ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 8 ಆನ್ಲೈನ್ ಟಿಕೆಟ್ ಖರೀದಿ ಎಲ್ಲಿ? ಹೇಗೆ?

By Mahesh

ಬೆಂಗಳೂರು, ಏ.1: ಐಸಿಸಿ ವಿಶ್ವಕಪ್ ಹುಟ್ಟು ಹಾಕಿದ ಕ್ರೇಜ್ ಮೀರುವಂತೆ ಐಪಿಎಲ್ 8 ಭರ್ಜರಿಯಾಗಿ ನಡೆಸಲು ಬಿಸಿಸಿಐ ಮುಂದಾಗಿದೆ. ದೇಶಿ ಟ್ವೆಂಟಿ 20 ಟೂರ್ನಿ ಇದು ಬರೀ ಕ್ರಿಕೆಟ್ ಆಟವಲ್ಲ, ದೇಶದ ಕ್ರಿಕೆಟ್ ಹಬ್ಬ ಎಂದು ಸೋನಿ ಟಿವಿ ಥರಾವರಿ ಜಾಹೀರಾತುಗಳನ್ನು ಜನರ ಮುಂದಿಡುತ್ತಿದೆ. ಆದರೆ, ಮೈದಾನದಲ್ಲಿ ಸಿಗುವ ಅಸಲಿ ಮಜಾ ಸವಿಯಲು ಟಿಕೆಟ್ ಬೇಕೇ ಬೇಕು. ಈಗ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸುವುದು ಹೇಗೆ ಎಂಬ ವಿವರ ಇಲ್ಲಿದೆ..

ಏ.8ಕ್ಕೆ ಆರಂಭಗೊಳ್ಳಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ 8ನೇ ಆವೃತ್ತಿಯ ಹೊಡಿ ಬಡಿ ಕ್ರಿಕೆಟ್ ಆಟ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಏ.7ರಂದೇ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಲ್ಲಿಂದ ಮುಂದಕ್ಕೆ 2 ತಿಂಗಳ ಕ್ರಿಕೆಟ್ ಹಬ್ಬ ಆರಂಭವಾಗಲಿದೆ ಮೇ.24ರ ತನಕ ಟೂರ್ನಿ ಸಾಗಲಿದೆ. [ಐಪಿಎಲ್ 7 : ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ]

How and Where to buy IPL 8 tickets online

ಏ.8ರಂದು ನಡೆಯಲಿರುವ ಮೊದಲ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಎದುರಿಸಲಿದೆ.

ಟಿಕೆಟ್ ಬುಕ್ಕಿಂಗ್ ಶುರು: ಟಿಕೆಟ್ ಬೆಲೆ 500 ರು ನಿಂದ 3,500 ರು ತನಕ (ತೆರಿಗೆ ಸಹಿತ) ಇದೆ. ಆನ್ ಲೈನ್ ನಲ್ಲಿ ಟಿಕೆಟ್ ಜೀನಿ.ಇನ್, ಬುಕ್ ಮೈ ಶೋ.ಕಾಂನಲ್ಲಿ ಟಿಕೆಟ್ ಖರೀದಿಸಬಹುದು. ಈಗಾಗಲೇ ಈ ವೆಬ್ ಸೈಟ್ ಗಳು ಟಿಕೆಟ್ ಬುಕ್ಕಿಂಗ್ ಆರಂಭಿಸಿವೆ. ಟಿಕೆಟ್ ಜೀನಿ ವೆಬ್ ಸೈಟ್ ನಲ್ಲಿ ಸದ್ಯಕ್ಕೆ ಕೆಕೆಆರ್ ಹಾಗೂ ಆರ್ ಸಿಬಿ ಪಂದ್ಯಗಳ ಟಿಕೆಟ್ ಲಭ್ಯವಿದೆ. [ಐಪಿಎಲ್ 8: ಯುವರಾಜ್ ಸ್ಟಾರ್; ಶ್ರೇಯಸ್, ಕಾರ್ಯಪ್ಪ ಅಚ್ಚರಿ]

ಕೆಕೆಆರ್, ಮುಂಬೈ ಇಂಡಿಯನ್ಸ್, ಕಿಂಗ್ಸ್ XI ಪಂಜಾಬ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದೆಹಲಿ ಡೇರ್ ಡೆವಿಲ್ಸ್ ತಂಡಗಳ ಪಂದ್ಯಗಳ ಟಿಕೆಟ್ ಗೆ ಬೇಡಿಕೆ ಹೆಚ್ಚಿದೆ. [ಹೊಸ ಇನ್ನಿಂಗ್ಸ್ ಆರಂಭಿಸಿದ ರಿಕಿ ಪಾಂಟಿಂಗ್]

ಒಟ್ಟಾರೆ ಏ.8ರಿಂದ ಸುಮಾರು 47 ದಿನಗಳ ಕಾಲ 60 ಪಂದ್ಯಗಳನ್ನು ಮನೆಯಲ್ಲೇ ಕುಳಿತು ಸೋನಿ ಸಿಕ್ಸ್ ಮೂಲಕ ವೀಕ್ಷಿಸಬಹುದಾಗಿದೆ. ಮೈದಾನದಲ್ಲಿ ಪಂದ್ಯ ವೀಕ್ಷಿಸಲು ಆನ್ ಲೈನ್ ಮೂಲಕ ಈಗಲೇ ಬುಕ್ ಮಾಡಿಕೊಂಡು ಪೆಪ್ಸಿ ಐಪಿಎಲ್ 2015ಹೆಸರಲ್ಲಿ ಹಬ್ಬ ಆಚರಿಸಿ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X