ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆನ್‌ಲೈನ್‌ ಸಂವಾದದದಲ್ಲಿ ಟೀಮ್ ಇಂಡಿಯಾ ವೇಗಿಗಳಿಗೆ ವಾರ್ನರ್ ಮೆಚ್ಚುಗೆ

india-has-the-best-pace-attack-against-left-handers-david-warner

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ಮತ್ತು ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ನೇರ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಸ್ಟಾರ್‌ ಆಟಗಾರರು ಪರಸ್ಪರ ದೇಶಗಳ ಕ್ರಿಕೆಟ್ ಬಗ್ಗೆ ಮಾತುಗಳನ್ನು ಆಡಿದರು.

ಡೇವಿಡ್ ವಾರ್ನರ್ ಟೀಮ್ ಇಂಡಿಯಾ ವೇಗಿಗಳ ಬಗ್ಗೆ ಈ ಸಂದರ್ಭದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದರು. ಭಾರತೀಯ ತಂಡದ ವೇಗಿಗಳು ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲನ್ನು ಒಡ್ಡುತ್ತಾರೆ ಎಂದು ಡೇವಿಡ್ ವಾರ್ಮರ್ ಹೇಳಿದ್ದಾರೆ. ಮೊಹಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ವಿಶೇಷವಾಗಿ ಎಡಗೈ ಆಟಗಾರರಿಗೆ ಕಠಿಣ ಸವಾಲಾಗಿರುತ್ತಾರೆ ಎಂದು ಅವರು ಹೇಳಿದರು.

ಟಿ20 ವಿಶ್ವಕಪ್ ತಂಡ ಆಯ್ಕೆ ಮಾಡಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ : ಬಲಿಷ್ಠ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ!ಟಿ20 ವಿಶ್ವಕಪ್ ತಂಡ ಆಯ್ಕೆ ಮಾಡಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ : ಬಲಿಷ್ಠ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ!

ಇನ್ನು ಇದೇ ಸಂದರ್ಭದಲ್ಲಿ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಟೆಸ್ಟ್ ಸರಣಿ ಗೆದ್ದ ಸಂದರ್ಭವನ್ನು ವಾರ್ನರ್ ನೆನಪಿಸಿಕೊಂಡರು. ಆ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಪಂದ್ಯವನ್ನು ನೋಡುವಾಗ ನಾನು ತುಂಬಾ ಅಸಹಾಯಕನೆಂಬಂತೆ ಭಾಸವಾಗುತ್ತಿತ್ತು ಎಂದು ಹೇಳಿದ್ದಾರೆ. ಬಾಲ್ ಟ್ಯಾಂಪರಿಂಗ್ ಕಾರಣದಿಂದ ಆ ಸಂದರ್ಭದಲ್ಲಿ ವಾರ್ನರ್ ಕ್ರಿಕೆಟ್‌ನಿಂದ ನಿಷೇಧಗೊಂಡಿದ್ದರು.

ಇದೇ ಸಂದರ್ಭದಲ್ಲಿ ವಾರ್ನರ್ ಭಾರತವನ್ನು ಭಾರತದಲ್ಲಿ ಎದುರಿಸುವುದು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಕಠಿಣವಾದ ಸವಾಲು ಎಂದು ಹೇಳಿದ್ದಾರೆ. ಭಾರತದಲ್ಲಿ ಕ್ರಿಕೆಟ್‌ ಆಡುವುದೆಂದರೆ ನನಗೆ ತುಂಬಾ ಇಷ್ಟ, ಪ್ರತಿಯೊಬ್ಬರೂ ನಮ್ಮ ವಿರೋಧಿಗಳಾಗಿರುತ್ತಾರೆ, ವಾತಾವರಣವೂ ಕೂಡ ಎಂದ ವಾರ್ನರ್ ಆಸ್ಟ್ರೇಲಿಯಾಗೆ ಬಂದಾಗ ನಿಮಗೂ ಹಾಗೆಯೇ ಅನಿಸುತ್ತದೆ ಎಂದು ರೋಹಿತ್ ಶರ್ಮಾ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

Story first published: Friday, May 8, 2020, 22:29 [IST]
Other articles published on May 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X