ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಅಂತಿಮ ಓವರ್‌ನಲ್ಲಿ ಬ್ರೇಸ್‌ವೆಲ್ ಔಟ್ ಮಾಡಲು ಕೊಹ್ಲಿ ಸಲಹೆ ಬಹಿರಂಗಪಡಿಸಿದ ಠಾಕೂರ್

IND vs NZ: Shardul Thakur Reveals Virat Kohlis Advice To Get Michael Bracewell Out In Final Over

ಬುಧವಾರ, ಜನವರಿ 18ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ದಾಖಲೆಯ ದ್ವಿಶತಕದ ನೆರವಿನಿಂದ ಭಾರತ ತಂಡ 12 ರನ್‌ಗಳ ರೋಚಕ ಗೆಲುವು ದಾಖಲಿಸಿತು.

ಭಾರತ ನೀಡಿದ 350 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಅವರು ಕೇವಲ 78 ಎಸೆತಗಳಲ್ಲಿ ದಾಖಲೆಯ 140 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಬಹುತೇಕ ಗೆಲುವಿನತ್ತ ಕೊಂಡೊಯ್ದರು.

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಐವರು ಭಾರತೀಯ ಬ್ಯಾಟ್ಸ್‌ಮನ್‌ಗಳು

ಅಂತಿಮ ಓವರ್‌ನಲ್ಲಿ ನ್ಯೂಜಿಲೆಂಡ್‌ಗೆ ಕೇವಲ ಒಂದು ವಿಕೆಟ್ ಬಾಕಿ ಇದ್ದು, ಗೆಲುವಿಗೆ 20 ರನ್‌ಗಳು ಬೇಕಿತ್ತು. ಆಗ ಭಾರತದ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಬೌಲಿಂಗ್ ಮಾಡುತ್ತಿದ್ದರು. ಕೊನೆಯ ಓವರ್‌ನ ಮೊದಲ ಎಸೆತವನ್ನೇ ಮೈಕೆಲ್ ಬ್ರೇಸ್‌ವೆಲ್ ಸಿಕ್ಸರ್ ಬಾರಿಸಿದರು ಮತ್ತು ಎರಡನೆ ಬಾಲ್ ವೈಡ್ ಆಯಿತು. ಆಗ ನ್ಯೂಜಿಲೆಂಡ್‌ಗೆ 5 ಎಸೆತಗಳಲ್ಲಿ 13 ರನ್‌ಗಳಿಗೆ ಇಳಿಯಿತು.

ನಂತರದ ಬಾಲ್‌ ಅನ್ನು ಶಾರ್ದೂಲ್ ಠಾಕೂರ್ ಯಾರ್ಕರ್ ಹಾಕಿ ಮೈಕೆಲ್ ಬ್ರೇಸ್‌ವೆಲ್ ಅವರನ್ನು ಎಲ್‌ಬಿಡ್ಬ್ಲ್ಯೂ ಔಟ್ ಮಾಡಿದರು. ಗೆಲುವಿನ ಗುರಿ ತಲುಪಲು 12 ರನ್‌ಗಳು ಬೇಕಿದ್ದಾಗ ನ್ಯೂಜಿಲೆಂಡ್ ಆಲೌಟ್ ಆಯಿತು.

IND vs NZ: Shardul Thakur Reveals Virat Kohlis Advice To Get Michael Bracewell Out In Final Over

ನ್ಯೂಜಿಲೆಂಡ್ ವಿರುದ್ಧದ ಕಳೆದ ಐದು ಪಂದ್ಯಗಳ ಏಕದಿನ ಸೋಲಿನ ಸರಣಿಯನ್ನು ಕೊನೆಗೊಳಿಸಿತು. ಇದೇ ವೇಳೆ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಸಲಹೆಯು ಮೈಕೆಲ್ ಬ್ರೇಸ್‌ವೆಲ್ ಅವರ ಅಂತಿಮ ವಿಕೆಟ್ ಪಡೆಯಲು ಹೇಗೆ ಸಹಾಯ ಮಾಡಿತು ಎಂಬುದನ್ನು ಶಾರ್ದೂಲ್ ಠಾಕೂರ್ ಬಹಿರಂಗಪಡಿಸಿದರು.

ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಗೆದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಶಾರ್ದೂಲ್ ಠಾಕೂರ್, "ವಿರಾಟ್ ಕೊಹ್ಲಿ ಭಾಯ್ ನನ್ನನ್ನು ಬ್ಯಾಟ್ಸ್‌ಮನ್ ಔಟ್ ಮಾಡಲು ಯಾರ್ಕರ್ ಲೆಂತ್ ಬೌಲ್ ಮಾಡಲು ಹೇಳಿದರು," ಎಂದು ತಿಳಿಸಿದರು.

IND vs NZ: ಶುಭ್ಮನ್ ಗಿಲ್ ದ್ವಿಶತಕಕ್ಕೆ ಯುವಿ, ಸೆಹ್ವಾಗ್, ಅಶ್ವಿನ್‌ರಿಂದ ಪ್ರಶಂಸೆಗಳ ಸುರಿಮಳೆIND vs NZ: ಶುಭ್ಮನ್ ಗಿಲ್ ದ್ವಿಶತಕಕ್ಕೆ ಯುವಿ, ಸೆಹ್ವಾಗ್, ಅಶ್ವಿನ್‌ರಿಂದ ಪ್ರಶಂಸೆಗಳ ಸುರಿಮಳೆ

ಮೈಕೆಲ್ ಬ್ರೇಸ್‌ವೆಲ್ 78 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 12 ಬೌಂಡರಿಗಳ ನೆರವಿನಿಂದ 140 ರನ್ ಬಾರಿಸಿದ್ದರು ಮತ್ತು ನ್ಯೂಜಿಲೆಂಡ್ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ದಿದ್ದರು. ಶಾರ್ದೂಲ್ ಠಾಕೂರ್ ಎಸೆದ ಯಾರ್ಕರ್ ಲೆಂತ್ ಬೌಲ್‌ಗೆ ವಿಕೆಟ್ ಒಪ್ಪಿಸಿದರು.

"ಆರು ವಿಕೆಟ್‌ ಪತನದ ನಂತರ ದೊಡ್ಡ ಜೊತೆಯಾಟ ನಿರ್ಮಿಸುವ ಮೂಲಕ ನಾವು ನಮಗೇ ಒಂದು ಅವಕಾಶವನ್ನು ನೀಡಲು ಪ್ರಯತ್ನಿಸಿದೆವು. ದುರದೃಷ್ಟವಶಾತ್ ಕೊನೆಯಲ್ಲಿ ನಮ್ಮ ಪ್ರಯತ್ನ ಕಡಿಮೆಯಾಯಿತು. ಮಿಚೆಲ್ ಸ್ಯಾಂಟ್ನರ್ ಮತ್ತು ನಾನು ಕ್ರೀಸ್‌ಗೆ ಅಂಟಿಕೊಂಡಿದ್ದೆವು. ನಾವು ಗೆಲುವಿನವರೆಗೂ ಕೊಂಡೊಯ್ಯಲು ಸಾಧ್ಯವಾಗಲಿಲ್ಲ," ಎಂದು ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ ಹೇಳಿದರು.

"ಇದು ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನದ ಉತ್ತಮ ಆರಂಭವಾಗಿದೆ. ಭಾರತೀಯ ಬೌಲರ್‌ಗಳು ಏನು ಬೌಲ್ ಮಾಡುತ್ತಾರೆ ಎಂಬುದರ ಅನುಭವವನ್ನು ಪಡೆಯಲು ನಾನು ಪ್ರಯತ್ನಿಸಿದೆ," ಎಂದು ಪಂದ್ಯದ ನಂತರ ಮೈಕೆಲ್ ಬ್ರೇಸ್‌ವೆಲ್ ತಿಳಿಸಿದರು.

Story first published: Thursday, January 19, 2023, 9:54 [IST]
Other articles published on Jan 19, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X