ಜಗತ್ತಿನ ಮನಗೆದ್ದ ಈ ಉತ್ಸಾಹಿ 'ಯುವ' ಅಭಿಮಾನಿ ಯಾರು ಗೊತ್ತೇ?

ICC World Cup 2019 : ಅಜ್ಜಿಗೆ ಭರ್ಜರಿ ಆಫರ್ ನೀಡಿದ ಮಹೀಂದ್ರ..! | Oneindia Kannada
icc cricket world cup 2019 india bangladesh charulata patel fan virat kohli

ಲಂಡನ್, ಜುಲೈ 3: ಬಾಂಗ್ಲಾದೇಶದ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತೀವ್ರ ಹೋರಾಟದ ಬಳಿಕ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ ಭಾರತದ ಪರ ಮಿಂಚಿದ್ದರು.

ಆದರೆ, ಇಡೀ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳು, ಕ್ಯಾಮೆರಾಮನ್‌ಗಳ ಗಮನ ಇದ್ದಿದ್ದು ಕ್ರಿಕೆಟಿಗರಿಗಿಂತಲೂ ಜೀವನೋತ್ಸಾಹ ತೋರಿಸುತ್ತಿದ್ದ 'ನವ ತರುಣಿ' ಅಭಿಮಾನಿಯ ಮೇಲೆ. ಸಾಮಾನ್ಯವಾಗಿ ಕ್ರಿಕೆಟ್ ಅಥವಾ ಇತರೆ ಕ್ರೀಡೆಗಳಲ್ಲಿ ಕ್ಯಾಮೆರಾಗಳ ಕಣ್ಣು ವಿಶಿಷ್ಟ ಉಡುಗೆ ತೊಟ್ಟವರು, ಸೆಲೆಬ್ರಿಟಿಗಳು ಅಥವಾ ಸುಂದರ ಯುವತಿಯರತ್ತ ತಿರುಗುವುದು ಸಹಜ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು, ತನ್ನ ನೆರಿಗೆಗಟ್ಟಿದ ಕೆನ್ನೆಯ ಮೇಲೆ ಭಾರತದ ತ್ರಿವರ್ಣಗಳನ್ನು ಬಳಸಿಕೊಂಡು, ತುತ್ತೂರಿ ಊದುತ್ತಾ ತಂಡವನ್ನು ಹುರಿದುಂಬಿಸುತ್ತಿದ್ದ ಇಳಿವಯಸ್ಸಿನ ಮಹಿಳೆ.

ಮೈಕಲ್‌ ವಾನ್‌ ಮನ ಗೆದ್ದ ಟೀಮ್‌ ಇಂಡಿಯಾದ ಅಭಿಮಾನಿ!

80 ವರ್ಷ ಮೀರಿದ್ದರೂ ನವ ತರುಣಿಯ ಉತ್ಸಾಹದಲ್ಲಿ ತಂಡಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಈ ಅಜ್ಜಿಯ ಹೆಸರು ಚಾರುಲತಾ ಪಟೇಲ್. ಪದೇ ಪದೇ ಟೆಲಿವಿಷನ್ ಹಾಗೂ ಕ್ರೀಡಾಂಗಣದ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದ ಈ ಅಜ್ಜಿಯ ಹುರುಪು ಕಂಡು ಇಡೀ ಕ್ರಿಕೆಟ್ ಜಗತ್ತು ಫಿದಾ ಆಗಿತ್ತು. ವ್ಹೀಲ್‌ ಚೇರ್‌ನಲ್ಲಿ ಬಂದಿದ್ದ ಅಜ್ಜಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಂದಹಾಗೆ ಈ ಅಜ್ಜಿ ಮೂಲ ಭಾರತೀಯರಾದರೂ ಅವರು ಭಾರತದಲ್ಲಿ ಹುಟ್ಟಿದವರಲ್ಲ. ಭಾರತದಲ್ಲಿ ವಾಸಿಸುತ್ತಲೂ ಇಲ್ಲ. ಆದರೆ, ಮಾತೃದೇಶದೆಡೆಗಿನ ಪ್ರೀತಿ ಅವರ ವಂಶವಾಹಿಯಲ್ಲಿ ಬಂದಂತಿದೆ.

ಭಾರತದ ಹೊಸ ಚಿಯರ್ ಲೀಡರ್

ಭಾರತದ ಹೊಸ ಚಿಯರ್ ಲೀಡರ್

ಕ್ಯಾಮೆರಾಮನ್ ಅಭಿಮಾನಿಗಳ ಗ್ಯಾಲರಿಯತ್ತ ಕ್ಯಾಮೆರಾ ತಿರುಗಿಸಿದ್ದಾಗ ಈ ಅಜ್ಜಿಯ ಕ್ರಿಕೆಟ್ ಪ್ರೀತಿ ಮತ್ತು ಜೀವನೋಲ್ಲಾಸ ವೀಕ್ಷಕ ವಿವರಣೆ ಮಾಡುತ್ತಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಗಮನಕ್ಕೆ ಬಂದಿತ್ತು. ಆಗಲೇ ಅವರು ಭಾರತದ 'ಚಿಯರ್ ಲೀಡರ್'ಅನ್ನು ಗುರುತಿಸಿ ಅವರ ಉತ್ಸಾಹವನ್ನು ಹೊಗಳಿದ್ದರು. ಇದರಿಂದ ಕ್ಯಾಮೆರಾಮನ್ ಪದೇ ಪದೇ ಅವರತ್ತ ಫೋಕಸ್ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿ ದೀಪಿಕಾ ಘೋಶ್ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದು ಸುದ್ದಿಯಾಗಿದ್ದರು. ಪರದೆ ಮೇಲೆ ಕಾಣಿಸಿಕೊಂಡ ಕೆಲ ಹೊತ್ತಿನಲ್ಲಿಯೇ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಪತ್ತೆ ಹಚ್ಚಿ ಸಾವಿರಾರು ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಈಗ ಈ ಅಜ್ಜಿ ಕೂಡ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಅಜ್ಜಿ ಆಶೀರ್ವಾದ ಪಡೆ ಕೊಹ್ಲಿ, ರೋಹಿತ್

ಅಜ್ಜಿ ಆಶೀರ್ವಾದ ಪಡೆ ಕೊಹ್ಲಿ, ರೋಹಿತ್

ಪಂದ್ಯ ಮುಗಿದ ಬಳಿಕ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕರ ರೋಹಿತ್ ಶರ್ಮಾ ನೇರವಾಗಿ ಈ 87ರ ಹರೆಯದ ಅಜ್ಜಿಯ ಆಶೀರ್ವಾದ ಪಡೆದರು. ವಿರಾಟ್ ಕೊಹ್ಲಿ, ಅಜ್ಜಿಯಿದ್ದ ಕುರ್ಚಿಯ ಬಳಿ ತೆರಳಿ ಅವರ ಮುಂದೆ ಮಂಡಿಯೂರಿ ಕುಳಿತು ಸ್ವಲ್ಪ ಹೊತ್ತು ಹರಟಿದರು. ಕೊಹ್ಲಿಯೊಂದಿಗೆ ಖುಷಿಯಿಂದ ಮಾತನಾಡಿದ ಚಾರುಲತಾ ಪಟೇಲ್, ಕೊಹ್ಲಿ ಹೊರಡುವ ಸಮಯದಲ್ಲಿ ಅವರನ್ನು ಬರಸೆಳೆದು ಪ್ರೀತಿಯಿಂದ ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟರು. ರೋಹಿತ್ ಶರ್ಮಾ ಅವರ ಕೆನ್ನೆಗೂ ಮುತ್ತಿಟ್ಟ ಅಜ್ಜಿ ತಮ್ಮ ಕ್ರಿಕೆಟ್ ಪ್ರೀತಿ ಮೆರೆದರು.

ವಿಶ್ವಕಪ್: ವಿಶೇಷ ವ್ಯಕ್ತಿತ್ವದಿಂದ ಅಭಿಮಾನಿಗಳ ಮನಗೆದ್ದ ರೋಹಿತ್ ಶರ್ಮಾ

ವಯಸ್ಸು ಸಂಖ್ಯೆಯಷ್ಟೇ ಎಂದ ಕೊಹ್ಲಿ

ವಯಸ್ಸು ಸಂಖ್ಯೆಯಷ್ಟೇ ಎಂದ ಕೊಹ್ಲಿ

ಈ ಅನುಭವವನ್ನು ವಿರಾಟ್ ಕೊಹ್ಲಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಎಲ್ಲ ಅಭಿಮಾನಿಗಳಿಗೂ, ಮುಖ್ಯವಾಗಿ ಚಾರುಲತಾ ಪಟೇಲ್ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರಿಗೆ 87 ವರ್ಷ. ಆದರೆ, ನಾನು ನೋಡಿದ ಅತ್ಯಂತ ಭಾವೋದ್ರಿಕ್ತ ಮತ್ತು ಬದ್ಧ ಕ್ರಿಕೆಟ್ ಅಭಿಮಾನಿಗಳಲ್ಲಿ ಅವರೂ ಒಬ್ಬರು. ವಯಸ್ಸು ಒಂದು ಸಂಖ್ಯೆಯಷ್ಟೇ. ಅವರ ಆಶೀರ್ವಾದದೊಂದಿಗೆ ಮುಂದಿನ ಪಂದ್ಯಕ್ಕೆ ಹೋಗುತ್ತಿದ್ದೇವೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಉಚಿತ ಟಿಕೆಟ್ ಕೊಡ್ತೀನಿ ಎಂದ ಆನಂದ್ ಮಹೀಂದ್ರಾ

ಉಚಿತ ಟಿಕೆಟ್ ಕೊಡ್ತೀನಿ ಎಂದ ಆನಂದ್ ಮಹೀಂದ್ರಾ

ಅಜ್ಜಿಯ ಕ್ರಿಕೆಟ್ ಅಭಿಮಾನಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಮನಸೋತಿದ್ದಾರೆ. 'ನಾನು ಸಾಮಾನ್ಯವಾಗಿ ಕ್ರಿಕೆಟ್ ನೋಡುವುದಿಲ್ಲ. ಅದರೆ, ಈ ಮಹಿಳೆಯನ್ನು ನೋಡಲೆಂದೇ ಟಿವಿ ಆನ್ ಮಾಡಿದ್ದೆ. ನನಗೆ ಅವರೇ ಪಂದ್ಯ ಗೆಲ್ಲಿಸಿದವರಂತೆ ಕಂಡರು. ಈ ಪಂದ್ಯ ಗೆಲ್ಲಿಸುವ ಮಹಿಳೆ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿಯೂ ಇರುವಂತೆ ಭಾರತ ನೋಡಿಕೊಳ್ಳಬೇಕು. ಅವರಿಗೆ ಉಚಿತ ಟಿಕೆಟ್ ನೀಡಬೇಕು. ಅವರು ಯಾರೆಂದು ಗೊತ್ತಾದರೆ ಭಾರತದ ಉಳಿದ ಪಂದ್ಯಗಳಿಗೆ ಟಿಕೆಟ್ ವೆಚ್ಚವನ್ನು ನಾನೇ ಭರಿಸುತ್ತೇನೆ' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಅತ್ಯಧಿಕ ರನ್‌ ಪಟ್ಟಿಯಲ್ಲಿ ವಾರ್ನರ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ರೋಹಿತ್

ಗಣೇಶನ ಭಕ್ತೆ

ಗಣೇಶನ ಭಕ್ತೆ

'1983ರಲ್ಲಿ ಕಪಿಲ್ ದೇವ್ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಾಗಲೂ ನಾನು ಪಂದ್ಯ ನೋಡಲು ಹೋಗಿದ್ದೆ' ಎಂದು ಚಾರುಲತಾ ಪಟೇಲ್ ಹೇಳಿದ್ದಾರೆ.

'ಭಾರತದ ಕ್ರಿಕೆಟಿಗರು ಇಂಗ್ಲೆಂಡ್‌ಗೆ ಆಡಲು ಬಂದಾಗಲೆಲ್ಲ ನಾನು ಅವರಿಗಾಗಿ ಪ್ರಾರ್ಥಿಸುತ್ತೇನೆ. ನಾನು ಗಣೇಶ ದೇವರ ದೊಡ್ಡ ಭಕ್ತೆ. ಭಾರತ ಗೆಲ್ಲಲಿದೆ ಎಂದು ನನಗೆ ನಂಬಿಕೆ ಇದೆ. ನಾನು ಆಟಗಾರರನ್ನು ಹಾರೈಸುತ್ತೇನೆ. ಅವರು ಚೆನ್ನಾಗಿ ಆಡಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.

ಹುಟ್ಟಿದ್ದು ತಾಂಜಾನಿಯಾದಲ್ಲಿ

ಚಾರುಲತಾ ಪಟೇಲ್ ಅವರು ಭಾರತದಲ್ಲಿ ಜನಿಸಿದವರಲ್ಲ. ಅವರು ಹುಟ್ಟಿದ್ದು ತಾಂಜಾನಿಯಾದಲ್ಲಿ. ಆದರೆ, ಅವರ ಪೋಷಕರು ಭಾರತದವರು. ಅವರ ಮಕ್ಕಳು ಇಂಗ್ಲೆಂಡ್‌ನ ಸರ್ರೆ ಕೌಂಟಿಗಾಗಿ ಆಡುತ್ತಿದ್ದರು. ಹೀಗಾಗಿ ಅವರ ಕ್ರಿಕೆಟ್ ಪ್ರೀತಿ ಹೆಚ್ಚು. 'ನಾನು ನಿವೃತ್ತಳಾದ 20 ವರ್ಷಗಳಿಂದ ಕ್ರಿಕೆಟ್ ನೋಡುತ್ತಿದ್ದೇನೆ. ನನಗೆ ತುಂಬಾ ಖುಷಿಯಾಗುತ್ತಿದೆ. ಇದುವರೆಗೂ ನಾನು ಈ ಪಂದ್ಯದ ವೇಳೆ ಐದು ಸಂದರ್ಶನಗಳನ್ನು ಕೊಟ್ಟಿರಬಹುದು' ಎಂದು ಐಸಿಸಿಯ ಡಿಜಿಟಲ್ ತಂಡಕ್ಕೆ ನೀಡಿದ ಸಂದರ್ಶನದ ವೇಳೆ ಅವರು ತಿಳಿಸಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, July 3, 2019, 12:36 [IST]
Other articles published on Jul 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more