ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

8 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ನಿರಾಸೆ ಮೂಡಿಸಿದ ಕೊಹ್ಲಿ

Ind vs Ban: Virat Kohli disappointed after open innings for first time since 2014

ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಡಾಕಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವಿಗೆ 272 ರನ್‌ಗಳ ಗುರಿಯನ್ನು ಆತಿಥೇಯ ಬಾಂಗ್ಲಾದೇಶ ನಿಗದಿಪಡಿಸಿತು. ಇದನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡದ ಪರವಾಗಿ ಶಿಖರ್ ಧವನ್ ಜೊತೆಗೆ ವಿರಾಟ್ ಕೊಹ್ಲಿ ಆರಂಭವಿಕನಾಗಿ ಕಣಕ್ಕಿಳಿದರು.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಪಂದ್ಯದ ಆರಂಭದಲ್ಲಿ ಫೀಲ್ಡಿಂಗ್ ವೇಳೆ ಕೈ ಬೆರಳಿಗೆ ಗಾಯ ಮಾಡಿಕೊಂಡರು. ಹೀಗಾಗಿ ಮೈದಾನ ತೊರೆದ ಶರ್ಮಾ ಬಳಿಕ ಅಂಗಳಕ್ಕಿಳಿಯಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಪರವಾಗಿ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದಾರೆ.

ಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು

8 ವರ್ಷಗಳ ಬಳಿಕ ಆರಂಭಿಕನಾಗಿ ಕೊಹ್ಲಿ

8 ವರ್ಷಗಳ ಬಳಿಕ ಆರಂಭಿಕನಾಗಿ ಕೊಹ್ಲಿ

ವಿರಾಟ್ ಕೊಹ್ಲಿ ವೈಟ್‌ಬಾಲ್ ಮಾದರಿಯಲ್ಲಿ ಸುದೀರ್ಘ ಕಾಲದಿಂದ ಮೂರನೇ ಕ್ರಮಾಂಕದಲ್ಲಿಯೇ ಕಣಕ್ಕಿಳಿಯುತ್ತಿದ್ದಾರೆ. ಟಿ20 ಮಾದರಿಯಲ್ಲಿ ಆಗಾಗ ಆರಂಭಿಕನಾಗಿ ಕಣಕ್ಕಿಳಿದಿರಿರುವ ಉದಾಹರಣೆಗಳು ಇದೆ. ಆದರೆ ಏಕದಿನ ಮಾದರಿಯಲ್ಲಿ ಸುದೀರ್ಘ 8 ವರ್ಷಗಳ ಬಳಿಕ ಆರಂಭಿಕನಾಗಿ ಕಣಕ್ಕಿಳಿದರು. ಇದಕ್ಕೂ ಮುನ್ನ 2014ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊಹ್ಲಿ ಹ್ಯಾಮಿಲ್ಟನ್‌ನಲ್ಲಿ ಆಡಿದ್ದರು. ಆದರೆ ಸುದೀರ್ಘ ಕಾಲದ ಬಳಿಕ ಈ ಜವಾಬ್ಧಾರಿ ವಹಿಸಿಕೊಂಡಿದ್ದರು ಕೂಡ ಟೀಮ್ ಇಂಡಿಯಾದ ಮಾಜಿ ನಾಯಕನಿಂದ ನೀರಸ ಪ್ರದರ್ಶನ ವ್ಯಕ್ತವಾಯಿತು.

ಕಳಪೆ ಆರಂಭ ಪಡೆದ ಭಾರತ

ಕಳಪೆ ಆರಂಭ ಪಡೆದ ಭಾರತ

ಭಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 272 ರನ್‌ಗಳನ್ನು ಬೆನ್ನಟ್ಟುವ ಗುರಿ ಸ್ವೀಕರಿಸಿ ಬ್ಯಾಟಿಂಗ್ ಆರಂಬಿಸಿತು. ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಜೋಡಿಯಿಂದ ಸಾಕಷ್ಟು ನಿರೀಕ್ಷೆಯಿತ್ತು. ಆದರೆ ಈ ಜೋಡಿಯಿಂದ ಕಳಪೆ ಆರಂಭ ದೊರೆಯಿತು. ಕೊಹ್ಲಿ ಕೇವಲ 5 ರನ್‌ಗಳಿಸಿದರೆ ಶಿಖರ ಧವನ್ 8 ರನ್‌ಗಳಿಸಿ ಔಟಾದರು. ಈ ಮೂಲಕ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿಯೂ ನೀರಸ ಪ್ರದರ್ಶನ ನೀಡಿದೆ.

ಅಮೋಘ ಪ್ರದರ್ಶನ ನೀಡಿದ ಬಾಂಗ್ಲಾದೇಶ

ಅಮೋಘ ಪ್ರದರ್ಶನ ನೀಡಿದ ಬಾಂಗ್ಲಾದೇಶ

ಇನ್ನು ಈ ಪಂದ್ಯದಲ್ಲಿ ಬಾಂಗ್ಲಾದೇಶ 6 ವಿಕೆಟ್‌ಗಳನ್ನು ಕೇವಲ 69 ರನ್‌ಗಳನ್ನು ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಕನಿಷ್ಠ ಮೊತ್ತಕ್ಕೆ ಬಾಂಗ್ಲಾದೇಶ ಆಲೌಟ್ ಆಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೆಳ ಕ್ರಮಾಂಕದ ಆಟಗಾರರಾದ ಮಹ್ಮದುಲ್ಲಾ ಹಾಗೂ ಮೆಹಿದಿ ಹಸನ್ ಅವರ ಅಮೋಘ ಪ್ರದರ್ಶನ ಟೀಮ್ ಇಂಡಿಯಾಗೆ ಆಘಾತ ನೀಡಿತು. ಈ ಜೋಡಿ 7ನೇ ವಿಕೆಟ್‌ಗೆ 148 ರನ್‌ಗಳ ಜೊತೆಯಾಟವನ್ನು ನೀಡಿತು. ಮಹ್ಮದುಲ್ಲಾ 77 ರನ್‌ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡರೆ ಮೆಹದಿ ಹಸನ್ ತಮ್ಮ ಪ್ರದರ್ಶನ ಮತ್ತಷ್ಟು ಮುಂದುವರಿಸಿದರು. ಅಂತಿಮವಾಗಿ ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೆಹದಿ ಹಸನ್ ಶತಕ ಸಿಡಿಸಿ ಬಾಂಗ್ಲಾದೇಶದ ಪರವಾಗಿ ಹೊಸ ದಾಖಲೆ ಬರೆದರು.

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ಬೆಂಚ್: ಶಹಬಾಜ್ ಅಹ್ಮದ್, ಕುಲದೀಪ್ ಸೇನ್, ರಜತ್ ಪಾಟಿದಾರ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ

ಬಾಂಗ್ಲಾದೇಶ ಆಡುವ ಬಳಗ: ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಎಬಾದತ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್
ಬೆಂಚ್: ಹಸನ್ ಮಹಮೂದ್, ಯಾಸಿರ್ ಅಲಿ, ತಸ್ಕಿನ್ ಅಹ್ಮದ್, ನೂರುಲ್ ಹಸನ್

Story first published: Wednesday, December 7, 2022, 18:09 [IST]
Other articles published on Dec 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X