ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್

Naveen ul haq

ಟೀಂ ಇಂಡಿಯಾದ ಟ್ರಂಪ್‌ಕಾರ್ಡ್‌ ಬೌಲರ್‌, ವಿಶ್ವದ ಅಗ್ರ ಬೌಲರ್‌ಗಲ್ಲಿ ಒಬ್ಬನಾದ ಜಸ್ಪ್ರೀತ್ ಬುಮ್ರಾ ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ ಸಕ್ಸಸ್‌ಫುಲ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಬೌಲಿಂಗ್ ಮಾಡುವ ರೀತಿ ಅಥವಾ ನಿರ್ಣಾಯಕ ಹಂತಗಳಲ್ಲಿ ವಿಕೆಟ್ ಕಬಳಿಸುವ ರೀತಿ ಎಂತದ್ದೇ ಬಲಿಷ್ಠ ಎದುರಾಳಿಯನ್ನು ದಿಗ್ಭ್ರಮೆಗೊಳಿಸುವಂತಿವೆ.

ಬುಮ್ರಾ ಬೌಲಿಂಗ್ ಪರಾಕ್ರಮದಿಂದಾಗಿ ಟೀಂ ಇಂಡಿಯಾ ಅನೇಕ ಪಂದ್ಯಗಳನ್ನ ಗೆದ್ದುಕೊಂಡಿದೆ. ಹೀಗಾಗಿಯೇ ಅನೇಕ ಯುವ ಬೌಲರ್‌ಗಳು ಬುಮ್ರಾರಿಂದ ಬೌಲಿಂಗ್ ಸಲಹೆಗಳನ್ನು ಪಡೆಯಲು ಇಚ್ಚಿಸುತ್ತಾರೆ.

ನಾನು ಬ್ಯಾಟಿಂಗ್ ಮಾಡಬಲ್ಲೇ ಎಂದು BCCI ಕಾಲೆಳೆದ ಜಯದೇವ್ ಉನಾದ್ಕಟ್: ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗದ ಕುರಿತು ಅಸಮಾಧಾನ ನಾನು ಬ್ಯಾಟಿಂಗ್ ಮಾಡಬಲ್ಲೇ ಎಂದು BCCI ಕಾಲೆಳೆದ ಜಯದೇವ್ ಉನಾದ್ಕಟ್: ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗದ ಕುರಿತು ಅಸಮಾಧಾನ

ಅಫ್ಘಾನಿಸ್ತಾನದ ಯುವ ವೇಗಿ ನವೀನ್-ಉಲ್-ಹಕ್ ಕೂಡ ಆ ವರ್ಗಕ್ಕೆ ಸೇರಿದವರು. ಏಸ್ ಬೌಲರ್ ಬುಮ್ರಾ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ನವೀನ್, ತಮ್ಮ ವೃತ್ತಿಜೀವನದಲ್ಲಿ ಬುಮ್ರಾ ಅವರ ಅರ್ಧದಷ್ಟು ಬೌಲರ್ ಆಗಿದ್ದರೂ ಸಹ ತೃಪ್ತರಾಗುತ್ತೇನೆ ಎಂದು ಹೇಳಿದರು. ಮೈದಾನದಲ್ಲಿ ಕಠಿಣ ಪರಿಸ್ಥಿತಿಯಲ್ಲೂ ಅತ್ಯಂತ ತಾಳ್ಮೆಯನ್ನು ಕಾಯ್ದುಕೊಳ್ಳುವ ರೀತಿ ಅವರನ್ನು ಮುಂಚೂಣಿ ಬೌಲರ್‌ ಆಗಿಸಿದೆ ಎಂದಿದ್ದಾನೆ.

''ನಾನು ಅವರನ್ನು ಬೌಲರ್ ಆಗಿ ಮೆಚ್ಚುತ್ತೇನೆ. ಕಠಿಣ ಪರಿಸ್ಥಿತಿಯಲ್ಲಿಯೂ ಅವರು ತಾಳ್ಮೆಯಿಂದ ತನ್ನನ್ನು ತಾನು ಕಂಟ್ರೋಲ್ ಮಾಡುವ ರೀತಿ ಕಲಿಯಲು ಉತ್ತಮ ಉದಾಹರಣೆಯಾಗಿದೆ. ಅವರ ಬೌಲಿಂಗ್‌ನಲ್ಲಿ ನಾನು ಶೇಕಡಾ 50 ರಷ್ಟು ಬೌಲರ್ ಆಗಿದ್ದರೆ ನನಗೆ ಸಂತೋಷವಾಗುತ್ತದೆ. ಅವರು ಸರಳವಾಗಿ ಅದ್ಭುತವಾಗಿದ್ದಾರೆ " ಎಂದು 22 ವರ್ಷದ ನವೀನ್-ಉಲ್-ಹಕ್ ನ್ಯೂಸ್ 9 ಜೊತೆಗಿನ ಸಂಭಾಷಣೆಯಲ್ಲಿ ಹೇಳಿದರು.

ಕುತೂಹಲಕಾರಿ ವಿಷಯವೆಂದ್ರೆ, ನವೀನ್ ಅವರ ಬೌಲಿಂಗ್ ಶೈಲಿ ಬುಮ್ರಾ ಅವರನ್ನು ಹೋಲುತ್ತದೆ. ಹೀಗಾಗಿ 2021 ರ ಟಿ20 ವಿಶ್ವಕಪ್‌ನಲ್ಲಿ ಅವರ ಕಡೆಗೆ ಹೆಚ್ಚಿನ ಗಮನ ಇಡಲಾಗಿತ್ತು. ಅಫ್ಘಾನ್ ವೇಗಿ ನವೀನ್ , ಬುಮ್ರಾರನ್ನ ನೋಡಿಯೇ ಈ ಶೈಲಿಯನ್ನ ರೂಪಿಸಿಕೊಂಡಿರಬಹುದು ಎಂದು ಅನೇಕರು ನಂಬುತ್ತಾರೆ. ಆದ್ರೆ ಈ ಹೋಲಿಕೆಯು ಕೇವಲ ಕಾಕತಾಳೀಯವಾಗಿದೆ ಎಂದು ನವೀನ್ ಹೇಳಿದ್ದಾರೆ.

''ಅಪ್ಪ, ನಾನು ಭಾರತದ ಪರ ಆಡ್ಬೇಕು'' : ಮಗನ ಮಹಾದಾಸೆಯನ್ನ ಬಿಚ್ಚಿಟ್ಟ ಉಮ್ರಾನ್ ಮಲಿಕ್ ತಂದೆ''ಅಪ್ಪ, ನಾನು ಭಾರತದ ಪರ ಆಡ್ಬೇಕು'' : ಮಗನ ಮಹಾದಾಸೆಯನ್ನ ಬಿಚ್ಚಿಟ್ಟ ಉಮ್ರಾನ್ ಮಲಿಕ್ ತಂದೆ

"ಜಸ್ಪ್ರೀತ್ ಬುಮ್ರಾ ಅವರಂತೆಯೇ ನಾನು ಬೌಲಿಂಗ್ ಆಕ್ಷನ್ ಅನ್ನು ಹೊಂದಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ಈ ಟಿ20 ವಿಶ್ವಕಪ್‌ಗೂ ಮುನ್ನ ಯಾರೂ ಇದನ್ನು ಎತ್ತಿ ತೋರಿಸಿರಲಿಲ್ಲ. ಪಂದ್ಯದ ಸಮಯದಲ್ಲಿ ದೊಡ್ಡ ಸ್ಕ್ರೀನ್ ಮೇಲೆ ನಮ್ಮ ಬೌಲಿಂಗ್ ಕ್ರಮವನ್ನು ಹೋಲಿಸಲಾಗುತ್ತಿರುವುದನ್ನು ನಾನು ನೋಡಿದೆ ಮತ್ತು ನನಗೆ ''ವಾವ್'' ಎನ್ನುವಂತಾಯ್ತು. ನಿಜವಾಗಿಯೂ ಸ್ವಲ್ಪ ಸ್ವಾಮ್ಯತೆ ಇದೆ'' ಎಂದು ಯುವ ಬೌಲರ್ ಹೇಳಿಕೆ ನೀಡಿದ್ದಾರೆ.

'' ಆ ಪಂದ್ಯದ ನಂತರ, ಜನರು ಆ ಬಗ್ಗೆ ನನ್ನನ್ನು ಕೇಳಲು ಪ್ರಾರಂಬಿಸಿದರು. ಆದ್ರೆ ಬೌಲಿಂಗ್ ಆ್ಯಕ್ಷನ್ ಸ್ವಾಭಾವಿಕವಾಗಿ ಬರುತ್ತದೆ ಎಂದು ನಾಣು ಭಾವಿಸುತ್ತೇನು. ಆದ್ರೆ ಹೋಲಿಕೆಯು ಸಂಪೂರ್ಣ ಕಾಕತಾಳೀಯವಾಗಿದೆ'' ಎಂದು ಅವರು ಹೇಳಿದ್ದಾರೆ.

ನವೀನ್ ಉಲ್ ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಯಶಸ್ವಿ ಪ್ರದರ್ಶನ ನೀಡುವಲ್ಲಿ ವಿಫಲಗೊಂಡ್ರು. ಸ್ಥಿರ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ವಿಫಲಗೊಂಡ ನವೀನ್ 9ಕ್ಕಿಂತ ಹೆಚ್ಚು ಎಕಾನಮಿಯಲ್ಲಿ ಬೌಲಿಂಗ್ ಮಾಡಿ ಐದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು.

Story first published: Saturday, November 13, 2021, 22:34 [IST]
Other articles published on Nov 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X