ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ODI Ranking: ಪಾಕಿಸ್ತಾನಕ್ಕಿಂತ ಮೇಲಿನ ಸ್ಥಾನದಲ್ಲಿ ಮುಂದುವರೆದ ಭಾರತ

ICC ODI Ranking: India Continues At 3rd Position And Pakistan At 4th Position

ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿದ ಭಾರತ ತಂಡವು ಮಂಗಳವಾರ (ಆಗಸ್ಟ್ 23) ಬಿಡುಗಡೆ ಮಾಡಲಾದ ಇತ್ತೀಚಿನ ಐಸಿಸಿ ಏಕದಿನ ತಂಡದ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನವನ್ನು ಕಾಯ್ದುಕೊಳ್ಳಲು ಸಹಾಯ ಮಾಡಿತು.

ಹರಾರೆಯಲ್ಲಿ ನಡೆದ ಸರಣಿಯಲ್ಲಿ 3-0 ಅಂತರದ ಗೆಲುವಿನ ಹಿನ್ನಲೆಯಲ್ಲಿ ಭಾರತ ಈಗ 111 ರೇಟಿಂಗ್ ಅಂಕಗಳನ್ನು ಹೊಂದಿದೆ. ಇತ್ತೀಚೆಗಷ್ಟೇ ನೆದರ್ಲೆಂಡ್ಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ್ದಕ್ಕಾಗಿ ಪಾಕಿಸ್ತಾನ ತಂಡ ಏರಿಕೆ ಕಂಡಿದೆ.

ಏಷ್ಯಾ ಕಪ್ 2022: IND vs PAK ಪಂದ್ಯಕ್ಕೆ ದಿನಗಣನೆ; ದುಬೈಗೆ ಬಂದಿಳಿದ ಬಾಬರ್ ಅಜಂ ಪಡೆಏಷ್ಯಾ ಕಪ್ 2022: IND vs PAK ಪಂದ್ಯಕ್ಕೆ ದಿನಗಣನೆ; ದುಬೈಗೆ ಬಂದಿಳಿದ ಬಾಬರ್ ಅಜಂ ಪಡೆ

ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ತಮ್ಮ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಸರಣಿಯಲ್ಲಿ ಇದೇ ರೀತಿಯಾಗಿ 3-0 ಅಂತರದಿಂದ ಕಠಿಣ ಹೋರಾಟದ ಜಯವನ್ನು ಗಳಿಸಿತು. 107 ರೇಟಿಂಗ್ ಪಾಯಿಂಟ್‌ಗಳಿಗೆ ಮತ್ತು ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ.

ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ ತಂಡ ಕಿರಿದಾದ 2-1 ಸರಣಿಯ ವಿಜಯದ ನಂತರ ನ್ಯೂಜಿಲೆಂಡ್ 124 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಐಸಿಸಿ ಏಕದಿನ ರ್‍ಯಾಂಕಿಂಗ್‌ನ ಅಗ್ರಸ್ಥಾನದಲ್ಲಿ ಮುಂದುವರಿಯುತ್ತದೆ. ಇದೇ ವೇಳೆ ಇಂಗ್ಲೆಂಡ್ 119 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಅಕ್ಟೋಬರ್ 6ರಿಂದ ದಕ್ಷಿಣ ಆಫ್ರಿಕಾ ಮತ್ತು ಭಾರತ ಸೆಣಸಾಟ

ಅಕ್ಟೋಬರ್ 6ರಿಂದ ದಕ್ಷಿಣ ಆಫ್ರಿಕಾ ಮತ್ತು ಭಾರತ ಸೆಣಸಾಟ

ಅಕ್ಟೋಬರ್ 6ರಿಂದ ಪ್ರಾರಂಭವಾಗುವ ಮೂರು ಏಕದಿನ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಆತಿಥ್ಯ ವಹಿಸಿದಾಗ ಏಕದಿನ ಶ್ರೇಯಾಂಕದಲ್ಲಿ ಮತ್ತಷ್ಟು ಜಿಗಿತವನ್ನು ಕಾಣಲು ಭಾರತಕ್ಕೆ ಮುಂದಿನ ಅವಕಾಶ ಸಿಗುತ್ತದೆ.

ಮತ್ತೊಂದೆಡೆ, ಪಾಕಿಸ್ತಾನ ತಂಡವು ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಂತರ ಮಾತ್ರ ಏಕದಿನ ಪಂದ್ಯವನ್ನು ಆಡಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಪಂದ್ಯದ ಸೋಲು ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಒಂಬತ್ತು ಪಾಯಿಂಟ್‌ಗಳ ಬದಲಿಗೆ ಐದಕ್ಕೆ ಇಳಿಸಿತು.

ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ನ್ಯೂಜಿಲೆಂಡ್ ಅಗ್ರಸ್ಥಾನಕ್ಕೆ ಕುತ್ತು

ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ನ್ಯೂಜಿಲೆಂಡ್ ಅಗ್ರಸ್ಥಾನಕ್ಕೆ ಕುತ್ತು

ಮುಂದಿನ ತಿಂಗಳು ಮೂರು ಪಂದ್ಯಗಳ ಸರಣಿಯಲ್ಲಿ ಸಾಂಪ್ರದಾಯಿಕ- ಬದ್ಧ ಎದುರಾಳಿ ಆಸ್ಟ್ರೇಲಿಯಾವನ್ನು ಎದುರಿಸುವಾಗ ನ್ಯೂಜಿಲೆಂಡ್ ತಮ್ಮ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ಆದರೆ, ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ನ್ಯೂಜಿಲೆಂಡ್ ಇಂಗ್ಲೆಂಡ್ ವಿರುದ್ಧ ಅಗ್ರಸ್ಥಾನ ಕಳೆದುಕೊಳ್ಳಬಹುದು.

ಮತ್ತೊಂದೆಡೆ ಆಸ್ಟ್ರೇಲಿಯಾ (101 ರ್‍ಯಾಂಕಿಂಗ್ ಅಂಕಗಳು), ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಪಾಕಿಸ್ತಾನವನ್ನು ಹಿಂದಿಕ್ಕಬಹುದು.

3-0 ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್

3-0 ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್

ಕೆಎಲ್ ರಾಹುಲ್ ನಾಯಕತ್ವದ ಟೀಂ ಇಂಡಿಯಾ ಸೋಮವಾರ (ಆಗಸ್ಟ್ 22) ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆಯನ್ನು 13 ರನ್‌ಗಳಿಂದ ಸೋಲಿಸಿ 3-0 ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದರೆ, ತವರಿನಲ್ಲಿಯೇ ಜಿಂಬಾಬ್ವೆಗೆ ಮುಖಭಂಗವಾಗಿದೆ.

ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ತನ್ನ ಚೊಚ್ಚಲ ಏಕದಿನ ಶತಕವನ್ನು ಗಳಿಸಿ ಭಾರತವನ್ನು 8 ವಿಕೆಟ್‌ಗೆ 289 ರನ್ ಗಳಿಸಲು ಸಹಾಯ ಮಾಡಿದರು ಮತ್ತು ಜಿಂಬಾಬ್ವೆಯ ಸಿಕಂದರ್ ರಜಾ ಅವರ ಆರನೇ ಏಕದಿನ ಶತಕವನ್ನು ಗಳಿಸಿದರೂ, ಆತಿಥೇಯ ತಂಡ ಗುರಿ ಬೆನ್ನತ್ತಲಾಗಲಿಲ್ಲ. ಇದರಿಂದಾಗಿ ಭಾರತೀಯ ಬೌಲರ್‌ಗಳು ನಿಟ್ಟುಸಿರು ಬಿಟ್ಟರು.

ಪಾಕಿಸ್ತಾನ ವಿರುದ್ಧದ ಸೋಲಿಗೆ ಭಾರತ ಪ್ರತೀಕಾರ?

ಪಾಕಿಸ್ತಾನ ವಿರುದ್ಧದ ಸೋಲಿಗೆ ಭಾರತ ಪ್ರತೀಕಾರ?

ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿಗೆ ಏಷ್ಯಾ ಕಪ್‌ನಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಹವಣಿಸುತ್ತಿದೆ. ಕಳೆದ ವರ್ಷ ದುಬೈನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ವಿಶ್ವಕಪ್‌ ಮಾದರಿಯ ವೇದಿಕೆಯಲ್ಲಿ ಪಾಕಿಸ್ತಾನದ ಮೊದಲ ಗೆಲುವಾಗಿತ್ತು.

ಇದೇ ಆಗಸ್ಟ್ 28ರಂದು 2022ರ ಏಷ್ಯಾ ಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿದ್ದು, ಈ ಸಂದರ್ಭದಲ್ಲಿ ಎದುರಾಳಿ ಪಾಕಿಸ್ತಾನವು 2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ತೋರಿದ ಪ್ರದರ್ಶನವನ್ನು ಮುಂದುವರೆಸಲು ಎದುರು ನೋಡುತ್ತಿದೆ. 50 ಓವರ್‌ಗಳ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಈವರೆಗೆ ಭಾರತವನ್ನು ಸೋಲಿಸಿಲ್ಲ, ಅಲ್ಲಿ ಭಾರತೀಯರು "ಮೆನ್ ಇನ್ ಗ್ರೀನ್' ಮೇಲೆ 6-0 ಅಜೇಯ ದಾಖಲೆಯನ್ನು ಮುಂದುವರೆಸಿದ್ದಾರೆ.

Story first published: Wednesday, August 24, 2022, 10:43 [IST]
Other articles published on Aug 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X