ಭಾರತ vs ಆಸ್ಟ್ರೇಲಿಯಾ: ಯುಎಇ ತಲುಪಿದ ಕೋಚ್ ರವಿ ಶಾಸ್ತ್ರಿ

ದುಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ಕೋಚಿಂಗ್ ಸಿಬ್ಬಂದಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಸಿದ್ಧರಾಗಿರುವ ಈ ತಂಡ ದುಬೈನಲ್ಲಿರುವ ಬಯೋ ಬಬಲ್ ಒಳಗೆ ಪ್ರವೇಶಿಸಿದೆ.
ಮುಂದಿನ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಅಲ್ಲಿ ಸುಮಾರು 2 ತಿಂಗಳ ಕಾಲ ಇರಲಿದೆ. ಹೀಗಾಗಿ ಆಸ್ಟ್ರೇಲಿಯಾಕ್ಕೆ ಹೊರಡುವ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯರನ್ನು ಜೊತೆಗೂಡಲು ಭಾರತ ತಂಡ ಯುಎಇಗೆ ಬಂದಿದೆ.
ಮುಖ್ಯ ಕೋಚ್ ರವಿ ಶಾಸ್ತ್ರಿ ಜೊತೆಗೆ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ತಮ ತಮಗೆ ಸೂಚಿಸಲಾಗಿರುವ ನಗರಗಳಿಗೆ ಭಾನುವಾರ ಬಂದಿದ್ದಾರೆ. ಅಲ್ಲಿ ಅವರಿಗಾಗಿ ಪ್ರತ್ಯೇಕ ಬಯೋ ಬಬಲ್ ಸಿದ್ಧಪಡಿಸಿಡಲಾಗಿದೆ.
'ಮುಖ್ಯ ಕೋಚ್ ಮತ್ತು ಅವರ ತಂಡ ನಿನ್ನೆ ಬಂದಿದ್ದಾರೆ. ಅವರು ಈಗ ಪ್ರತ್ಯೇಕವಾಗಿರುತ್ತಾರೆ ಮತ್ತು ಅವರು ಮೂರು ಕಡ್ಡಾಯ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಪಡೆಯುತ್ತಿದ್ದಾರೆ. ಚೇತೇಶ್ವರ ಪೂಜಾರ, ಹನುಮ ವಿಹಾರಿ ಜೊತೆಗೆ ಸಹಾಯಕ ಸಿಬ್ಬಂದಿಗೆ ಪ್ರತ್ಯೇಕ ಜೈವಿಕ ಪರದೆ (ಬಯೋ ಬಬಲ್) ರಚಿಸಲಾಗಿದೆ,' ಎಂದು ಬಿಸಿಸಿಐ ಮೂಲ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications