ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ದುರ್ಬಲ ತಂಡಗಳು ಬಲಿಷ್ಠ ತಂಡಗಳಿಗೆ ಶಾಕ್ ನೀಡಿದ ಐದು ಪ್ರಮುಖ ಪಂದ್ಯಗಳು ಇವು

ICC T20 World Cup: Know About The Five Biggest Upsets That Have Happened In The T20 World Cup So Far

ಟಿ20 ವಿಶ್ವಕಪ್ 2022 ಅಚ್ಚರಿಯ ಫಲಿತಾಂಶದೊಂದಿಗೆ ಆರಂಭವಾಗಿದೆ. ಹಲವು ರೋಚಕ ಪಂದ್ಯಗಳನ್ನು ನೋಡಬಹುದು ಎನ್ನುವ ಮುನ್ಸೂಚನೆ ಮೊದಲನೇ ದಿನವೇ ಸಿಕ್ಕಿದೆ. ಇಲ್ಲಿ ಯಾವ ತಂಡವೂ ಕಡಿಮೆಯಿಲ್ಲ, ಯಾವ ತಂಡ ಯಾವ ತಂಡವನ್ನಾದರೂ ಸೋಲಿಸಬಹುದು ಎನ್ನುವುದಕ್ಕೆ ಟಿ20 ವಿಶ್ವಕಪ್‌ 2022ರ ಮೊದಲನೇ ಪಂದ್ಯವೇ ಸಾಕ್ಷಿಯಾಗಿದೆ.

ಗೀಲಾಂಗ್‌ನಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ನಮೀಬಿಯಾ ಏಷ್ಯಾಕಪ್ ಚಾಂಪಿಯನ್‌ ಶ್ರೀಲಂಕಾ ತಂಡವನ್ನು 55 ರನ್‌ಗಳ ಅಂತರದಲ್ಲಿ ಸೋಲಿಸುವ ಮೂಲಕ ಶಾಕ್‌ ನೀಡಿದೆ. ತಂಡವಾಗಿ ಸಾಂಘಿಕ ಪ್ರದರ್ಶನ ನೀಡಿದ ನಮೀಬಿಯಾ ಶ್ರೀಲಂಕಾ ವಿರುದ್ಧ ಸುಲಭವಾಗಿಯೇ ಜಯ ಸಾಧಿಸಿದೆ.

T20 World Cup: ಭಾರತ ತಂಡದಲ್ಲಿ 1 ಸ್ಥಾನಕ್ಕಾಗಿ ಈ ಇಬ್ಬರು ವೇಗಿಗಳ ನಡುವೆ ಸ್ಪರ್ಧೆ; ರಾಬಿನ್ ಉತ್ತಪ್ಪT20 World Cup: ಭಾರತ ತಂಡದಲ್ಲಿ 1 ಸ್ಥಾನಕ್ಕಾಗಿ ಈ ಇಬ್ಬರು ವೇಗಿಗಳ ನಡುವೆ ಸ್ಪರ್ಧೆ; ರಾಬಿನ್ ಉತ್ತಪ್ಪ

ಎಂತಹ ಬಲಿಷ್ಠ ತಂಡವಾದರೂ ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಿದರೆ ಏನಾಗಬಹುದು ಎನ್ನುವುದಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ. ಶ್ರೀಲಂಕಾ ಇತ್ತೀಚೆಗೆ ಏಷ್ಯಾಕಪ್ ಟ್ರೋಫಿಯನ್ನು ಗೆದ್ದುಕೊಂಡ ನಂತರ, ಅನೇಕರು ಶ್ರೀಲಂಕಾ ಸುಲಭವಾಗಿ ಜಯ ಸಾಧಿಸುತ್ತದೆ ಎಂದೇ ಭಾವಿಸಿದ್ದರು ಆದರೆ, ಎಲ್ಲರ ನಿರೀಕ್ಷೆ ತಲೆ ಕೆಳಗಾಯಿತು.

ಟಿ20 ವಿಶ್ವಕಪ್‌ನಲ್ಲಿ ಈ ಬಾರಿಯೂ ಇದೇ ರೀತಿಯ ಹಲವು ಅಚ್ಚರಿಯ ಫಲಿತಾಂಶಗಳನ್ನು ನಿರೀಕ್ಷಿಸಬಹುದಾಗಿದೆ. ಆದಕ್ಕೂ ಮೊದಲು, ಈ ವರೆಗಿನ ಟಿ20 ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳನ್ನು ಸೋಲಿಸಿ ಇತಿಹಾಸ ಬರೆದ ಮಹತ್ವದ 5 ಪಂದ್ಯಗಳ ಬಗ್ಗೆ ತಿಳಿದುಕೊಳ್ಳೋಣ.

ಏಷ್ಯಾಕಪ್ ಚಾಂಪಿಯನ್ನರಿಗೆ ಮುಖಭಂಗ

ಏಷ್ಯಾಕಪ್ ಚಾಂಪಿಯನ್ನರಿಗೆ ಮುಖಭಂಗ

2022 ರ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ನಮೀಬಿಯಾ ಶ್ರೀಲಂಕಾ ತಂಡಕ್ಕೆ ಶಾಕ್ ನೀಡಿದೆ. ಜಾನ್ ಫ್ರಿಲಿಂಕ್ ಅವರ 28 ಬಾಲ್‌ಗಳಲ್ಲಿ 44 ರನ್ ನೆರವಿನಿಂದ ನಮೀಬಿಯಾ ತಮ್ಮ ಎದುರಾಳಿಗಳಿಗೆ 164 ರನ್‌ಗಳ ಗುರಿಯನ್ನು ನಿಗದಿಪಡಿಸಿತು.

ಈ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 19 ಓವರ್ ಗಳಲ್ಲಿ 108 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ 55 ರನ್‌ಗಳ ಅಂತರದಲ್ಲಿ ಸೋಲನುಭವಿಸಿತು.

ಡೇವಿಡ್ ವೈಸ್, ಬರ್ನಾರ್ಡ್ ಸ್ಕೋಲ್ಟ್ಜ್, ಬೆನ್ ಶಿಕೊಂಗೊ ಮತ್ತು ಫ್ರಿಲಿಂಕ್ ತಲಾ ಎರಡು ವಿಕೆಟ್ ಪಡೆಯುವ ಮೂಲಕ ನಮೀಬಿಯಾ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

IPL 2023 Auction: ಡಿಸೆಂಬರ್ 16ರಂದು ಐಪಿಎಲ್ ಮಿನಿ ಹರಾಜು, ಜಡೇಜಾಗೆ ಖುಲಾಯಿಸುತ್ತಾ ಅದೃಷ್ಟ?

ಕಾಂಗರೂ ಪಡೆಯನ್ನು ಸೋಲಿಸಿದ ಜಿಂಬಾಬ್ವೆ

ಕಾಂಗರೂ ಪಡೆಯನ್ನು ಸೋಲಿಸಿದ ಜಿಂಬಾಬ್ವೆ

2007ರಲ್ಲಿ ಟಿ20 ವಿಶ್ವಕಪ್‌ನ ಮೊದಲನೇ ಆವೃತ್ತಿ ನಡೆಯಿತು. ಟಿ20 ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿತ್ತು.

ಜಿಂಬಾಬ್ಬೆ ತಂಡವು ರಿಕಿ ಪಾಂಟಿಂಗ್ ನಾಯಕತ್ವದ ಅಜೇಯ ಆಸ್ಟ್ರೇಲಿಯನ್ ತಂಡವನ್ನು ಅವರ ಟೂರ್ನಮೆಂಟ್ ಆರಂಭಿಕ ಪಂದ್ಯದಲ್ಲಿ ಎದುರಿಸಿತು. ಬಲಿಷ್ಠ ತಂಡದ ವಿರುದ್ಧ ಶಿಸ್ತಿನ ಬೌಲಿಂಗ್ ಪ್ರದರ್ಶನ ನೀಡಿದ ಜಿಂಬಾಬ್ವೆ ಆಸ್ಟ್ರೇಲಿಯಾವನ್ನು 20 ಓವರ್‌ಗಳಲ್ಲಿ 138 ರನ್‌ಗಳಿಗೆ ನಿರ್ಬಂಧಿಸಿತು. ಜಿಂಬಾಬ್ವೆ ಪರ ಎಲ್ಟನ್ ಚಿಗುಂಬುರಾ ಮೂರು ವಿಕೆಟ್ ಪಡೆದರು.

ಐತಿಹಾಸಿಕ ಗೆಲುವಿಗಾಗಿ 139 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ, ವಿಕೆಟ್‌ಕೀಪರ್ ಬ್ರೆಂಡನ್ ಟೇಲರ್ ಅವರ ಅಜೇಯ 60 ರನ್‌ಗಳ ನೆರವಿನಿಂದ 19.5 ಓವರ್‌ಗಳಲ್ಲಿ ಐದು ವಿಕೆಟ್‌ ಇರುವಂತೆಯೇ ಜಯ ಸಾಧಿಸಿ ಇತಿಹಾಸ ಬರೆಯಿತು.

ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದ ನೆದರ್ಲ್ಯಾಂಡ್ಸ್

ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದ ನೆದರ್ಲ್ಯಾಂಡ್ಸ್

ಟಿ20 ವಿಶ್ವಕಪ್ 2022 ರಂತೆಯೇ, 2009 ರ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಅಭಿಮಾನಿಗಳಿಗೆ ದೊಡ್ಡ ಆಘಾತ ಎದುರಾಯಿತು. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ಆತಿಥೇಯ ಇಂಗ್ಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 162/5 ಗಳಿಸಿತು. ಗೆಲುವಿಗಾಗಿ 163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್, ಟಾಮ್ ಡಿ ಗ್ರೂತ್ 49 ರನ್‌ಗಳನ್ನು ಬಾರಿಸುವ ಮೂಲಕ ತಂಡವನ್ನು ಗುರಿಯ ಹತ್ತಿರಕ್ಕೆ ಮುನ್ನಡೆಸಿತು. ಅಂತಿಮವಾಗಿ, ಆರು ಎಸೆತಗಳಲ್ಲಿ ಏಳು ರನ್‌ಗಳನ್ನು ಗಳಿಸಬೇಕಾಗಿತ್ತು.

ಸ್ಟುವರ್ಟ್ ಬ್ರಾಡ್ ಐದು ಎಸೆತಗಳಲ್ಲಿ ಕೇವಲ ಐದು ರನ್‌ಗಳನ್ನು ಬಿಟ್ಟುಕೊಟ್ಟರು. ನೆದರ್ಲ್ಯಾಂಡ್ಸ್ ಗೆಲುವಿಗಾಗಿ ಕೊನೆಯ ಎಸೆತದಲ್ಲಿ ಎರಡು ರನ್ ಬೇಕಿತ್ತು. ಆದರೆ, ಇಂಗ್ಲೆಂಡ್ ಫೀಲ್ಡಿಂಗ್‌ನಲ್ಲಿ ಮಾಡಿದ ಪ್ರಮಾದದಿಂದ ಓವರ್ ಥ್ರೋನಲ್ಲಿ ಎರಡು ರನ್ ಗಳಿಸಿದ ನೆದರ್ಲ್ಯಾಂಡ್ಸ್ ಐತಿಹಾಸಿಕ ಜಯ ಸಾಧಿಸಿದರು.

ಎರಡನೇ ಬಾರಿ ಆಂಗ್ಲರನ್ನು ಮಣಿಸಿದ ನೆದರ್ಲ್ಯಾಂಡ್ಸ್

ಎರಡನೇ ಬಾರಿ ಆಂಗ್ಲರನ್ನು ಮಣಿಸಿದ ನೆದರ್ಲ್ಯಾಂಡ್ಸ್

2010ರ ಟಿ20 ವಿಶ್ವಕಪ್ ವಿಜೇತ ತಂಡವಾದ ಇಂಗ್ಲೆಂಡ್, 2014ರ ಟಿ20 ವಿಶ್ವಕಪ್‌ನಲ್ಲಿ ಮತ್ತೆ ನೆದರ್ಲ್ಯಾಂಡ್ಸ್ ವಿರುದ್ಧ ಮುಗ್ಗರಿಸಿತು. ಚಿತ್ತಗಾಂಗ್‌ನಲ್ಲಿ ಇಂಗ್ಲೆಂಡ್ 45 ರನ್‌ಗಳಿಂದ ನೆದರ್‌ಲ್ಯಾಂಡ್ಸ್ ವಿರುದ್ಧ ಸೋತಿತು.

ಟಿ20 ವಿಶ್ವಕಪ್ 2014 ರ ಗುಂಪು 1 ಪಂದ್ಯದಲ್ಲಿ, ನೆದರ್ಲ್ಯಾಂಡ್ಸ್ 20 ಓವರ್‌ಗಳಲ್ಲಿ 133/5 ಗಳಿಸಿತು. ಅನೇಕ ಅಭಿಮಾನಿಗಳು ಇಂಗ್ಲೆಂಡ್ 134 ರನ್ ಗುರಿಯನ್ನು ಸುಲಭವಾಗಿ ಬೆನ್ನಟ್ಟುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ಸ್ಟುವರ್ಟ್ ಬ್ರಾಡ್ ನಾಯಕತ್ವದ ಇಂಗ್ಲೆಂಡ್ ಕೇವಲ 88 ರನ್‌ಗಳಿಗೆ ಆಲೌಟ್ ಆಯಿತು.

ನೆದರ್ಲೆಂಡ್ಸ್ ಪರ ಮುದಸ್ಸರ್ ಬುಖಾರಿ ಮತ್ತು ಲೋಗನ್ ವ್ಯಾನ್ ಬೀಕ್ ತಲಾ ಮೂರು ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು ಎರಡನೇ ಬಾರಿಗೆ ಸೋಲಿಸಿದರು.

 ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಅಫ್ಘಾನಿಸ್ತಾನ

ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಅಫ್ಘಾನಿಸ್ತಾನ

2016 ರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿತ್ತು. ಬಹುತೇಕ ಎಲ್ಲಾ ಅಗ್ರ-ಶ್ರೇಣಿಯ ತಂಡಗಳ ಮೇಲೂ ಪ್ರಾಬಲ್ಯ ಸಾಧಿಸಿತು. ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ವೆಸ್ಟ್ ಇಂಡೀಸ್ ಅಫ್ಘಾನಿಸ್ತಾನದ ವಿರುದ್ಧ ಮಾತ್ರ ಸೋಲನುಭವಿಸಿತ್ತು.

ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್‌ಗಳು ವೆಸ್ಟ್ ಇಂಡೀಸ್‌ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಮೂಲಕ 124 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ರಕ್ಷಿಸಿದ್ದರು.

ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಲಾ ಎರಡು ವಿಕೆಟ್ ಪಡೆದರು, ಅಮೀರ್ ಹಮ್ಜಾ 4 ಓವರ್ ಗಳಲ್ಲಿ ಕೇವಲ 9 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಅಫ್ಘಾನಿಸ್ತಾನದ ಗೆಲುವಿಗೆ ಸಹಾಯ ಮಾಡಿದರು.

Story first published: Monday, October 17, 2022, 2:30 [IST]
Other articles published on Oct 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X