ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಸರಣಿಯಲ್ಲಿ ಆತನಿಗೆ ಉತ್ಸಾಹ ಇರಲಿಲ್ಲ: ಸ್ಟಾರ್ ಆಟಗಾರನ ಪ್ರದರ್ಶನಕ್ಕೆ ಚೋಪ್ರ ಅಸಮಾಧಾನ

Ind vs WI: Aakash Chopra slams Kieron Pollard performence said It seemed he is not interested at all

ಭಾರತ ಹಾಗೂ ವೆಸ್ಟ್ ಇಂಡಿಸ್ ನಡುವಿನ ಸೀಮಿತ ಓವರ್‌ಗಳ ಸರಣಿ ಅಂತ್ಯವಾಗಿದೆ. ಈ ಸರಣಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಒಂದೇ ಒಂದು ಪಂದ್ಯವನ್ನು ಕುಡ ಗೆಲ್ಲು ಸಾಧ್ಯವಾಗದೆ ಎರಡು ಸರಣಿಯಲ್ಲಿಯೂ ವೈಟ್‌ವಾಶ್ ಮುಖಭಂಗಕ್ಕೆ ಒಳಗಾಗಿ ವಾಪಾಸಾಗಿದೆ. ಆದರೆ ಎರಡೂ ತಂಡಗಳ ಕೆಲ ಆಟಗಾರರು ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಓರ್ವ ಆಟಗಾರನ ಪ್ರದರ್ಶನಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನ ಸ್ಟಾರ್ ಆಟಗಾರನಾಗಿರುವ ಈ ಆಟಗಾರ ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ್ದರು. ಇದನ್ನು ಬೊಟ್ಟುಮಾಡಿರುವ ಆಕಾಶ್ ಚೋಪ್ರ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಈ ಸರಣಿಯ ಮೇಲೆ ಆ ಆಟಗಾರನಿಗೆ ಉತ್ಸಾಹವೇ ಇದ್ದಂತೆ ಕಾಣಿಸಲಿಲ್ಲ ಎಂದಿದ್ದಾರೆ.

ವೃದ್ದಿಮಾನ್ ಸಾಹಾಗೆ ಪತ್ರಕರ್ತನಿಂದ ಬೆದರಿಕೆ: BCCI ತುರ್ತಾಗಿ ತನಿಖೆ ನಡೆಸಬೇಕು ಎಂದ ರವಿಶಾಸ್ತ್ರಿವೃದ್ದಿಮಾನ್ ಸಾಹಾಗೆ ಪತ್ರಕರ್ತನಿಂದ ಬೆದರಿಕೆ: BCCI ತುರ್ತಾಗಿ ತನಿಖೆ ನಡೆಸಬೇಕು ಎಂದ ರವಿಶಾಸ್ತ್ರಿ

ಹಾಗಾದರೆ ಆಕಾಶ್ ಚೋಪ್ರ ಹೇಳಿದ ಆ ಆಟಗಾರ ಯಾರು? ಆ ಆಟಗಾರನ ಪ್ರದರ್ಶನ ಈ ಸರಣಿಯಲ್ಲಿ ಹೇಗಿತ್ತು? ಮುಂದೆ ಓದಿ..

ವಿಂಡೀಸ್ ನಾಯಕನ ವಿರುದ್ಧ ಚೋಪ್ರ ಕಿಡಿ

ವಿಂಡೀಸ್ ನಾಯಕನ ವಿರುದ್ಧ ಚೋಪ್ರ ಕಿಡಿ

ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಈ ಸರಣಿಯಲ್ಲಿ ನೀಡಿದ ಕಳಪೆ ಪ್ರದರ್ಶನಕ್ಕೆ ಕಿಡಿ ಕಾರಿದ್ದು ಬೇರೆ ಯಾರ ಮೇಲೂ ಅಲ್ಲ. ವೆಸ್ಟ್ ಇಂಡೀಸ್ ತಮಡದ ನಾಯಕ ಕಿರಾನ್ ಪೊಲಾರ್ಡ್ ವಿರುದ್ಧ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಪೊಲಾರ್ಡ್ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಕೇವಲ ಆಟಗಾರನಾಗಿ ಮಾತ್ರವಲ್ಲ ನಾಯಕನಾಗಿಯೂ ಪೊಲಾರ್ಡ್ ವಿಫಲವಾಗಿದ್ದಾರೆ ಎಂದು ಆಕಾಶ್ ಚೋಪ್ರ ಟೀಕಿಸಿದ್ದಾರೆ.

2 ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದ ಪೊಲಾರ್ಡ್

2 ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದ ಪೊಲಾರ್ಡ್

ವೆಸ್ಟ್ ಇಂಡೀಸ್ ವೈಟ್‌ಬಾಲ್ ತಂಡದ ನಾಯಕ ಕಿರಾನ್ ಪೊಲಾರ್ಡ್ ಭಾರತ ವಿರುದ್ಧದ ಏಕಸಿನ ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಗಾಯದ ಕಾರಣದಿಂದಾಗಿ ಕಣಕ್ಕಿಳಿದಿರಲಿಲ್ಲ. ಈ ಪಂದ್ಯದಲ್ಲಿ ನಿಕೋಲಸ್ ಪೂರನ್ ತಂಡವನ್ನು ಮುನ್ನಡೆಸಿದ್ದರು. ಟಿ20 ಸರಣಿಯಲ್ಲಿ ಆಡಲಿಳಿದ ಪೊಲಾರ್ಡ್ ನಿರ್ಣಾಯಕ ಆಟ ಪ್ರದರ್ಶಿಸಲು ವಿಫಲವಾಗಿದ್ದರು. ಈ ಟಿ20 ಸರಣಿಯಲ್ಲಿ ಕೂಡ ವೆಸ್ಟ್ ಇಂಡೀಸ್ ವೈಟ್‌ವಾಶ್‌ಗೆ ಒಳಗಾಯಿತು.

ಉತ್ಸಾಹವಿದ್ದಂತೆಯೇ ಕಾಣಿಸಲಿಲ್ಲ!

ಉತ್ಸಾಹವಿದ್ದಂತೆಯೇ ಕಾಣಿಸಲಿಲ್ಲ!

ಆಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕೆರೀಬಿಯನ್ ತಂಡದ ಕೆಲ ಆಟಗಾರರ ಪ್ರದರ್ಶನವ ಬಗ್ಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೊಲಾರ್ಡ್ ಬಗ್ಗೆ ಕೂಡ ಅಭಿಪ್ರಾಯವನ್ನು ಹಂಚಿಕೊಂಡರು. "ಕಿರಾನ್ ಪೊಲಾರ್ಡ್ ಈ ಸರಣಿಯಲ್ಲಿ ಸ್ವಲ್ಪವೂ ಉತ್ಸಾಹದಲ್ಲಿದ್ದಂತೆ ಕಾಣಿಸಲೇ ಇಲ್ಲ. ಅವರು ಬೌಲಿಂಗ್ ಕೂಡ ಮಾಡಲಿಲ್ಲ. ಬ್ಯಾಟಿಂಗ್ ಮಾಡಲು ಕಣಕ್ಕಿಳಿದಾಗ ಹಿಂದಿನ ಆಟಗಾರನಂತೆ ಆತ ಕಂಡು ಬರಲಿಲ್ಲ. ಆತ ಮುಂಬೈ ಇಂಡಿಯನ್ಸ್ ಪರವಾಗಿ ಇದಕ್ಕಿಂತ ಹೆಚ್ಚು ಉತ್ತಮ ಆಟಗಾರ ಎನಿಸಿಕೊಳ್ಳುತ್ತಾರೆ" ಎಂದು ಆಕಾಶ್ ಚೋಪ್ರ ಹೇಳಿಕೆ ನೀಡಿದ್ದಾರೆ.

ಐಪಿಎಲ್ ಯಾವಾಗ ಶುರು ಆಗತ್ತೆ ಗೊತ್ತಾ! | Oneindia Kannada
ಇತರ ಆಟಗಾರರಿಗೆ ಸ್ಪೂರ್ತಿ ನೀಡುವುದಿಲ್ಲ!

ಇತರ ಆಟಗಾರರಿಗೆ ಸ್ಪೂರ್ತಿ ನೀಡುವುದಿಲ್ಲ!

ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಆತ ವೆಸ್ಟ್ ಇಂಡೀಸ್ ಪರವಾಗಿ ಆಡುವಾಗ ತನ್ನ ಸಾಮರ್ಥ್ಯದ ಅರ್ಧದಷ್ಟು ಮಾತ್ರವೇ ಆಡುತ್ತಿದ್ದಾರೆ ಎನಿಸುತ್ತದೆ. ಅದು ನೀವು ಟಿ20 ವಿಶ್ವಕಪ್‌ನಲ್ಲಿ ಆಡಿದ್ದನ್ನು ನೋಡಿದಾಗ ಅಥವಾ ಇಲ್ಲಿ ನೀಡಿದ ಪ್ರದರ್ಶನವನ್ನು ನೋಡಿದಾಗ ಹೀಗೆಯೇ ಅನಿಸಿತು. ಅದು ನಾಯಕನಾಗಿ ಫೀಲ್ಡಿಂಗ್ ನಿಲ್ಲಿಸುವಾಗ ಆಗಿರಬಹುದು ಅಥವಾ ಬೌಲಿಂಗ್ ಮಾಡದ ಬಗ್ಗೆ ಆಗಿರಬಹುದು. ಇದು ತಂಡದ ಇತರ ಆಟಗಾರರಿಗೆ ಸ್ಪೂರ್ತಿ ನೀಡುವುದಿಲ್ಲ" ಎಂದು ಆಕಾಶ್ ಚೋಪ್ರ ಹೇಳಿದ್ದಾರೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕಿರಾನ್ ಪೊಲಾರ್ಡ್ ಗಳಿಸಿದ್ದು ಕೇವಲ 32 ರನ್ ಮಾತ್ರ. ಅದು ಕೂಡ 110.34ರ ಸ್ಟ್ರೈಕ್‌ರೇಟ್‌ನಲ್ಲಿ. ಇನ್ನು ಈ ಸರಣಿಯಲ್ಲಿ ಹಾಕಿದ್ದ ಏಕೈಕ ಓವರ್‌ನಲ್ಲಿ ಪೊಲಾರ್ಡ್ 14 ರನ್ ನೀಡಿದ್ದರು.

Story first published: Tuesday, February 22, 2022, 10:06 [IST]
Other articles published on Feb 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X