ಶುಭ್ಮನ್ ಗಿಲ್ ಯಾವ ಕ್ರಮಾಂಕದಲ್ಲಿ ಆಡ್ತಾರೆ ಎಂದು ಹೇಳಲು ಸಾಧ್ಯವಿಲ್ಲ: ಚೇತೇಶ್ವರ ಪೂಜಾರ

ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಹಾಗೂ ತಾತ್ಕಾಲಿಕ ಉಪನಾಯಕ ಚೇತೇಶ್ವರ ಪೂಜಾರ, ಕಾನ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಯುವ ಆಟಗಾರ ಶುಭ್ಮನ್ ಗಿಲ್ ಸ್ಥಾನ ಪಡೆದಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಯಾವ ಕ್ರಮಾಂಕದಲ್ಲಿ ಆತ ಬ್ಯಾಟಿಂಗ್ ಮಾಡುತ್ತಾನೆ ಎಂಬುದನ್ನ ಮಾತ್ರ ತಿಳಿಸಲು ನಿರಾಕರಿಸಿದ್ದಾರೆ.

ಗುರುವಾರ ಕಾನ್ಪುರದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈಗಾಗಲೇ ಟಿ20 ಸರಣಿಯಲ್ಲಿ ಮುಗ್ಗರಿಸಿರುವ ಕಿವೀಸ್‌ ದೀರ್ಘಸ್ವರೂಪದ ಕ್ರಿಕೆಟ್‌ನಲ್ಲಿ ಗೆಲ್ಲುವ ಇರಾದೆ ಹೊಂದಿದೆ. ಟಿ20ಯಲ್ಲಿ ವಿಶ್ರಾಂತಿ ಬಯಸಿದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಮರಳಿದ್ದಾರೆ.

ಇನ್ನು ಟೀಂ ಇಂಡಿಯಾ ಪರ ರೆಗ್ಯುಲರ್ ಓಪನರ್ ರೋಹಿತ್ ಶರ್ಮಾ ವಿಶ್ರಾಂತಿ ಬಯಸಿ ತಂಡದಿಂದ ಹೊರಬಿದ್ದಿದ್ದು, ವಿರಾಟ್ ಕೊಹ್ಲಿ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡುವುದಿಲ್ಲ. ಹೀಗಾಗಿ ಯುವ ಆಟಗಾರ ಶುಭ್ಮನ್ ಗಿಲ್‌ಗೆ ಟೀಂ ಇಂಡಿಯಾ ಮಣೆ ಹಾಕಿದೆ.

ಭಾರತವು ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಲು ಮೂವರು ಆರಂಭಿಕರನ್ನು ಹೊಂದಿದೆ. ಇಂಗ್ಲೆಂಡ್‌ನಲ್ಲಿ ಸಾಕಷ್ಟು ರನ್ ಗಳಿಸಿದ ನಂತರ ರಾಹುಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರೆ, ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಸ್ಥಾನವನ್ನ ಸರಿದೂಗಿಸಲು ಮಯಾಂಕ್ ಮತ್ತು ಶುಬ್‌ಮನ್‌ರಲ್ಲಿ ಒಬ್ಬರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ ಶುಭ್ಮನ್ ಗಿಲ್‌: ಭಾರತದ ಪ್ರಯೋಗ ಫಲ ನೀಡುತ್ತಾ?ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ ಶುಭ್ಮನ್ ಗಿಲ್‌: ಭಾರತದ ಪ್ರಯೋಗ ಫಲ ನೀಡುತ್ತಾ?

ತಂಡದ ಮ್ಯಾನೇಜ್‌ಮೆಂಟ್ ಶುಬ್‌ಮಾನ್ ಅವರನ್ನು ಯಾವ ಸ್ಲಾಟ್ನಲ್ಲಿ ಆಡಲು ಪರಿಗಣಿಸುತ್ತಿದೆ ಎಂದು ಕೇಳಿದಾಗ, ಪೂಜಾರ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ಅವರು ಗಾಯದ ಕಾರಣ ಇಂಗ್ಲೆಂಡ್ ಪ್ರವಾಸವನ್ನು ಕಳೆದುಕೊಂಡಿದ್ದರೂ, ಆದ್ರೂ ಅವರು ಚೆನ್ನಾಗಿ ಸಿದ್ಧರಾಗಿದ್ದಾರೆ ಎಂದು ಹೇಳಿದರು.

"ಈ ಹಂತದಲ್ಲಿ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಅವರು ಪ್ರತಿಭಾವಂತ ಆಟಗಾರ ಮತ್ತು ಖಂಡಿತವಾಗಿಯೂ ಅವರು ತಂಡದ ಭಾಗವಾಗುತ್ತಾರೆ. ಆದ್ದರಿಂದ ಅವರ ಬಗ್ಗೆ ಯಾರಾದರೂ ಹೆಚ್ಚು ಚಿಂತಿಸಬೇಕಾಗಿಲ್ಲ. ಅವರು ಪಾದಾರ್ಪಣೆ ಮಾಡಿದ ನಂತರ ಒಂದೆರಡು ವರ್ಷಗಳಿಂದ ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಇಂಗ್ಲೆಂಡ್‌ನಿಂದ ಹೊರಗುಳಿದಿರುವುದು ದುರದೃಷ್ಟಕರ, ಆದರೆ ಅವರು ಪ್ರತಿಭಾವಂತ ಆಟಗಾರ, ಮತ್ತು ವೈಯಕ್ತಿಕವಾಗಿ ನಾನು ಅವನಿಗೆ ಹೆಚ್ಚು ಹೇಳಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ'' ಎಂದು ಪೂಜಾರ ಹೇಳಿದ್ದಾರೆ.

ಇನ್ನು ರಾಹುಲ್ ದ್ರಾವಿಡ್ ಕೋಚಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಪೂಜಾರ ತಮ್ಮ ಹುಷಾರಾಗಿ ಉತ್ತರ ನೀಡಿದ್ದಾರೆ.

"ರಾಹುಲ್ ಭಾಯ್ ಇದ್ದಾರೆ, ಅವರು ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಹಾಗಾಗಿ ಆತ ತನ್ನ ಸಹಜ ಆಟವನ್ನು ಆಡಬೇಕು ಎಂದು ನಾನು ಭಾವಿಸುತ್ತೇನೆ. ಆತ ಬ್ಯಾಟಿಂಗ್ ಮಾಡುವ ಸ್ಥಾನವನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ, ಆದರೆ ಅವರು ಚೆನ್ನಾಗಿ ಸಿದ್ಧರಾಗಿದ್ದಾರೆ ಮತ್ತು ಅವರು ಈ ಸರಣಿಯನ್ನು ಎದುರು ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ "ಎಂದು ಮೊದಲ ಟೆಸ್ಟ್‌ಗೆ ಉಪನಾಯಕರಾಗಿರುವ ಪೂಜಾರ, ಸ್ಪೋರ್ಟ್ಸ್‌ಕೀಡಾ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಧನಶ್ರೀ ನಿರ್ದೇಶನದಲ್ಲಿ ಎಬಿಡಿ, ಕೊಹ್ಲಿ ನಟನೆ; ಹೊರಬಿತ್ತು ಎಬಿಡಿ ಆರ್‌ಸಿಬಿಯಲ್ಲೇ ಉಳಿದುಕೊಳ್ಳುವ ಸುಳಿವು!ಧನಶ್ರೀ ನಿರ್ದೇಶನದಲ್ಲಿ ಎಬಿಡಿ, ಕೊಹ್ಲಿ ನಟನೆ; ಹೊರಬಿತ್ತು ಎಬಿಡಿ ಆರ್‌ಸಿಬಿಯಲ್ಲೇ ಉಳಿದುಕೊಳ್ಳುವ ಸುಳಿವು!

ಹಲಾಲ್' ಮಾಂಸ ಅಂದರೆ ಏನು ? | Oneindia Kannada

ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಸರಣಿ ಪ್ರಾರಂಭವಾಗುವ ಮೊದಲೇ ಶುಭ್‌ಮನ್ ಗಿಲ್ ಗಾಯಕ್ಕೆ ತುತ್ತಾದರು ಮತ್ತು ಮನೆಗೆ ಮರಳಬೇಕಾಯ್ತು. ಆದ್ರೆ ಎನ್‌ಸಿಎಗೆ ಆಗಮಿಸಿ ಕಠಿಣ ಪರಿಶ್ರಮದ ಬಳಿಕ ಮತ್ತೆ ಇದೀಗ ತಂಡಕ್ಕೆ ಮರಳಿದ್ದಾರೆ. ಕಳೆದ ಐಪಿಎಲ್‌ ಸೀಸನ್‌ನಲ್ಲಿ ಕೆಕೆಆರ್ ಪರ ಉತ್ತಮ ಪ್ರದರ್ಶನ ತೋರಿದ ಗಿಲ್ 478ರನ್ ಕಲೆಹಾಕಿದ್ರು.

For Quick Alerts
ALLOW NOTIFICATIONS
For Daily Alerts
Story first published: Tuesday, November 23, 2021, 15:31 [IST]
Other articles published on Nov 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X