ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2022ರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ; ಈ ಏಕೈಕ ಭಾರತೀಯ ಆಟಗಾರ ನಾಮನಿರ್ದೇಶನ

Indias Batter Suryakumar Yadav Nominee For ICC T20 Cricketer Award 2022

ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು 2022ರ ಐಸಿಸಿ ಪುರುಷರ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಏಕೈಕ ಭಾರತೀಯ ಆಟಗಾರನಾಗಿದ್ದಾರೆ.

ಸೂರ್ಯಕುಮಾರ್ ಯಾದವ್ ಜೊತೆಗೆ ನಾಮನಿರ್ದೇಶನಗೊಂಡ ಇತರೆ ಆಟಗಾರರೆಂದರೆ, ಜಿಂಬಾಬ್ವೆಯ ಸಿಕಂದರ್ ರಜಾ, ಇಂಗ್ಲೆಂಡ್‌ನ ಸ್ಯಾಮ್ ಕರ್ರಾನ್ ಮತ್ತು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್.

IND vs SL: ಟಿ20, ODI ತಂಡಕ್ಕೆ ಆಯ್ಕೆಯಾಗದ ನಂತರ ಶಾಯರಿ ಮೂಲಕ ಹತಾಶೆ ಹೊರಹಾಕಿದ ಪೃಥ್ವಿ ಶಾIND vs SL: ಟಿ20, ODI ತಂಡಕ್ಕೆ ಆಯ್ಕೆಯಾಗದ ನಂತರ ಶಾಯರಿ ಮೂಲಕ ಹತಾಶೆ ಹೊರಹಾಕಿದ ಪೃಥ್ವಿ ಶಾ

ಭಾರತದ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ 2022ರಲ್ಲಿ ಟಿ20 ಕ್ರಿಕೆಟ್‌ನಲ್ಲಿ 1164 ರನ್ ಗಳಿಸುವ ಮೂಲಕ ತನ್ನದೇ ದೇಶದ ಇತರ ಆಟಗಾರರಿಗಿಂತ ಸ್ಪರ್ಧೆಯಲ್ಲಿ ಮುಂದಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಸೂರ್ಯಕುಮಾರ್ ಯಾದವ್‌ಗೆ ಅತ್ಯಂತ ಹತ್ತಿರವಾಗಿದ್ದರೂ, ಸೂರ್ಯಕುಮಾರ್ ಯಾದವ್ ಜೊತೆಗಿನ ಅಂಕಿಸಂಖ್ಯೆಯಲ್ಲಿ ಭಾರಿ ಕೊರತೆಯನ್ನು ಹೊಂದಿದ್ದಾರೆ ಮತ್ತು 2022ರ ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಶತಕವನ್ನು ಸೇರಿ 781 ರನ್ ಗಳಿಸಿದ್ದಾರೆ.

Indias Batter Suryakumar Yadav Nominee For ICC T20 Cricketer Award 2022

ಸೂರ್ಯಕುಮಾರ್ ಯಾದವ್ ಅವರ 68 ಸಿಕ್ಸರ್‌ಗಳು ಟಿ20 ಪಂದ್ಯಗಳಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಯಾರಾದರೂ ದಾಖಲಿಸಿದ ಗರಿಷ್ಠ ಸಿಕ್ಸರ್‌ಗಳಾಗಿವೆ. ಈ ವರ್ಷದಲ್ಲಿ ಎರಡು ಶತಕ ಮತ್ತು ಒಂಬತ್ತು ಅರ್ಧಶತಕಗಳೊಂದಿಗೆ ಸೀಊರ್ಯಕುಮಾರ್ ಯಾದವ್ ಪುರುಷರ ಟಿ20 ಬ್ಯಾಟರ್ ಆಗಿ ಮೂಡಿಬಂದರು.

ಸೂರ್ಯಕುಮಾರ್ ಯಾದವ್ ಜೊತೆಗೆ ಟಿ20 ವಿಶ್ವಕಪ್ ವಿಜೇತ ಮತ್ತು ಸರಣಿ ಶ್ರೇಷ್ಠ ಆಟಗಾರ ಸ್ಯಾಮ್ ಕರ್ರಾನ್ ಕೂಡ 2022ರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆಯುವ ಮುಂಚೂಣಿಯಲ್ಲಿರುವವರಲ್ಲಿ ಒಬ್ಬರಾಗಿದ್ದಾರೆ. ಸ್ಯಾಮ್ ಕರ್ರಾನ್ ಟಿ20 ವಿಶ್ವಕಪ್‌ನುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದರು ಮತ್ತು ವಿಕೆಟ್ ತೆಗೆದುಕೊಳ್ಳುವ ಅಂಕಿಅಂಶಗಳಲ್ಲಿ ಪ್ರಾಬಲ್ಯ ಸಾಧಿಸಿದರು.

Women's T20 World Cup 2023: ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ಭಾರತ ತಂಡ ಪ್ರಕಟWomen's T20 World Cup 2023: ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ಭಾರತ ತಂಡ ಪ್ರಕಟ

ಸಿಕಂದರ್ ರಾಜಾ 2022ರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಪಟ್ಟಿಯಲ್ಲಿ ಅಂಡರ್‌ಡಾಗ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಟಿ20 ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ಪರ ಅತ್ಯುತ್ತಮ ಋತುವನ್ನು ಹೊಂದಿದ್ದಾರೆ. ಸಿಕಂದರ್ ರಾಜಾ ಕೇವಲ 24 ಪಂದ್ಯಗಳಿಂದ 735 ರನ್ ಮತ್ತು 25 ವಿಕೆಟ್ ಪಡೆದಿದ್ದಾರೆ.

Indias Batter Suryakumar Yadav Nominee For ICC T20 Cricketer Award 2022

ಈ ಮೂವರನ್ನು ಹೊರತುಪಡಿಸಿ, ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ 25 ಪಂದ್ಯಗಳಿಂದ 960 ರನ್ ಗಳಿಸಿದ ನಂತರ ನಾಲ್ವರ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಮೊಹಮ್ಮದ್ ರಿಜ್ವಾನ್ 2021ರಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದರು.

2022 ಭಾರತೀಯ ಕ್ರಿಕೆಟ್‌ಗೆ ಒಟ್ಟಾರೆ ಕಳಪೆ ವರ್ಷದ ನಂತರ ಭಾರತದ ಇತರ ಯಾವುದೇ ಆಟಗಾರರು ಪಟ್ಟಿಯಲ್ಲಿ ಹೆಸರಿಸಿಲ್ಲ. ಭಾರತ ತಂಡ 2022ರಲ್ಲಿ ಅತ್ಯುತ್ತಮ ದ್ವಿಪಕ್ಷೀಯ ದಾಖಲೆಯ ಹೊರತಾಗಿಯೂ ಐಸಿಸಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು.

ಸೂರ್ಯಕುಮಾರ್ ಯಾದವ್ ಅವರು 2022ರಲ್ಲಿ ಆಡಿದ ಎಲ್ಲಾ ಸರಣಿಗಳಲ್ಲಿ ಅತ್ಯುತ್ತಮ ಬ್ಯಾಟರ್ ಆಗಿದ್ದರು ಮತ್ತು ತಮ್ಮ ದಾರಿಯುದ್ದಕ್ಕೂ ಹಲವಾರು ಸ್ಮರಣೀಯ ಹೊಡೆತಗಳನ್ನು ಹೊಡೆದರು.

Story first published: Thursday, December 29, 2022, 16:27 [IST]
Other articles published on Dec 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X