ICC Ranking: ಏಕದಿನ ಕ್ರಿಕೆಟ್‌ನಲ್ಲಿ ಮೊಹಮ್ಮದ್ ಸಿರಾಜ್ ಈಗ ನಂಬರ್ 1 ಬೌಲರ್

ಮೊಹಮ್ಮದ್ ಸಿರಾಜ್, ಒಂದು ಕಾಲದಲ್ಲಿ ಬೌಲಿಂಗ್‌ನಿಂದಾಗಿ ಟ್ರೋಲ್‌ಗೆ ಒಳಗಾಗಿದ್ದ ಆಟಗಾರ, ಆತನ ಕ್ರಿಕೆಟ್ ಬದುಕೇ ಮುಗಿಯಿತು ಎಂದು ಆಡಿಕೊಂಡಿದ್ದವರೇ ಹೆಚ್ಚು, ಆರ್ ಸಿಬಿ ತಂಡದಲ್ಲಿ ಆಡುವಾಗ ಹೆಚ್ಚಿನ ರನ್ ಬಿಟ್ಟುಕೊಟ್ಟು ಪದೇ ಪದೇ ಟೀಕೆಗೆ ಒಳಗಾಗುತ್ತಿದ್ದ ಬೌಲರ್ ಈಗ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಐಸಿಸಿ ಏಕದಿನ ಕ್ರಿಕೆಟ್‌ನಲ್ಲಿ ಮೊಹಮ್ಮದ್ ಸಿರಾಜ್ ಈಗ ವಿಶ್ವದ ನಂಬರ್ 1 ಬೌಲರ್ ಆಗಿ ಹೊರ ಹೊಮ್ಮಿದ್ದಾರೆ. ಹಲವು ತಿಂಗಳಿನಿಂದ ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸಿರಾಜ್, ಭಾರತದ ಪ್ರಮುಖ ವಿಕೆಟ್ ಟೇಕರ್ ಬೌಲರ್ ಆಗಿ ಬದಲಾಗಿದ್ದಾರೆ.

ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ: ಭಾರತದ ಈ ದಿಗ್ಗಜರಲ್ಲಿ ಶುಭ್ಮನ್ ಗಿಲ್ ಆಯ್ಕೆ ಯಾರು?ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ: ಭಾರತದ ಈ ದಿಗ್ಗಜರಲ್ಲಿ ಶುಭ್ಮನ್ ಗಿಲ್ ಆಯ್ಕೆ ಯಾರು?

ಈತನಿಗೆ ಇನ್ನು ಭಾರತ ತಂಡದಲ್ಲಿ ಸ್ಥಾನವೇ ಇಲ್ಲ ಎಂದವರಿಗೆ ಸಿರಾಜ್ ಬೌಲಿಂಗ್ ಮೂಲಕವೇ ಉತ್ತರ ನೀಡಿದ್ದಾರೆ. 2022ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಿರಾಜ್‌ ಭಾರತ ತಂಡದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಮುನ್ನ ಐಸಿಸಿ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿದ್ದ ಮೊಹಮ್ಮದ್ ಸಿರಾಜ್ ಮೊದಲ ಎರಡು ಪಂದ್ಯಗಳಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.

21 ಪಂದ್ಯಗಳಲ್ಲೇ ನಂಬರ್ 1 ಸ್ಥಾನಕ್ಕೆ

21 ಪಂದ್ಯಗಳಲ್ಲೇ ನಂಬರ್ 1 ಸ್ಥಾನಕ್ಕೆ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುನ್ನ 685 ಅಂಕಗಳೊಂದಿಗೆ ಮೊಹಮ್ಮದ್ ಸಿರಾಜ್ 3ನೇ ಸ್ಥಾನದಲ್ಲಿದ್ದರು. ನ್ಯೂಜಿಲೆಂಡ್‌ನ ವೇಗಿ ಟ್ರೆಂಟ್ ಬೌಲ್ಟ್ 730 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ 727 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರು.

ನ್ಯೂಜಿಲೆಂಡ್‌ ವಿರುದ್ದದ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ 5 ವಿಕೆಟ್ ಪಡೆದು ಮಿಂಚಿದ ಸಿರಾಜ್ 729 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಇದು ಮೊಹಮ್ಮದ್ ಸಿರಾಜ್‌ರ ಜೀವನಶ್ರೇಷ್ಠ ಸಾಧನೆಯಾಗಿದೆ. ಇದುವರೆಗೂ 21 ಏಕದಿನ ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ 20.76 ಸರಾಸರಿಯಲ್ಲಿ 38 ವಿಕೆಟ್ ಪಡೆದು ಮಿಂಚಿದ್ದಾರೆ.

ಶತಕ ಬಾರಿಸಿದರೂ ಅಪ್ಪನಿಗೆ ಪೂರ್ತಿ ಖುಷಿಯಾಗಿಲ್ಲ: ಆಸಕ್ತಿಕರ ವಿಚಾರ ಹಂಚಿಕೊಂಡ ಶುಭಮನ್ ಗಿಲ್

 ಏಕದಿನ ಕ್ರಿಕೆಟ್‌ನಲ್ಲಿ ಪ್ರಮುಖ ಬೌಲರ್

ಏಕದಿನ ಕ್ರಿಕೆಟ್‌ನಲ್ಲಿ ಪ್ರಮುಖ ಬೌಲರ್

2023ರ ಜನವರಿಯಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸಿರಾಜ್ ಪ್ರಮುಖ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸಿರಾಜ್ 9 ವಿಕೆಟ್ ಪಡೆದು ಮಿಂಚಿದ್ದರು. 10 ಓವರ್ ಗಳಲ್ಲಿ 32 ರನ್ ನೀಡಿ 4 ವಿಕೆಟ್ ಪಡೆದುಕೊಂಡಿದ್ದರು.

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಎರಡು ಪಂದ್ಯಗಳನ್ನು ಮಾತ್ರ ಆಡಿದ ಸಿರಾಜ್ 5 ವಿಕೆಟ್ ಪಡೆದು ಮಿಂಚಿದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 5 ವಿಕೆಟ್ ಪಡೆಯುವ ಮೂಲಕ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

 ಬುಮ್ರಾ ಅನುಪಸ್ಥಿತಿಯಲ್ಲಿ ಮಿಂಚಿದ ಸಿರಾಜ್

ಬುಮ್ರಾ ಅನುಪಸ್ಥಿತಿಯಲ್ಲಿ ಮಿಂಚಿದ ಸಿರಾಜ್

ಭಾರತದ ಹಿರಿಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿರುವ ಸಮಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ್ದಾರೆ. ಅದರಲ್ಲೂ ಪವರ್ ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಪ್ರತಿ ಬಾರಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು ವೈಟ್‌ವಾಶ್ ಮಾಡಿದ ನಂತರ ಟೀಂ ಇಂಡಿಯಾ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಸರಣಿಗೆ ಮುನ್ನ ನಂಬರ್ 1 ತಂಡವಾಗಿದ್ದ ನ್ಯೂಜಿಲೆಂಡ್ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಶುಭಮನ್ ಗಿಲ್ ಕೂಡ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದು, 6ನೇ ಸ್ಥಾನಕ್ಕೆ ಜಿಗಿದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, January 25, 2023, 15:11 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X