
ಮೂರು ಪಂದ್ಯಗಳಲ್ಲಿ ಎರಡು ಅರ್ಧ ಶತಕ
ಪಾಕಿಸ್ತಾನದ ಪರವಾಗಿ ಆರಂಭಿಕನಾಗಿ ಕಣಕ್ಕಿಳಿಯುವ ರಿಜ್ವಾನ್ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಅದರಲ್ಲೂ ಏಷ್ಯಾ ಕಪ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಪರಿಣಾಮಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಮೊಹಮ್ಮದ್ ರಿಜ್ವಾನ್ ಎರಡು ಅರ್ಧ ಶತಕ ಸಿಡಿಸಿದ್ದಾರೆ. 96ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ರಿಜ್ವಾನ್ ಮೂರು 192 ರನ್‌ಗಳಿಸಿದ್ದು ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಭಾರತದ ಪರವಾಗಿಯೂ ಅದ್ಭುತ ಅರ್ಧ ಶತಕ ಸಿಡಿಸಿದ ರಿಜ್ವಾನ್ ಲೀಗ್ ಹಂತದಲ್ಲಿ ಹಾಂಕಾಂಕ್ ವಿರುದ್ಧ ನೀಡಿದ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು.
Asia Cup 2022: ಏಷ್ಯಾ ಕಪ್‌ನಿಂದ ಹೊರಬಿದ್ದ ಭಾರತದ ಮತ್ತೊಬ್ಬ ಬೌಲರ್; ದೀಪಕ್ ಚಹಾರ್ ಎಂಟ್ರಿ

ಟಾಪ್ 5ರಲ್ಲಿ ಸೂರ್ಯಕುಮಾರ್ ಯಾದವ್
ಬ್ಯಾಟರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಟಾಪ್ 10ರಲ್ಲಿ ಭಾರತದ ಒಬ್ಬ ಆಟಗಾರ ಮಾತ್ರವೇ ಸ್ಥಾನ ಪಡೆದುಕೊಂಡಿದ್ದಾರೆ. ಸೂರ್ಯಕುಮಾರ್ 4ನೇ ಶ್ರೇಯಾಂಕ ಪಡೆಯುವ ಮೂಲಕ ಟಾಪ್ 5ರ ಒಳಗೆ ಕಾಣಿಸಿಕೊಂಡಿದ್ದಾರೆ. ಅಗ್ರ ಎರಡರಲ್ಲಿ ಕಾಣಿಸಿಕೊಂಡಿದ್ದ ಸೂರ್ಯ ಕಳೆದ ವಾರ ಎರಡು ಸ್ಥಾನಗಳ ಕುಸಿತ ಕಂಡಿದ್ದರು. ಆದರೆ ಈ ಬಾರಿಯೂ ನಾಲ್ಕನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಎರಡನೇ ಸ್ಥಾನದಲ್ಲಿ ಬಾಬರ್ ಅಜಂ ಮೂರನೇ ಸ್ಥಾನದಲ್ಲಿ ಐಡೆನ್ ಮಾರ್ಕ್ರಮ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಐದನೇ ಸ್ಥಾನದಲ್ಲಿ ಡೇವಿಡ್ ಮಲನ್ ಇದ್ದಾರೆ.

ಬೌಲಿಂಗ್‌ನಲ್ಲಿ ಮಿಂಚಿದ ಲಂಕಾ ಹಾಗೂ ಅಫ್ಘನ್ ಸ್ಪಿನ್ನರ್‌ಗಳು
ಇನ್ನು ಬೌಲಿಂಗ್ ಶ್ರೇಯಾಂಕಪಟ್ಟಿಯಲ್ಲಿ ಅಗ್ರ ಐದು ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಆಗದಿದ್ದರೂ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನದ ಸ್ಪಿನ್ನರ್‌ಗಳು ಹೆಚ್ಚಿನ ಗಳಿಸಿ ಕಂಡಿದ್ದಾರೆ. ಮುಜೀಬ್ ಉರ್ ರಹ್ಮಾನ್ ಮೂರು ಸ್ಥಾನಗಳ ಏರಿಕೆ ಕಂಡಿದ್ದು 6ನೇ ಸ್ಥಾನದಲ್ಲಿ ಅಕೀಲ್ ಹುಸೇನ್ ಜೊತೆಗೆ ಜಂಟಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಶ್ರೀಲಂಕಾದ ಮಹಿಶ ತೀಕ್ಷಣ ಕೂಡ ಉತ್ತಮ ಪ್ರದರ್ಶನ ನಿಡುವ ಮೂಲಕ ಮಿಂಚಿದ್ದು 8ನೇ ಶ್ರೇಯಾಂಕವನ್ನು ಪಡೆಯುವ ಮೂಲಕ ಟಾಪ್ 10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.


Click it and Unblock the Notifications












