ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ : ಸೂರ್ಯನ ಅಬ್ಬರಕ್ಕೆ ನ್ಯೂಜಿಲೆಂಡ್ ತತ್ತರ, ಭಾರತಕ್ಕೆ 65 ರನ್‌ಗಳ ಭರ್ಜರಿ ಜಯ

IND Vs NZ: Team India Won By 65 Runs Against New Zealand In 2nd T20I

ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಬ್ಬರದ ಆಟಕ್ಕೆ ನ್ಯೂಜಿಲೆಂಡ್ ಶರಣಾಗಿದೆ. 192 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ 18.5 ಓವರ್ ಗಳಲ್ಲಿ126 ರನ್ ಗಳಿಗೆ ಆಲೌಟ್ ಆಗುವ ಮೂಲಕ 65 ರನ್‌ಗಳ ಸೋಲನುಭವಿಸಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸೂರ್ಯಕುಮಾರ್ ಯಾದವ್ ಅದ್ಭುತ ಶತಕದ ನೆರವಿನಿಂದ 191 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ನಂತರ ಭಾರತ ತಂಡ ಸುಧಾರಿಸಿಲ್ಲ; ಪಾಕ್ ಕ್ರಿಕೆಟಿಗವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ನಂತರ ಭಾರತ ತಂಡ ಸುಧಾರಿಸಿಲ್ಲ; ಪಾಕ್ ಕ್ರಿಕೆಟಿಗ

ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಭುವನೇಶ್ವರ್ ಕುಮಾರ್ ಮೊದಲ ಓವರ್ ನಲ್ಲೇ ಆಘಾತ ನೀಡಿದರು. ಸ್ಫೋಟಕ ಬ್ಯಾಟರ್ ಫಿನ್‌ ಅಲೆನ್‌ರಲ್ಲಿ ಮೊದಲನೇ ಓವರ್ ನಲ್ಲಿ ಔಟ್ ಮಾಡುವ ಮೂಲಕ ನ್ಯೂಜಿಲೆಂಡ್ ಮೇಲೆ ಒತ್ತಡ ಹೇರಿತು.

ಭಾರತೀಯ ಬೌಲರ್ ಗಳು ನ್ಯೂಜಿಲೆಂಡ್ ಬ್ಯಾಟರ್ ಗಳಿಗೆ ಹೆಚ್ಚಿನ ರನ್ ಗಳಿಸಲು ಅವಕಾಶ ನೀಡಲೇ ಇಲ್ಲ. ವೇಗಿಗಳು ಆರಂಭದಲ್ಲಿ ವಿಕೆಟ್ ಪಡೆದರೆ, ಮಧ್ಯಮ ಓವರ್ ಗಳಲ್ಲಿ ಸ್ಪಿನ್ನರ್ ಗಳು ಪ್ರಾಬಲ್ಯ ಸಾಧಿಸಿದರು. ದೀಪಕ್ ಹೂಡಾ 4 ವಿಕೆಟ್ ಪಡೆದು ಮಿಂಚಿದರು.

ನ್ಯೂಜಿಲೆಂಡ್ ನೆಲದಲ್ಲಿ ಅಬ್ಬರಿಸಿದ ಸೂರ್ಯ

ನ್ಯೂಜಿಲೆಂಡ್ ನೆಲದಲ್ಲಿ ಅಬ್ಬರಿಸಿದ ಸೂರ್ಯ

ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್‌ ಅನ್ನು ಮುಂದುವರೆಸಿದರು. ನ್ಯೂಜಿಲೆಂಡ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ 360 ಡಿಗ್ರಿ ಆಟಗಾರ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಬಾರಿಸಿದರು.

ತಂಡದ ಇತರೆ ಆಟಗಾರರು ರನ್ ಗಳಿಸಲು ಪರದಾಡುತ್ತಿದ್ದರು, ಸೂರ್ಯಕುಮಾರ್ ಯಾದವ್ ಮಾತ್ರ ಸತತವಾಗಿ ಬೌಂಡರಿ, ಸಿಕ್ಸರ್ ಸಿಡಿಸುತ್ತಲೇ ಇದ್ದರು. 49 ಎಸೆತಗಳಲ್ಲಿ ತಮ್ಮ ಎರಡನೇ ಅಂತಾರಾಷ್ಟ್ರೀಯ ಟಿ20 ಶತಕ ದಾಖಲಿಸಿದರು.

ಅಂತಿಮವಾಗಿ 51 ಎಸೆತಗಳಲ್ಲಿ 11 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 111 ರನ್ ಗಳಿಸಿದರು. ರೋಹಿತ್ ಶರ್ಮಾ ನಂತರ ಒಂದೇ ವರ್ಷದಲ್ಲಿ ಎರಡು ಟಿ20 ಶತಕ ಸಿಡಿಸಿದ ಆಟಗಾರ ಎನಿಸಿಕೊಂಡರು.

 ಮತ್ತೆ ವೈಫಲ್ಯ ಅನುಭವಿಸಿದ ಪಂತ್

ಮತ್ತೆ ವೈಫಲ್ಯ ಅನುಭವಿಸಿದ ಪಂತ್

ಭಾರತದ ಪರವಾಗಿ ಇನ್ನಿಂಗ್ಸ್ ಆರಂಭಿಸುವವರು ಯಾರು ಎನ್ನುವ ಕುತೂಹಲ ಇತ್ತು. ರಿಷಬ್ ಪಂತ್ ಮತ್ತು ಇಶಾನ್ ಕಿಶಾನ್ ಆರಂಭಿಕರಾಗಿ ಕಣಕ್ಕಿಳಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದರೂ ರಿಷಬ್ ಪಂತ್ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರೆಸಿದರು. 13 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟಾದರು.

ಇಶಾನ್ ಕಿಶಾನ್ ಮಾತ್ರ ಸೂರ್ಯಕುಮಾರ್ ಯಾದವ್‌ಗೆ ಉತ್ತಮ ಸಾತ್ ನೀಡಿದರು 31 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್‍ ಕೂಡ ಹಿಟ್ ವಿಕೆಟ್ ಆದರೆ, ಅಂತಿಮ ಓವರ್ ನಲ್ಲಿ ಟಿಮ್ ಸೌಥಿ ಹ್ಯಾಟ್ರಿಕ್ ಪಡೆಯುವ ಮೂಲಕ ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಹೂಡಾ ವಿಕೆಟ್ ಪಡೆದರು. ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್, ಶುಭಮನ್ ಗಿಲ್, ಉಮ್ರಾನ್‌ ಮಲಿಕ್ ಆಯ್ಕೆಯಾಗದಿರುವುದು ಅಚ್ಚರಿಗೆ ಕಾರಣವಾಯಿತು.

ಹೋರಾಟವನ್ನು ನೀಡದೆ ಸೋಲೊಪ್ಪಿಕೊಂಡ ನ್ಯೂಜಿಲೆಂಡ್

ಹೋರಾಟವನ್ನು ನೀಡದೆ ಸೋಲೊಪ್ಪಿಕೊಂಡ ನ್ಯೂಜಿಲೆಂಡ್

192 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ಯಾವ ಹಂತದಲ್ಲೂ ಹೋರಾಟದ ಮನೋಭಾವ ತೋರಲೇ ಇಲ್ಲ. ಭಾರತೀಯ ಬೌಲರ್ ಗಳು ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ ಒತ್ತಡ ಹೇರಿದರು. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮಾತ್ರ 52 ಎಸೆತಗಳಲ್ಲಿ 61 ರನ್ ಗಳಿಸಿದರು. ಉಳಿದಂತೆ ಯಾವ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಭುವನೇಶ್ವರ್ ಕುಮಾರ್ ಮೊದಲನೇ ಓವರ್ ನಲ್ಲಿ ಫಿನ್ ಅಲೆನ್‌ರನ್ನು ಔಟ್ ಮಾಡಿದರು. ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಕೂಡ ಉತ್ತಮ ಬೌಲಿಂಗ್ ಮೂಲಕ ರನ್‌ ನೀಡದೆ ಒತ್ತಡ ಹೇರಿದರು. ಯುಜುವೇಂದ್ರ ಚಹಾಲ್ 4 ಓವರ್ ಗಳಲ್ಲಿ 26 ರನ್ ನೀಡಿ 4 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 4 ಓವರ್ ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು. ದೀಪಕ್ ಹೂಡಾ 2.5 ಓವರ್ ಗಳಲ್ಲಿ 10 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಭಾರತ: ಇಶಾನ್ ಕಿಶನ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ(ನಾಯಕ), ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್(ನಾಯಕ), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಆಡಮ್ ಮಿಲ್ನೆ, ಲಾಕಿ ಫರ್ಗುಸನ್

Story first published: Sunday, November 20, 2022, 16:21 [IST]
Other articles published on Nov 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X