ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

11 ನೇ ಆಟಗಾರ ಜಹೀರ್ ಖಾನ್ 75, ಸಚಿನ್ 248*

ಬೆಂಗಳೂರು, ಜೂ. 08: ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಬಾಂಗ್ಲಾ ವಿರುದ್ಧ ಟೆಸ್ಟ್ ಪಂದ್ಯಗಳನ್ನು ಆಡಲು ಢಾಕಾಕ್ಕೆ ತೆರಳಿದೆ. ಜೂನ್ 10 ರಿಂದ ಉಭಯ ತಂಡಗಳ ನಡುವೆ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಇಲ್ಲಿಯವರೆಗೆ ಎರಡು ತಂಡಗಳ ನಡುವೆ ಒಟ್ಟು ಏಳು ಟೆಸ್ಟ್ ಪಂದ್ಯಗಳು ನಡೆದಿದ್ದು 6 ರಲ್ಲಿ ಭಾರತ ವಿಜಯ ಸಾಧಿಸಿದ್ದು ಒಂದು ಪಂದ್ಯ ಡ್ರಾ ಆಗಿದೆ. ಎಲ್ಲ ಪಂದ್ಯಗಳು ಬಾಂಗ್ಲಾದೇಶದಲ್ಲೇ ನಡೆದಿರುವುದು ವಿಶೇಷ. ನಡೆದಿರುವ ಪಂದ್ಯಗಳು ಕಡಿಮೆಯೇ ಇರಬಹುದು ಆದರೆ ಅವುಗಳ ಪುಟವನ್ನು ಕೆದಕಿದರೆ ಇತಿಹಾಸ ಅನಾವರಣ ಆಗುತ್ತದೆ.[ಬಾಂಗ್ಲಾದೇಶ ಪ್ರವಾಸದಿಂದ ಕೆಎಲ್ ರಾಹುಲ್ ಔಟ್]

cricket

ಸೌರವ್ ಗಂಗೂಲಿ ನಾಯಕತ್ವದ ತಂಡ 2004 ರಲ್ಲಿ ಬಾಂಗ್ಲಾ ಪ್ರವಾಸ ಕೈಗೊಂಡಿತ್ತು. ಟಾಸ್ ಗೆದ್ದ ಗಂಗೂಲಿ ಬಾಂಗ್ಲಾ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಇರ್ಫಾನ್ ಪಠಾಣ್ ಮಾರಕ ದಾಳಿಗೆ ಸಿಕ್ಕ ಬಾಂಗ್ಲಾ 57.5 ಓವರ್ ಗಳಲ್ಲಿ 184 ರನ್ ಗಳಿಸಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ಮೊಹಮದ್ ಅಶ್ರಫುಲ್ 135 ಎಸೆತಗಳಲ್ಲಿ 60 ರನ್ ಗಳಿಸಿದ್ದೇ ಬಾಂಗ್ಲಾ ಪರ ಅಧಿಕ ಮೊತ್ತವಾಗಿತ್ತು.[ಭಾರತದ ವಿರುದ್ಧದ ಬಾಂಗ್ಲಾ ತಂಡ]

ಬಾಂಗ್ಲಾ ಪ್ರವಾಸದ ವೇಳಾಪಟ್ಟಿ ನೋಡಿಬಾಂಗ್ಲಾ ಪ್ರವಾಸದ ವೇಳಾಪಟ್ಟಿ ನೋಡಿ

ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಮೇಲಿನ ಕ್ರಮಾಂಕದ ಆಟಗಾರರು ಬೇಗನೆ ಫೆವಿಲಿಯನ್ ಹಾದಿ ಹಿಡಿದರು. ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಸೊನ್ನೆ ಸುತ್ತಿದರು. ಒಂದು ಹಂತದಲ್ಲಿ ಭಾರತ 68 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿತ್ತು. ಆದರೆ ನಾಯಕ ಗಂಗೂಲಿ ಮತ್ತು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜವಾಬ್ದಾರಿ ನಿರ್ವಹಿಸಿದರು.

164 ರನ್ ಗಳ ಜತೆಯಾಟ ನೀಡಿದ ನಂತರ ಗಂಗೂಲಿ ನಿರ್ಗಮಿಸಿದರು. ಕೊನೆಯಲ್ಲಿ ಭಾರತ 9 ವಿಕೆಟ್ ಕಳೆದುಕೊಂಡು 393 ರನ್ ಗಳಿಸಿತ್ತು. ಒಂದೆಡೆ ಶತಕ ದಾಖಲಿಸಿದ್ದ ಸಚಿನ್ ಅಜೇಯರಾಗಿ ಉಳಿದಿದ್ದು 34 ಶತಕಗಳ ಗಾವಾಸ್ಕರ್ ದಾಖಲೆಯನ್ನು ಸರಿಗಟ್ಟಿದ್ದರು.[ಭಾರತ ತಂಡಲ್ಲಿ ಯಾರ್ಯಾರಿದ್ದಾರೆ]

ಆದರೆ 11 ನೇ ಆಟಗಾರರಾಗಿ ಕಣಕ್ಕಿಳಿದ ಜಹೀರ್ ಖಾನ್ ಬಾಂಗ್ಲಾ ಬೌಲರ್ ಗಳನ್ನು ಬೆಂಡೆತ್ತಲು ಆರಂಭ ಮಾಡಿದರು. ಸಚಿನ್ ಜತೆಗೂಡಿದ ಜಹೀರ್ ಖಾನ್ 75 ರನ್ ಗಳಿಸಿದರು. ಕೊನೆ ವಿಕೆಟ್ ಗೆ 31 ಓವರ್ ಗಳಲ್ಲಿ 133 ರನ್ ಜತೆಯಾಟ ಮೂಡಿಬಂತು. ಪಾರ್ಟ್ ಟೈಮ್ ಬೌಲರ್ ಮೊಹಮದ್ ಅಶ್ರಫುಲ್ ಗೆ ಜಹೀರ್ ಅಂತಿಮವಾಗಿ ವಿಕೆಟ್ ಒಪ್ಪಿಸಿದರು.

ಜಹೀರ್ ಇನಿಂಗ್ಸ್ ನಲ್ಲಿ 10 ಬೌಂಡರಿಗಳಿದ್ದವು. 115 ಚೆಂಡು ಎದುರಿಸಿದ ಖಾನ್ ಎರಡು ಗಂಟೆಗೂ ಅಧಿಕ ಕಾಲ ಕ್ರೀಸ್ ನಲ್ಲಿ ಇದ್ದರು. ಮತ್ತೊಂದು ಕಡೆ ಇದ್ದ ಸಚಿನ್ 379 ಎಸೆತಗಳಲ್ಲಿ 248 ರನ್ ಗಳಿಸಿದರು.

ಅಂತಿಮವಾಗಿ ಭಾರತ 526 ರನ್ ಗಳಿಸಿತು. ಒಟ್ಟು 342 ರನ್ ಗಳ ಲೀಡ್ ಪಡೆದುಕೊಂಡಿತು. ಎರಡನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ 202 ರನ್ ಗಳಿಸಿ ಆಲೌಟ್ ಆಯಿತು. ಭಾರತಕ್ಕೆ ಇನಿಂಗ್ಸ್ ಮತ್ತು 140 ರನ್ ಗಳ ವಿಜಯ ಸಿಕ್ಕಿತು. ಎರಡನೇ ಇನಿಂಗ್ಸ್ ನಲ್ಲಿ ಬಾಂಗ್ಲಾದ 6 ವಿಕೆಟ್ ಕಿತ್ತ ಇರ್ಫಾನ್ ಪಠಾಣ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಆದರೆ ಭಾರತದ ಪರ 11 ನೇ ಆಟಗಾರನ ಅತಿಹೆಚ್ಚು ಸ್ಕೋರ್ ಸಾಧನೆ ಜಹೀರ್ ಖಾನ್ ಹೆಸರಿನಲ್ಲಿ ಇನ್ನು ಹಾಗೆ ಉಳಿದುಕೊಂಡಿದೆ.(ಒನ್ಇಂಡಿಯಾ ನ್ಯೂಸ್)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X