ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್ ಪಾಂಡ್ಯರನ್ನು ವಿಶ್ವಶ್ರೇಷ್ಠ ಆಲ್‌ ರೌಂಡರ್ ಮಾಡಬಲ್ಲೆ: ರಝಾಕ್

I can make Hardik Pandya one of the best all-rounders-Abdul Razzaq

ಲಂಡನ್, ಜೂನ್ 28: ಹಾರ್ದಿಕ್ ಪಾಂಡ್ಯ ಉತ್ತಮ ಆಲ್ ರೌಂಡರ್. ಆದರೆ ಅವರ ಬ್ಯಾಟಿಂಗ್ ಕೌಶಲಗಳಲ್ಲಿ ಇನ್ನೊಂದಿಷ್ಟು ಬದಲಾವಣೆಗಳಾಗಬೇಕಿದೆ. ಪಾಂಡ್ಯ ಅವರನ್ನು ವಿಶ್ವಶ್ರೇಷ್ಠ ಆಲ್ ರೌಂಡರ್ ಆಗಿಸುವಲ್ಲಿ ನಾನು ನೆರವಾಗಲಬಲ್ಲೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಬ್ದುಲ್ ರಝಾಕ್ ಹೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಗುರುವಾರ (ಜೂನ್ 27) ಮ್ಯಾನ್ಚೆಸ್ಟರ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಂಡ್ಯ 46 ರನ್‌ ಬಾರಿಸಿದ್ದರು. ಅಲ್ಲದೆ ಎಂಎಸ್ ಧೋನಿ ಜೊತೆ 70 ರನ್ ಜೊತೆಯಾಟವನ್ನೂ ನೀಡಿದ್ದರು. ಇದರ ಫಲವಾಗಿ ಭಾರತ 7 ವಿಕೆಟ್‌ಗೆ 268 ರನ್ ಬಾರಿಸಿತ್ತು. ವಿರಾಟ್ ಕೊಹ್ಲಿ ಬಳಗ ಈ ಪಂದ್ಯವನ್ನು 125 ರನ್‌ಗಳಿಂದ ಗೆದ್ದುಕೊಂಡಿತ್ತು ಕೂಡ.

ನಾನಾಗಿದ್ರೆ ಪಂತ್‌ನನ್ನು ನಂ.4ರಲ್ಲಿ ಆಡಿಸುತ್ತಿದ್ದೆ: ಭಾರತದ ಮಾಜಿ ನಾಯಕನಾನಾಗಿದ್ರೆ ಪಂತ್‌ನನ್ನು ನಂ.4ರಲ್ಲಿ ಆಡಿಸುತ್ತಿದ್ದೆ: ಭಾರತದ ಮಾಜಿ ನಾಯಕ

ವಿಂಡೀಸ್ ಎದುರು ಪಾಂಡ್ಯ ಬೌಲಿಂಗ್‌ನಲ್ಲೂ ಮಿಂಚಿದ್ದರು. ಆರಂಭಿಕ ಬ್ಯಾಟ್ಸ್ಮನ್ ಸುನಿಲ್ ಆ್ಯಂಬ್ರಿಸ್ ಅವರ ವಿಕೆಟ್ ಹಾರ್ದಿಕ್‌ಗೆ ಲಭಿಸಿತ್ತು. ಆದರೆ ರಝಾಕ್ ಅವರು ಪಾಂಡ್ಯ ಅವರ ಬ್ಯಾಟಿಂಗ್ ಗಮನಿಸಿದ್ದರಂತೆ. ಬ್ಯಾಟಿಂಗ್‌ ವೇಳೆ ಪಾಂಡ್ಯ ಕೆಲವೊಂದು ತಪ್ಪುಗಳನ್ನು ಮಾಡಿದ್ದರಂತೆ.

'ಇವತ್ತು (ಜೂನ್ 27) ಪಾಂಡ್ಯ ಅವರನ್ನು ನಾನು ತುಂಬಾ ಹತ್ತಿರದಿಂದ ಗಮನಿಸಿದೆ. ಚೆಂಡನ್ನು ಹೊಡೆಯುವ ಹೊತ್ತು ಅವರ ಬಾಡಿ ಬ್ಯಾಲನ್ಸ್ ಅನ್ನು ಗಮನಿಸಿದೆ. ಅಲ್ಲಿ ಬಹಳಷ್ಟು ತಪ್ಪುಗಳಿತ್ತು. ಪಾಂಡ್ಯ ಅವರ ಪಾದಗಳ ಚಲನೆಯೂ ನಾಳೆ ಅವರ ಹಿನ್ನೆಡೆಗೆ ಕಾರಣವಾಗಬಲ್ಲದು' ಎಂದು ಅಬ್ದುಲ್ ಟ್ವಿಟರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಕಿವೀಸ್‌ ವಿರುದ್ಧ ಪಾಕ್‌ ಗೆದ್ದ ಬಳಿಕ ಸಾನಿಯಾ ಮಿರ್ಜಾ ಹೇಳಿದ್ದೇನು?ಕಿವೀಸ್‌ ವಿರುದ್ಧ ಪಾಕ್‌ ಗೆದ್ದ ಬಳಿಕ ಸಾನಿಯಾ ಮಿರ್ಜಾ ಹೇಳಿದ್ದೇನು?

'ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ನಲ್ಲಿ ನಾನು ಪಾಂಡ್ಯ ಅವರಿಗೆ ತರಬೇತಿ ನೀಡಬಲ್ಲೆ. ತಪ್ಪುಗಳನ್ನು ಸರಿಪಡಿಸಿ ಅವರನ್ನು ವಿಶ್ವಶ್ರೇಷ್ಠ ಆಲ್ ರೌಂಡರನ್ನಾಗಿ ಮಾಡಬಲ್ಲೆ. ಪಾಂಡ್ಯಾರನ್ನು ಉತ್ತಮ ಆಲ್ ರೌಂಡರ್ ಆಗಿಸಲು ಬಿಸಿಸಿಐ ಬಯಸಿದ್ದರೆ, ನಾನು ತರಬೇತಿ ನೀಡಲು ಸದಾ ಸಿದ್ಧನಿದ್ದೇನೆ' ಎಂದು ರಝಾನ್ ಹೇಳಿದ್ದಾರೆ.

Story first published: Friday, June 28, 2019, 15:29 [IST]
Other articles published on Jun 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X