ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಕೊಲಸ್ ಪೂರನ್ ರನೌಟ್ ಮಾಡಲು ತಡಮಾಡಿದ ರಿಷಭ್ ಪಂತ್‌: ಸಿಟ್ಟಾದ ರೋಹಿತ್ ಶರ್ಮಾ

Rishabh pant

ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 59ರನ್‌ಗಳಿಂದ ಪಂದ್ಯ ಗೆದ್ದು ಬೀಗಿತು. ಭಾರತ ನೀಡಿದ್ದ 192ರನ್‌ಗಳ ಸವಾಲಿನ ಮೊತ್ತವನ್ನ ಬೆನ್ನತ್ತುವಲ್ಲಿ ವಿಫಲಗೊಂಡ ಕೆರಿಬಿಯನ್ನರು 132ರನ್‌ಗಳಿಗೆ ಆಲೌಟ್ ಆಗು ಮೂಲಕ ಹೀನಾಯ ಸೋಲು ಅನುಭವಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ರೋಹಿತ್ ಶರ್ಮಾ 33, ಸೂರ್ಯಕುಮಾರ್ ಯಾದವ್ 24, ದೀಪಕ್ ಹೂಡಾ 21, ರಿಷಭ್ ಪಂತ್ 44, ಸಂಜು ಸ್ಯಾಮ್ಸನ್ ಅಜೇಯ 30, ದಿನೇಶ್ ಕಾರ್ತಿಕ್ 6, ಅಕ್ಷರ್ ಪಟೇಲ್ ಅಜೇಯ 20 ರನ್ ಕಲೆಹಾಕಿದರು. ಇದರಿಂದಾಗಿ ಟೀಂ ಇಂಡಿಯಾ ಐದು ವಿಕೆಟ್ ನಷ್ಟಕ್ಕೆ 191ರನ್ ಕಲೆಹಾಕಿತು. ಆದ್ರೆ ಇದಕ್ಕುತ್ತರವಾಗಿ ಬ್ಯಾಟಿಂಗ್‌ನಲ್ಲಿ ವಿಫಲಗೊಂಡು ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್ ಹಾಗೂ ರೋವ್ಮನ್ ಪೋವೆಲ್ ತಲಾ 24ರನ್‌ಗಳಿಸಿದ್ದೇ ಹೆಚ್ಚು.

ರನೌಟ್‌ಗೆ ಬಲಿಯಾದ ನಿಕೋಲಸ್ ಪೂರನ್

ರನೌಟ್‌ಗೆ ಬಲಿಯಾದ ನಿಕೋಲಸ್ ಪೂರನ್

ಪವರ್‌ಪ್ಲೇ ಓವರ್‌ಗಳಲ್ಲಿ ಬಹುಬೇಗನ ಮೊದಲೆರಡು ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್‌ಗೆ ನಾಯಕ ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಇನ್ನಿಂಗ್ಸ್ ಆರಂಭಿಸಿದ್ರು. ಕ್ರೀಸ್‌ಗೆ ಬಂದ ಕೂಡಲೇ ಸಿಕ್ಸರ್‌ ಬೇಟೆಯಾಡಿದ ಪೂರನ್ ಡೇಂಜರಸ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ರು.

8 ಎಸೆತಗಳನ್ನ ಎದುರಿಸಿದ್ದ ಪೂರನ್ 3 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 24 ರನ್ ಸಿಡಿಸಿದ್ದರು. ಆದ್ರೆ ದುರಾದೃಷ್ಟವಶಾತ್ ಆತುರದ ರನ್‌ ಕದಿಯಲು ಹೋಗಿ, ಸರಿಯಾದ ಸಮನ್ವಯದ ಕೊರತೆಯಿಂದಾಗಿ ರನೌಟ್‌ ಆದ್ರು. ಸಂಜು ಸ್ಯಾಮ್ಸನ್‌ ಚುರುಕು ಫೀಲ್ಡಿಂಗ್‌ ಮೂಲಕ ಚೆಂಡನ್ನು ಪಂತ್‌ರತ್ತ ಎಸೆದು ರನೌಟ್‌ಗೆ ಕಾರಣರಾದ್ರು.

Ind vs WI 5th T20: ಡ್ರೀಂ ಟೀಂ ಫ್ಯಾಂಟೆಸಿ ಟಿಪ್ಸ್‌, ಪಿಚ್ ರಿಪೋರ್ಟ್‌, ಪ್ಲೇಯಿಂಗ್ 11

ನಿಧಾನವಾಗಿ ಸ್ಟಂಪ್‌ ಔಟ್‌ ಮಾಡಿ ರೋಹಿತ್ ಕೋಪಕ್ಕೆ ಗುರಿಯಾದ ರಿಷಭ್

ನಿಧಾನವಾಗಿ ಸ್ಟಂಪ್‌ ಔಟ್‌ ಮಾಡಿ ರೋಹಿತ್ ಕೋಪಕ್ಕೆ ಗುರಿಯಾದ ರಿಷಭ್

ಐದನೇ ಓವರ್‌ವರೆಗೂ ಅಬ್ಬರಿಸಿದ ನಿಕೋಲಸ್ ಪೂರನ್ ಮೊದಲ ಐದು ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಮೂಲಕ ಅಪಾಯಕಾರಿಯಾಗಿ ಕಾಣಿಸಿಕೊಂಡಿದ್ರು. ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ದುಬಾರಿಯಾಗಿ ಕಾಣಿಸಿಕೊಂಡ ನಿಕೋಲಸ್ ಪೂರನ್ ಕೊನೆಯ ಎಸೆತದಲ್ಲಿ ಸಿಂಗಲ್ಸ್ ಕದಿಯಲು ಹೋಗಿ ಎಡವಟ್ಟು ಮಾಡಿಕೊಂಡರು.

ನಾನ್‌ಸ್ಟ್ರೈಕ್‌ನಲ್ಲಿದ್ದ ಓಪನರ್ ಕೈಲ್ ಮೇಯರ್ಸ್ ರನ್‌ ಓಡಲು ಮೂರು ಹೆಜ್ಜೆ ಮುಂದಿಟ್ಟು ಹಿಂದೆ ಸರಿದ ಪರಿಣಾಮ ಅದಾಗಲೇ ಅರ್ಧ ಕ್ರೀಸ್ ಓಡಿದ್ದ ನಿಕೋಲಸ್ ಪೂರನ್‌ ಸುಲಭವಾಗಿ ರನೌಟ್‌ಗೆ ತುತ್ತಾದರು. ಚುರುಕು ಫೀಲ್ಡಿಂಗ್ ಮೂಲಕ ಸಂಜು ಸ್ಯಾಮ್ಸನ್, ವಿಕೆಟ್ ಕೀಪರ್ ರಿಷಭ್ ಪಂತ್‌ನತ್ತ ಚೆಂಡನ್ನ ಎಸೆದರು. ಈ ವೇಳೆಯಲ್ಲಿ ಕೈ ಸೇರಿದ ಕೂಡಲೇ ಬೆಲ್ಸ್‌ ಎಗರಿಸದೇ ಹುಡುಗಾಟವಾಡಿದ ರಿಷಭ್‌ ಪಂತ್ ಕೆಲ ಸೆಕೆಂಡ್‌ ಹಾಗೆಯೇ ನಿಂತರು. ಇದಕ್ಕಾಗಿ ನಾಯಕ ರೋಹಿತ್ ಶರ್ಮಾ ಕೋಪಗೊಂಡು ಸ್ಟಂಪ್‌ ಔಟ್ ಮಾಡುವಂತೆ ಗದರಿಸಿದ್ರು.

ಸ್ಟಂಪ್ ಎಗರಿಸಲು ಹೆಚ್ಚು ಕಾಲಾವಕಾಶ ತೆಗೆದುಕೊಂಡ ರಿಷಭ್ ಪಂತ್ ವಿರುದ್ಧ ನಾಯಕ ರೋಹಿತ್ ಶರ್ಮಾ ಸಿಟ್ಟಾದರು. ಅಪಾಯಕಾರಿ ಬ್ಯಾಟರ್‌ ನಿಕೋಲಸ್ ಔಟಾದ ಬಳಿಕ ಟೀಂ ಇಂಡಿಯಾ ಗೆಲುವಿನ ಹಾದಿ ಸುಗಮವಾಯಿತು.

ತನಗಿಂತ ದೊಡ್ಡವಳ ಜತೆ ಲವ್‌ನಲ್ಲಿ ಬಿದ್ದ ಪಂತ್: ವಯಸ್ಸಿನ ಅಂತರವೆಷ್ಟು? ಪಂತ್ ಪ್ರೇಯಸಿಯ ಉದ್ಯೋಗ?

ತಂಡದ ಪರ ಗರಿಷ್ಠ ಸ್ಕೋರ್ ಮಾಡಿದ ರಿಷಭ್ ಪಂತ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಭಾರತ ಪರ ರಿಷಭ್ ಪಂತ್ ಗರಿಷ್ಠ ಸ್ಕೋರರ್ ಆಗಿ ಕಾಣಿಸಿಕೊಂಡರು. 31 ಎಸೆತಗಳನ್ನ ಎದುರಿಸಿದ ಪಂತ್ ಆರು ಬೌಂಡರಿ ಸಹಿತ 44 ರನ್ ಕಲೆಹಾಕಿ ಒಬೆದ್ ಮೆಕಾಯ್‌ಗೆ ವಿಕೆಟ್ ಒಪ್ಪಿಸಿದ್ರು.

ಉಳಿದಂತೆ ರೋಹಿತ್ ಶರ್ಮಾ 33, ಸೂರ್ಯಕುಮಾರ್ ಯಾದವ್ 24, ದೀಪಕ್ ಹೂಡಾ 21, ರಿಷಭ್ ಪಂತ್ 44, ಸಂಜು ಸ್ಯಾಮ್ಸನ್ ಅಜೇಯ 30, ದಿನೇಶ್ ಕಾರ್ತಿಕ್ 6, ಅಕ್ಷರ್ ಪಟೇಲ್ ಅಜೇಯ 20 ರನ್ ಸಿಡಿಸಿ ತಂಡದ ಸ್ಕೋರ್ ಹೆಚ್ಚಳಕ್ಕೆ ಕಾರಣವಾದ್ರು.

59ರನ್‌ಗಳಿಂದ ಪಂದ್ಯ ಜಯಿಸಿದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 3-1 ಅಂತರದಲ್ಲಿ ಈಗಾಗಲೇ ಸರಣಿ ಜಯಿಸಿದ್ದು, ಅಂತಿಮ ಟಿ20 ಪಂದ್ಯ ಭಾನುವಾರ ನಡೆಯಲಿದೆ.

Story first published: Sunday, August 7, 2022, 15:24 [IST]
Other articles published on Aug 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X