ಭಾರತ vs ಇಂಗ್ಲೆಂಡ್: ಕೆಟ್ಟ ದಾಖಲೆ ಬರೆದ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ!

ಲಂಡನ್: ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ನಾಯಕ ವಿರಾಟ್ ಕೊಹ್ಲಿ, ಗ್ರೇಟ್ ವಾಲ್-2 ಎಂದು ಕರೆಸಿಕೊಂಡಿದ್ದ ಚೇತೇಶ್ವರ್ ಪೂಜಾರ ಮತ್ತು ಬೆಸ್ಟ್ ಟೆಸ್ಟ್‌ ನಾಯಕ ಅನ್ನಿಸಿಕೊಂಡಿದ್ದ ಅಜಿಂಕ್ಯ ರಹಾನೆ ಬೇಡದ ದಾಖಲೆ ಬರೆದಿದ್ದಾರೆ. ಲಂಡನ್‌ನ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಮಧ್ಯಮ ಕ್ರಮಾಂದಲ್ಲಿ ಆಡಿದ್ದ ಮೂವರೂ ಮತ್ತೆ ವೈಫಲ್ಯ ಮುಂದುವರೆಸಿದ್ದಾರೆ. ಭಾರತದ ಸದ್ಯದ ಮಧ್ಯಮ ಕ್ರಮಾಂಕ ದುರ್ಬಲ ಎನ್ನುವಂತಾಗಿದೆ.

ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಉನ್ಮುಕ್ತ್ ಚಂದ್, ಯುಎಸ್ ಸೇರ್ಪಡೆ ಸಾಧ್ಯತೆಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಉನ್ಮುಕ್ತ್ ಚಂದ್, ಯುಎಸ್ ಸೇರ್ಪಡೆ ಸಾಧ್ಯತೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯದ ಭಾರತದ ಮೊದಲನೇ ಇನ್ನಿಂಗ್ಸ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಮತ್ತೆ ನಿರಾಶೆಯ ಬ್ಯಾಟಿಂಗ್‌ ನೀಡಿದ್ದಾರೆ. ಇದರಲ್ಲಿ ಕೊಹ್ಲಿಯಾದರೂ 40+ ರನ್ ಬಾರಿಸಿ ಸ್ವಲ್ಪ ಸಮಧಾನ ಮೂಡಿಸಿದರಾದರೂ ಪೂಜಾರ, ರಹಾನೆ ಮತ್ತದೇ ಬೆರಳೆಣಿಕೆಯ ರನ್‌ಗೆ ವಿಕೆಟ್‌ ನೀಡಿದರು.

ಮಧ್ಯಮ ಕ್ರಮಾಂಕದಿಂದ ಕಳಪೆ ಬ್ಯಾಟಿಂಗ್‌

ಮಧ್ಯಮ ಕ್ರಮಾಂಕದಿಂದ ಕಳಪೆ ಬ್ಯಾಟಿಂಗ್‌

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಉತ್ತಮ ರನ್ ಕೊಡುಗೆ ನೀಡಿದರು. ಅನುಭವಿ ರೋಹಿತ್ 145 ಎಸೆತಗಳಲ್ಲಿ 83 ರನ್ ಬಾರಿಸಿದರೆ, ಕನ್ನಡಿಗ ರಾಹುಲ್ 250 ಎಸೆತಗಳಲ್ಲಿ 129 ರನ್ ಬಾರಿಸಿದರು. ರೋಹಿತ್ ಅವರು ಜೇಮ್ಸ್ ಆ್ಯಂಡರ್ಸನ್‌ಗೆ ಬೌಲ್ಡ್ ಆಗಿ, ಕೆಎಲ್ ರಾಹುಲ್ ಆಲಿ ರಾಬಿನ್ಸನ್ ಓವರ್‌ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದ ಬಳಿಕ 3ನೇ ಕ್ರಮಾಂಕದಲ್ಲಿ ಬಂದಿದ್ದ ಚೇತೇಶ್ವರ್ 23 ಎಸೆತಗಳಲ್ಲಿ 9 ರನ್ ಬಾರಿಸಿ ಜೇಮ್ಸ್ ಆ್ಯಂಡರ್ಸನ್ ಓವರ್‌ನಲ್ಲಿ ಜಾನಿ ಬೇರ್ಸ್ಟೋವ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ನಡೆದರು. ಅದಾಗಿ 4ನೇ ಕ್ರಮಾಂಕದಲ್ಲಿ ಬಂದ ವಿರಾಟ್ ಕೊಹ್ಲಿ 103 ಎಸೆತಗಳಲ್ಲಿ 42 ರನ್ ಬಾರಿಸಿ ಆಲಿ ರಾಬಿನ್ಸನ್ ಓವರ್‌ನಲ್ಲಿ ಜೋ ರೂಟ್‌ಗೆ ಕ್ಯಾಚಿತ್ತರು. 5ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದ ಅಜಿಂಕ್ಯ ರಹಾನೆ 23 ಎಸೆತಗಳಲ್ಲಿ 1 ರನ್ ಬಾರಿಸಿ ಆ್ಯಂಡರ್ಸನ್ ಓವರ್‌ನಲ್ಲಿ ಜೋ ರೂಟ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಭಾರತ ಪರ ಸ್ವಲ್ಪ ಹೋರಾಟ ನಡೆಸಿದ್ದು ರಿಷಭ್ ಪಂತ್ (37 ರನ್) ಮತ್ತು ರವೀಂದ್ರ ಜಡೇಜಾ (40) ಮಾತ್ರ.

ಮೂವರ ಹೆಸರಿನಲ್ಲಿ ಕೆಟ್ಟ ದಾಖಲೆ

ಮೂವರ ಹೆಸರಿನಲ್ಲಿ ಕೆಟ್ಟ ದಾಖಲೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿ ಕಳಪೆ ಬ್ಯಾಟಿಂಗ್ ನೀಡಿದ್ದಕ್ಕಾಗಿ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಗುರುತಿಸಿಕೊಂಡಿದ್ದಾರೆ. 2020ರಿಂದಲೂ ಈ ಮೂವರು ಮಧ್ಯಮ ಕ್ರಮಾಂಕದಲ್ಲಿ ಆಡುವಾಗ ವೈಫಲ್ಯ ಮುಂದುವರೆದಿದೆ. 2020ರಿಂದ ಇಲ್ಲೀವರೆಗೆ ಈ ಮೂವರಿಂದ ಹೇಳಿಕೊಳ್ಳುವ ಪ್ರದರ್ಶನ ಬಂದಿಲ್ಲ. ಮೇಲಾಗಿ ಸ್ಥಿರ ಪ್ರದರ್ಶನ ಬಂದಿಲ್ಲ. 2020ರಿಂದ ಈಚೆಗೆ ಪೂಜಾರ 13 ಟೆಸ್ಟ್‌ ಪಂದ್ಯಗಳಲ್ಲಿ 23 ಇನ್ನಿಂಗ್ಸ್‌ ಆಡಿದ್ದಾರೆ. ಇದರಲ್ಲಿ 552 ರನ್, 25.09 ರನ್ ಸರಾಸರಿ ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಕೊಹ್ಲಿ 10 ಟೆಸ್ಟ್‌ ಪಂದ್ಯಗಳಲ್ಲಿ 16 ಇನ್ನಿಂಗ್ಸ್‌ ಆಡಿದ್ದಾರೆ. ಇದರಲ್ಲಿ 387 ರನ್, 24.19 ರನ್ ಸರಾಸರಿ, 3 ಅರ್ಧ ಶತಕ ಬಾರಿಸಿದ್ದಾರೆ. ಇನ್ನು ರಹಾನೆ 13 ಟೆಸ್ಟ್‌ ಪಂದ್ಯಗಳಲ್ಲಿ 22 ಇನ್ನಿಂಗ್ಸ್‌ ಆಡಿ 541 ರನ್ ಗಳಿಸಿದ್ದಾರೆ. 25.76 ರನ್ ಸರಾಸರಿ ಹೊಂದಿರುವ ರಹಾನೆ 1 ಶತಕ, 1 ಅರ್ಧ ಶತಕ ಬಾರಿಸಿದ್ದಾರೆ.

IND vs ENG 2nd Test : Rohit Sharma ಅವರ ಸೆಲ್ಯೂಟ್ ಹಿಂದಿನ ಕಾರಣವೇನು | Oneindia Kannada
ಭಾರತದ ಮಧ್ಯಮ ಕ್ರಮಾಂಕ ಬದಲಾಗುತ್ತಾ?

ಭಾರತದ ಮಧ್ಯಮ ಕ್ರಮಾಂಕ ಬದಲಾಗುತ್ತಾ?

ಪ್ರಮುಖ ಟೆಸ್ಟ್‌ ಕ್ರಿಕೆಟ್ ಪಂದ್ಯಗಳಲ್ಲಿ ಭಾರತದ ಸೋಲಿಗೆ ಕಾರಣ ಮಧ್ಯಮ ಕ್ರಮಾಂಕದಲ್ಲಿನ ಸತತ ಸೋಲು ಎಂದು ಕ್ರಿಕೆಟ್ ಪ್ರೇಮಿಗಳು ಮತ್ತು ಕ್ರಿಕೆಟ್ ಪಂಡಿತರು ಅಭಿಪ್ರಾಯಿಸುತ್ತಿದ್ದಾರೆ. ಹೀಗಾಗಿ ಮುಂದೊಮ್ಮೆ ಮಧ್ಯಮ ಕ್ರಮಾಂಕವನ್ನು ಬದಲಾಯಿಸಿ ಯುವ ಆಟಗಾರರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಮಾತೂ ಕೇಳಿ ಬರುತ್ತಿವೆ. ಈ ಬಗ್ಗೆ ವಿರಾಟ್ ಕೊಹ್ಲಿ ಅವರಲ್ಲಿ ಪ್ರಶ್ನಿಸಿದಾಗ, ಮಧ್ಯಮ ಕ್ರಮಾಂಕದ ಬಗ್ಗೆ ಕಳವಳ ಪಡಬೇಕಾಗಿಲ್ಲ. ಆಟಗಾರರ ಬದಲಾವಣೆ ಆಗುತ್ತದೆ ಎಂದು ಭೀತಿಗೊಳ್ಳಬೇಕಾಗಿಲ್ಲ. ಅನುಭವಿ ಆಟಗಾರರು ಮುಂದೆ ಜವಾಬ್ದಾರಿಯುತ ಆಡುತ್ತಾರೆ. ಕ್ರಿಕೆಟ್‌ನಲ್ಲಿ ಇಂಥ ಸಂದರ್ಭ ಪ್ರತಿ ಆಟಗಾರರಿಗೂ ಎದುರಾಗುತ್ತವೆ ಎಂಬಂತೆ ಹೇಳಿ ನೀಡಿದ್ದರು. ಅಂದ್ಹಾಗೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಬಾರಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Friday, August 13, 2021, 19:24 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X