್ಲಾ ವಿರುದ್ಧ ಮಂಗಳವಾರ 92 ಎಸೆತಗಳಲ್ಲಿ 7 ಫೋರ್‌, 5 ಸಿಕ್ಸರ್‌ ಸಹಿತ 104 ರನ್‌ಗಳನ್ನು ಬಾರಿಸಿದ್ದರು.

ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

ಅಂದಹಾಗೆ ತಮ್ಮ ವೃತ್ತಿ ಬದುಕಿನ ಆರಂಭಿಕ ದಿನಗಳಲ್ಲಿ ಸಚಿನ್‌ ತೆಂಡೂಲ್ಕರ್‌ ಮತ್ತು ವೀರೇಂದ್ರ ಸೆಹ್ವಾಗ್‌ ಅವರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳು ಓಪನರ್‌ಗಳಾಗಿ ಆಡುತ್ತಿದ್ದ ಕಾರಣ, ಅನಿವಾರ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ರೋಹಿತ್‌ ಯಶಸ್ಸು ಕಂಡಿದ್ದು ಬೆರಳೆಣಿಕೆಯ ಪಂದ್ಯಗಳಲ್ಲಿ ಮಾತ್ರ. ಅದರಲ್ಲೂ ದೊಡ್ಡ ಇನಿಂಗ್ಸ್‌ ಆಡುವ ಅವಕಾಶ ಅವರಿಗೆ ಲಭ್ಯವಾಗುತ್ತಿರಲಿಲ್ಲ.

ಆದರೆ, ಭಾರತ ತಂಡದ ಪರ ಆರಂಭಿಕರಾಗಿ ಆಟವಾಡುವ ಅವಕಾಶ ಸಿಕ್ಕ ಬಳಿಕ ರೋಹಿತ್‌ ತಮ್ಮ ವಿಶ್ವರೂಪ ಅನಾವರಣ ಪಡಿಸಿದ್ದಾರೆ. ಒಡಿಐ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ರೋಹಿತ್‌ ಅವರದ್ದು.

ಮ್ಯಾಥ್ಯೂಸ್‌ ಬೌಲಿಂಗ್‌ ಬಗ್ಗೆ ನಾಯಕ ಕರುಣಾರತ್ನೆ ಹೇಳಿದ್ದಿದು!ಮ್ಯಾಥ್ಯೂಸ್‌ ಬೌಲಿಂಗ್‌ ಬಗ್ಗೆ ನಾಯಕ ಕರುಣಾರತ್ನೆ ಹೇಳಿದ್ದಿದು!

ಇನ್ನು ಏಕದಿನ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್ಮನ್‌ ಆಗಿ ಆಡಿದವರ ಪೈಕಿ ಬ್ಯಾಟಿಂಗ್‌ ಸರಾಸರಿ ಲೆಕ್ಕಾಚಾರದಲ್ಲಿ ರೋಹಿತ್‌ ಶರ್ಮಾ, ಕ್ರಿಕೆಟ್‌ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಲಿಟ್ಲ್‌ ಮಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಹಾಗೂ ವೆಸ್ಟ್‌ ಇಂಡೀಸ್‌ನ ತಾರೆ ಬ್ರಿಯಾನ್‌ ಲಾರಾ ಅವರಂತಹ ದಿಗ್ಗಜರಿಗೆ ಸಡ್ಡು ಹೊಡೆದಿದ್ದಾರೆ.

50ಕ್ಕೂ ಹೆಚ್ಚು ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿದ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್‌ ಸರಾಸರಿಯಲ್ಲಿ ರೋಹಿತ್‌ ಶರ್ಮಾ ಬರೋಬ್ಬರಿ 57.88ರ ಸರಾಸರಿ ದಾಖಲೆ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಹಶೀಮ್‌ ಆಮ್ಲಾ (49.89) ರೋಹಿತ್‌ಗೆ ಹತ್ತಿರ ಇರುವ ಆಟಗಾರನಾಗಿದ್ದಾರೆ. ಆದರೆ, ಸಚಿನ್‌ ತೆಂಡೂಲ್ಕರ್‌ (48.29), ಬ್ರಿಯಾನ್‌ ಲಾರಾ (46.08) ಮತ್ತು ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್‌ (45.04) ಅವರಿಗಿಂತಲೂ ರೋಹಿತ್‌ ಭಾರಿ ಮುಂದಿದ್ದಾರೆ.

ದಾಖಲೆಗಳ ಸುರಿಮಳೆಗೆ ಸಾಕ್ಷಿಯಾಗಲಿದೆ ಭಾರತ vs ಬಾಂಗ್ಲಾದೇಶ ಪಂದ್ಯ!ದಾಖಲೆಗಳ ಸುರಿಮಳೆಗೆ ಸಾಕ್ಷಿಯಾಗಲಿದೆ ಭಾರತ vs ಬಾಂಗ್ಲಾದೇಶ ಪಂದ್ಯ!

ಇದರೊಂದಿಗೆ ಜಾಗತಿಕ ಕ್ರಿಕೆಟ್‌ನಲ್ಲಿ ಅದರಲ್ಲೂ ಸೀಮಿತ ಓವರ್‌ಗಳ ಮಾದರಿಯಲ್ಲಿ ರೋಹಿತ್‌ ಶರ್ಮಾ ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.

Story first published: Tuesday, July 2, 2019, 18:55 [IST]
Other articles published on Jul 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X