ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್‌ ಟ್ರೋಫಿ ಸೋಲಿನಿಂದ ಕೊಹ್ಲಿ ಪಡೆ ಕಲಿತ ಪಾಠವೇನು ಗೊತ್ತಾ?

ICC World Cup 2019 : ವಿಶ್ವಕಪ್ ಗೂ ಮೊದಲು ಪಾಕಿಸ್ತಾನ ತಂಡವನ್ನು ನೆನಪಿಕೊಂಡ ಕೊಹ್ಲಿ..!
India have learnt from mistakes of 2017 Champions Trophy, says Virat Kohli

ಲಂಡನ್‌, ಜೂನ್‌ 04: 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸನುಭವಿಸಿದ ಸೋಲಿನಿಂದ ಟೀಮ್‌ ಇಂಡಿಯಾ ಸದಸ್ಯರು ಸಾಕಷ್ಟು ಪಾಠ ಕಲಿತಿದ್ದಾರೆ ಎಂದು ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಲೀಗ್‌ ಹಂತದಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿದ್ದ ಭಾರತ ತಂಡ ಫೈನಲ್‌ನಲ್ಲಿ ಅಚ್ಚರಿಯ ಸೋಲುಭವಿಸಿತ್ತು. ಈ ಸೋಲಿನಿಂದ ಕಲಿತ ಮೊದಲ ಪಾಠವೇನೆಂದರೆ ತಂಡದಲ್ಲಿ ರಿಸ್ಟ್‌ ಸ್ಪಿನ್ನರ್‌ ಒಬ್ಬನನ್ನು ಆಡಿಸುವುದು ಎಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಕ್ಕೂ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದಾರೆ.

ಟೀಮ್‌ ಇಂಡಿಯಾಗೆ ಶುಭಸುದ್ದಿ, ದ. ಆಫ್ರಿಕಾದ ಈ ವೇಗಿ ವಿಶ್ವಕಪ್‌ನಿಂದಲೇ ಔಟ್‌!ಟೀಮ್‌ ಇಂಡಿಯಾಗೆ ಶುಭಸುದ್ದಿ, ದ. ಆಫ್ರಿಕಾದ ಈ ವೇಗಿ ವಿಶ್ವಕಪ್‌ನಿಂದಲೇ ಔಟ್‌!

ಇನ್ನು ಪ್ರಸಕ್ತ ಚಾಲ್ತಿಯಲ್ಲಿರುವ 12ನೇ ಆವೃತ್ತಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿದ್ದು, ಬುಧವಾರ ಸೌತ್‌ಹ್ಯಾಂಪ್ಟನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಪಾಯಕಾರಿ ದಕ್ಷಿಣ ಆಫ್ರಿಕಾ ಎದುರು ತನ್ನ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್‌: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ 11 ತಂಡವಿಶ್ವಕಪ್‌: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ 11 ತಂಡ

"ಚಾಂಪಿಯನ್ಸ್‌ ಟ್ರೋಫಿ ಸೋಲಿನಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಫೈನಲ್‌ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ ತಂಡ ಟ್ರೋಫಿ ಗೆದ್ದಿತ್ತು. ಈ ಪಂದ್ಯದಲ್ಲಿ ನಮ್ಮ ತಂಡ ಅನುಭವಿಸಿದ ಎಲ್ಲಾ ಕೊರತೆಗಳನ್ನು ಇದೀಗ ನಿವಾರಿಸಲಾಗಿದ್ದು. ಮೊದಲಿಗೆ ಮಧ್ಯದ ಓವರ್‌ಗಳಲ್ಲಿ ವಿಕೆಟ್‌ ಪಡೆಯಲು ಆಡುವ 11ರ ಬಳಗದಲ್ಲಿ ರಿಸ್ಟ್‌ ಸ್ಪಿನ್ನರ್‌ಗಳನ್ನು ಆಡಿಸುವುದನ್ನು ಬಳಕೆಗೆ ತಂದಿದ್ದೇವೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಇದ್ದ ತಂಡಕ್ಕಿಂತಲೂ ನಮ್ಮ ತಂಡ ಇದೀಗ ಮತ್ತಷ್ಟು ಬಲಿಷ್ಠವಾಗಿದೆ,'' ಎಂದು ಕೊಹ್ಲಿ ಹೇಳಿದ್ದಾರೆ.

ವಿಶ್ವಕಪ್‌: ಪಾಕ್‌ ವಿರುದ್ಧ ಇಂಗ್ಲೆಂಡ್‌ ಸೋಲಿಗೆ ಇದೊಂದೇ ಕಾರಣವಂತೆ!ವಿಶ್ವಕಪ್‌: ಪಾಕ್‌ ವಿರುದ್ಧ ಇಂಗ್ಲೆಂಡ್‌ ಸೋಲಿಗೆ ಇದೊಂದೇ ಕಾರಣವಂತೆ!

30 ವರ್ಷದ ಅನುಭವಿ ಬ್ಯಾಟ್ಸ್‌ಮನ್‌ ವಿರಾಟ್‌, ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಲೀಗ್‌ ಪಂದ್ಯಗಳನ್ನು ಗೆಲ್ಲಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Tuesday, June 4, 2019, 23:30 [IST]
Other articles published on Jun 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X