360 ಡಿಗ್ರಿ ಹೋಗ್ಲಿ, 180 ಡಿಗ್ರಿ ಶಾಟ್ಸ್ ಆದ್ರೂ ಹೊಡೀರಿ: ಪಾಕ್ ತಂಡದ ವಿರುದ್ಧ ವಾಸಿಂ ಅಕ್ರಂ ಗರಂ

ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡ ಮುಗ್ಗರಿಸಿದ ಬಳಿಕ ಸಾಕಷ್ಟು ಟೀಕೆಗೆ ಒಳಗಾಗಿದ್ದು, ಬಹುದೊಡ್ಡ ಟಿ20 ಸರಣಿಯನ್ನ ಕೊನೆಯ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಬಿಟ್ಟುಕೊಟ್ಟಿದೆ.

ಇಂಗ್ಲೆಂಡ್ ನೀಡಿದ್ದ 210 ರನ್‌ ಗುರಿ ಬೆನ್ನತ್ತುವಲ್ಲಿ ವಿಫಲಗೊಂಡ ಪಾಕಿಸ್ತಾನ 142ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಪಾಕ್ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಗುರಿ ಮುಟ್ಟುವಲ್ಲಿ ಎಡವಿದ ಪಾಕಿಸ್ತಾನ 67ರನ್‌ಗಳಿಂದ ಸೋಲನ್ನಪ್ಪಿತು. ಅಂತಿಮ ಪಂದ್ಯ ಸೋಲುವುದಷ್ಟೇ ಅಲ್ಲದೆ ಏಳು ಪಂದ್ಯಗಳ ಸರಣಿಯಲ್ಲಿ 3-4 ಅಂತರದಲ್ಲಿ ಎದುರಾಳಿಗೆ ಟ್ರೋಫಿ ಬಿಟ್ಟುಕೊಟ್ಟಿತು.

ಇಂಗ್ಲೆಂಡ್ ಪರ ಡೇವಿಡ್ ಮಲನ್ ಅಬ್ಬರ

ಇಂಗ್ಲೆಂಡ್ ಪರ ಡೇವಿಡ್ ಮಲನ್ ಅಬ್ಬರ

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಡೇವಿಡ್ ಮಲನ್ 47 ಎಸೆತಗಳಲ್ಲಿ 78 ರನ್ ಸಿಡಿಸುವ ಮೂಲಕ ಇಂಗ್ಲೆಂಡ್ ಸ್ಕೋರ್ ಅನ್ನು 200ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದ್ರು. ಓಪನರ್‌ಗಳಾದ ಸಾಲ್ಟ್‌ 20 ರನ್, ಅಲೆಕ್ಸ್ ಹೇಲ್ಸ್‌ 18 ರನ್ ಗಳಿಸಿ ಔಟಾದ ಬಳಿಕ ಡೇವಿಡ್ ಮಲನ್ ಸ್ಫೋಟಕ ಆಟವಾಡಿದ್ರು. ಜೊತೆಗೆ ಕೆಳಕ್ರಮಾಂಕದಲ್ಲಿ ಬೆನ್ ಡಕೆಟ್ 31, ಹ್ಯಾರಿ ಬ್ರೂಕ್ ಅಜೇಯ 46 ರನ್ ದಾಖಲಿಸುವ ಮೂಲಕ ಇಂಗ್ಲೆಂಡ್ ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 209 ರನ್ ದಾಖಲಾಯಿತು.

ಪಾಕಿಸ್ತಾನದ ಟಾಪ್ ಆರ್ಡರ್ ವೈಫಲ್ಯ

ಪಾಕಿಸ್ತಾನದ ಟಾಪ್ ಆರ್ಡರ್ ವೈಫಲ್ಯ

210 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡದ ಪರ ನಾಯಕ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಸಿಂಗಲ್ ಡಿಜಿಟ್‌ಗೆ ಔಟಾಗುವ ಮೂಲಕ ಮುಗ್ಗರಿಸಿದ್ರು. ಇದಾದ ಬಳಿಕ ಶಾನ್ ಮಸೂದ್ 56ರನ್ ದಾಖಲಿಸಿದ್ದು, ಬೇರೆ ಯಾವೊಬ್ಬ ಬ್ಯಾಟರ್ ಕೂಡ ಪಾಕ್ ತಂಡಕ್ಕೆ ಆಧಾರವಾಗ್ಲಿಲ್ಲ. ಕೌಶ್ದಿಲ್ ಶಾ 27ರನ್‌ಗೆ ಔಟಾದ್ರೆ ಕೆಳಕ್ರಮಾಂದ ಬ್ಯಾಟರ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಪರಿಣಾಮ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142ರನ್ ಕಲೆಹಾಕಿತು. ಇಂಗ್ಲೆಂಡ್ 67ರನ್‌ಗಳ ಗೆಲುವಿನ ಜೊತೆಗೆ ಸರಣಿಯನ್ನ ತನ್ನದಾಗಿಸಿಕೊಂಡಿತು.

ವಿರಾಟ್ ಕೊಹ್ಲಿ ದಾಖಲೆ: T20 ಕ್ರಿಕೆಟ್‌ನಲ್ಲಿ 11,000 ರನ್ ಕಲೆಹಾಕಿದ ಭಾರತದ ಮೊದಲ ಬ್ಯಾಟರ್

ಪಾಕ್ ಬ್ಯಾಟಿಂಗ್ ಕುರಿತು ಕಿಡಿಕಾರಿದ ವಾಸಿಂ ಅಕ್ರಂ

ಪಾಕ್ ಬ್ಯಾಟಿಂಗ್ ಕುರಿತು ಕಿಡಿಕಾರಿದ ವಾಸಿಂ ಅಕ್ರಂ

ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಬ್ಯಾಟರ್‌ಗಳ ಶಾಟ್ ಸೆಲೆಕ್ಷನ್ ಕುರಿತು ಪಂದ್ಯದ ನೇರಪ್ರಸಾರದಲ್ಲೇ ಕುಟುಕಿದ ಪಾಕ್ ಮಾಜಿ ಬೌಲರ್ ವಾಸಿಂ ಅಕ್ರಂ, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'' 360 ಡಿಗ್ರಿ ಬ್ಯಾಟಿಂಗ್ ಅನ್ನು ನಿರೀಕ್ಷಿಸುವುದು ತುಂಬಾನೇ ಕಷ್ಟಸಾಧ್ಯವಾಗಿದೆ, ಕೇವಲ 180 ಡಿಗ್ರಿ ಶಾಟ್‌ಗಳನ್ನಾದ್ರೂ ಆಡಲಿ''. ನೆಟ್ಸ್‌ ಅಭ್ಯಾಸದ ವೇಳೆಯಲ್ಲಿ ಈ ಕುರಿತು ಅಭ್ಯಾಸ ಮಾಡಿದ್ದೇ ಆದಲ್ಲಿ, ಪಂದ್ಯಗಳಲ್ಲಿ ಏಕೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ'' ಎಂದು ಅಕ್ರಂ ಟೀಕಿಸಿದ್ದಾರೆ.

IND vs SA: ಈತನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು; ಕೆಎಲ್ ರಾಹುಲ್ ಅಚ್ಚರಿ ಹೇಳಿಕೆ

ಪಾಕಿಸ್ತಾನ ಮತ್ತು ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್

ಪಾಕಿಸ್ತಾನ ಮತ್ತು ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್

ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೇನ್

ಬೆಂಚ್: ಮೊಹಮ್ಮದ್ ಹ್ಯಾರಿಸ್, ಅಮರ್ ಜಮಾಲ್, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಅಬ್ರಾರ್ ಅಹ್ಮದ್


ಇಂಗ್ಲೆಂಡ್ : ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ (ನಾಯಕ), ಸ್ಯಾಮ್ ಕರನ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಆದಿಲ್ ರಶೀದ್, ರೀಸ್ ಟೋಪ್ಲಿ

ಬೆಂಚ್ : ರಿಚರ್ಡ್ ಗ್ಲೀಸನ್, ಮಾರ್ಕ್ ವುಡ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಓಲಿ ಸ್ಟೋನ್, ಟಾಮ್ ಹೆಲ್ಮ್, ಲ್ಯೂಕ್ ವುಡ್, ಜೋರ್ಡಾನ್ ಕಾಕ್ಸ್

For Quick Alerts
ALLOW NOTIFICATIONS
For Daily Alerts
Story first published: Monday, October 3, 2022, 14:44 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X