ಆತನಿಗೆ ಇನ್ನೊಂದು ಅವಕಾಶ ನೀಡಕೂಡದು: ಅನುಭವಿಯ ಪ್ರದರ್ಶನಕ್ಕೆ ಕೆಂಡಕಾರಿದ ಮಂಜ್ರೇಕರ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿಯ ಅಂತಿಮ ಪಂದ್ಯದಲ್ಲಿಯೂ ಭಾರತದ ಪ್ರಮುಖ ದಾಂಡಿಗರು ಭಾರೀ ವೈಫಲ್ಯವನ್ನು ಅನುಭವಿಸಿದರು. ಇದರ ಪರಿಣಾಮವಾಗಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿಯು ಸೋಲು ಕಂಡಿದೆ. ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಪ್ರದರ್ಶನದ ಬಳಿಕ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಭಾರತದ ಓರ್ವ ಆಟಗಾರನ ಮೇಲೆ ಕೆಂಡಕಾರಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ ವೈಫಲ್ಯವನ್ನು ಅನಿಭವಿಸಿದ್ದಾರೆ. ಚೇತೇಶ್ವರ್ ಪೂಜಾರ ಮೊದಲ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಸಾಧಾರಣ ಕೊಡುಗೆ ನೀಡಿದ್ದರು. ಆದರೆ ರಹಾನೆ ಮತ್ತೊಮ್ಮೆ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಮತ್ತೊಮ್ಮೆ ಹೊರೆಯಾಗಿದ್ದಾರೆ. ಹೀಗಾಗಿ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಜಿಂಕ್ಯಾ ರಹಾನೆ ಬಗ್ಗೆ ಕಟು ಮಾತುಗಳಲ್ಲಿ ಟೀಕಿಸಿದ್ದಾರೆ.

ಭಾರತ vs ದ.ಆಫ್ರಿಕಾ: ಮಕ್ಕಳ ರೀತಿ ಆಡುವುದನ್ನು ಬಿಡಬೇಕು ಎಂದು ಕೊಹ್ಲಿಗೆ ಚಾಟಿ ಬೀಸಿದ ಮಾಜಿ ಕ್ರಿಕೆಟಿಗಭಾರತ vs ದ.ಆಫ್ರಿಕಾ: ಮಕ್ಕಳ ರೀತಿ ಆಡುವುದನ್ನು ಬಿಡಬೇಕು ಎಂದು ಕೊಹ್ಲಿಗೆ ಚಾಟಿ ಬೀಸಿದ ಮಾಜಿ ಕ್ರಿಕೆಟಿಗ

ದಕ್ಷಿಣ ಆಫ್ರಿಕಾ ವಿರುದ್ಧಧ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕದ ಪ್ರದರ್ಶನದ ಬಳಿಕ ನಿರ್ಣಾಯಕ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಎರಡು ಇನ್ನಿಂಗ್ಸ್‌ನಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಈ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ ರಹಾನೆ ಗಳಿಸಿದ್ದು ಕೇವಲ 10 ರನ್ ಮಾತ್ರ. ಎರಡನೇ ಇನ್ನಿಂಗ್ಸ್‌ನಲ್ಲಿ ರಹಾನೆ ಕೇವಲ ಒಂದು ರನ್ ಗಳಿಸಿ ಕಗಿಸೋ ರಬಡಾ ಎಸೆತದಲ್ಲಿ ಡೀನ್ ಎಲ್ಗರ್‌ಗೆ ಕ್ಯಾಚ್ ನೀಡಿ ಫೆವಿಲಿಯನ್ ಸೇರಿಕೊಂಡಿದ್ದರು.

ಆತ ಪ್ರಥಮ ದರ್ಜೆ ಕ್ರಿಕೆಟ್ ಆಡಬೇಕು

ಆತ ಪ್ರಥಮ ದರ್ಜೆ ಕ್ರಿಕೆಟ್ ಆಡಬೇಕು

ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಅಜಿಂಕ್ಯಾ ರಹಾನೆ ಪ್ರದರ್ಶನಕ್ಕೆ ಕಟುವಾಗಿ ಟೀಕಿಸಿದ್ದಾರೆ. "ನನ್ನ ಪ್ರಕಾರ ಆತ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿ ಅಲ್ಲಿ ತನ್ನ ಲಯವನ್ನು ಕಂಡುಕೊಳ್ಳಬೇಕಿದೆ. ನಾನು ರಹಾನೆಗೆ ಮತ್ತೊಂದು ಅವಕಾಶವನ್ನು ನೀಡುವುದನ್ನು ಬಯಸುವುದಿಲ್ಲ. ನನ್ನ ಪ್ರಕಾರ ರಹಾನೆಗಿಂತ ಪೂಜಾರ ಬಲಿಷ್ಠವಾಗಿದ್ದಾರೆ" ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

3-4 ವರ್ಷಗಳಲ್ಲಿ ಆತ ಫಾರ್ಮ್‌ಗೆ ಬರುವ ಭರವಸೆ ನೀಡಿಲ್ಲ

3-4 ವರ್ಷಗಳಲ್ಲಿ ಆತ ಫಾರ್ಮ್‌ಗೆ ಬರುವ ಭರವಸೆ ನೀಡಿಲ್ಲ

ಮುಂದುವರಿದು ಮಾತನಾಡಿದ ಸಂಜಯ್ ಮಂಜ್ರೇಕರ್ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅಜಿಂಕ್ಯಾ ರಹಾನೆ ಫಾರ್ಮ್‌ಗೆ ಬರುವ ಯಾವ ಭರವಸೆಯನ್ನು ಕೂಡ ನೀಡಿಲ್ಲ ಎಂದಿದ್ದಾರೆ. "ಮೆಲ್ಬರ್ನ್‌ನಲ್ಲಿ ಶತಕವನ್ನು ಗಳಿಸಿದಾಗ ಸಣ್ಣ ಭರವಸೆ ಹುಟ್ಟಿತ್ತು. ಅದನ್ನು ಹೊರತುಪಡಿಸಿ ರಹಾನೆಯಿಂದ ಯಾವ ಅತ್ಯುತ್ತಮ ಪ್ರದರ್ಶನ ಕೂಡ ಬರಲಿಲ್ಲ" ಎಂದು ಸಂಜಯ್ ಮಂಜ್ರೇಕರ್ ಟೀಮ್ ಇಂಡಿಯಾದ ಅನುಭವಿ ಆಟಗಾರನ ಬಗ್ಗೆ ಮಾತನಾಡಿದ್ದಾರೆ.

ಸತತವಾಗಿ ರಹಾನೆ ವೈಫಲ್ಯ

ಸತತವಾಗಿ ರಹಾನೆ ವೈಫಲ್ಯ

ಎಂಸಿಜಿಯಲ್ಲಿ ರಹಾನೆ ಸಿಡಿಸಿದ ಮ್ಯಾಚ್ ವಿನ್ನಿಂಗ್ 112 ರನ್‌ಗಳನ್ನು ಹೊರತುಪಡಿಸಿದರೆ ಉಳಿದ ಯಾವ ಸರಣಿಯಲ್ಲಿಯೂ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಇದರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ಧ ತವರಿನ ಹಾಗೂ ಅವೇ ಸರಣಿ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿ ಕೂಡ ಸೇರಿದೆ. ಇನ್ನು 2021ರಲ್ಲಿ ಅಜಿಂಕ್ಯಾ ರಹಾನೆ ಒಟ್ಟು 15 ಟೆಸ್ಟ್ ಪಂದ್ಯಗಳನ್ನು ಆಡಿದ್ದು 20.25ರ ಸರಾಸರಿಯಲ್ಲಿ 547 ರನ್‌ ಮಾತ್ರವೇ ಬಾರಿಸಿದ್ದಾರೆ. ಇದರಲ್ಲಿ ಅವರು ಮೂರು ಅರ್ಧ ಶತಕವನ್ನು ಮಾತ್ರವೇ ಗಳಿಸಿದ್ದು ಅವರ ಅತ್ಯುತ್ತಮ ಸ್ಕೋರ್ 67 ರನ್ ಆಗಿದೆ.

Virat Kohli ಹೀಗೆ ಮೈಕ್ ನಲ್ಲಿ ಹೇಳಿದ ಮೇಲೆ ಮೊದಲ ಬಾರಿಗೆ ಪ್ರತಿಕ್ರಿಯೆ | Oneindia Kannada
ಆತಿಥೇಯರಿಗೆ ಸರಣಿ ಒಪ್ಪಿಸಿದರ ಟೀಮ್ ಇಂಡಿಯಾ

ಆತಿಥೇಯರಿಗೆ ಸರಣಿ ಒಪ್ಪಿಸಿದರ ಟೀಮ್ ಇಂಡಿಯಾ

ಇನ್ನು ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸುವ ಮೂಲಕ ಸರಣಿ ಗೆಲ್ಲುವಲ್ಲಿ ವಿಫಲವಾಗಿದೆ. ಅಂತಿಮ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 13 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದರೂ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರೀ ಕುಸಿತ ಕಂಡ ಪರಿಣಾಮವಾಗಿ ಉತ್ತಮ ರನ್‌ಗಳಿಸಲು ವಿಫಲವಾಗಿದೆ. ರಿಷಭ್ ಪಂತ್ ಮಾತ್ರವೇ ಏಕಾಂಗಿ ಹೋರಾಟವನ್ನು ನಡೆಸಿ ಶತಕ ಸಿಡಿಸಿದ್ದಾರೆ. ಹೀಗಾಗಿ 212 ರನ್‌ಗಳ ಸುಲಭ ಗುರಿ ಪಡೆದ ದಕ್ಷಿಣ ಆಪ್ರಿಕಾ ಈ ಮೊತ್ತವನ್ನು ಕೇವಲ 3 ವಕೆಟ್ ಕಳೆದುಕೊಂಡು ಗೆಲುವ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 2-1 ಅಂತರದ ಗೆಲುವು ಸಾಧಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Friday, January 14, 2022, 18:11 [IST]
Other articles published on Jan 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X