ಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡ ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿ ಆಡಲಿದೆ. ಭಾರತೀಯ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್‌ ಶಿಖರ್ ಧವನ್ ನಾಯಕರಾಗಿ, ವೇಗಿ ಭುವನೇಶ್ವರ್ ಕುಮಾರ್ ಉಪನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಕೋಚ್ ಆಗಿ ಭಾರತದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ತಂಡದ ಜೊತೆಗಿರಲಿದ್ದಾರೆ.

ರಸೆಲ್, ಮೆಕಾಯ್ ಆರ್ಭಟ: ಆಸ್ಟ್ರೇಲಿಯಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ!ರಸೆಲ್, ಮೆಕಾಯ್ ಆರ್ಭಟ: ಆಸ್ಟ್ರೇಲಿಯಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ!

ಭಾರತ-ಶ್ರೀಲಂಕಾ ಪ್ರವಾಸ ಸರಣಿಗಳು ಜುಲೈ 13ರಂದು ಏಕದಿನ ಪಂದ್ಯದ ಮೂಲಕ ಚಾಲನೆಗೊಳ್ಳಬೇಕಿತ್ತು. ಆದರೆ ಶ್ರೀಲಂಕಾ ತಂಡದಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇತ್ತಂಡಗಳ ಪ್ರವಾಸ ಸರಣಿಯ ವೇಳಾಪಟ್ಟಿ ಸಂಪೂರ್ಣವಾಗಿ ಬದಲಾಗಿದೆ. ಬದಲಾದ ವೇಳಾಪಟ್ಟಿ ಕೆಳಗಿದೆ.

ಲಂಕಾ ತಂಡದಲ್ಲಿ ಕೋವಿಡ್ ಸೋಂಕು

ಲಂಕಾ ತಂಡದಲ್ಲಿ ಕೋವಿಡ್ ಸೋಂಕು

ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಶ್ರೀಲಂಕಾ ತಂಡ ಅಲ್ಲಿ ಮೂರು ಪಂದ್ಯಗಳ ಟಿ20ಐ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೋತಿತ್ತು. ಸರಣಿ ಮುಗಿಸಿ ವಾಪಸ್ಸಾಗಿದ್ದ ಶ್ರೀಲಂಕಾ ತಂಡದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡಿದ್ದವು. ಬ್ಯಾಟಿಂಗ್‌ ಕೋಚ್ ಗ್ರ್ಯಾಂಟ್ ಫ್ಲವರ್ ಮತ್ತು ದತ್ತಾಂಶ ವಿಶ್ಲೇಷಕ ಜಿಟಿ ನಿರೋಶನ್‌ಗೆ ಕೋವಿಡ್ ಸೋಂಕು ಇರುವುದು ಕಂಡುಬಂದಿತ್ತು. ಇದೇ ಕಾರಣಕ್ಕೆ ಪ್ರವಾಸ ಸರಣಿಯ ವೇಳಾಪಟ್ಟಿ ಬದಲಾಗಿದೆ.

ಏಕದಿನ ವೇಳಾಪಟ್ಟಿ

ಏಕದಿನ ವೇಳಾಪಟ್ಟಿ

* ಮೊದಲ ಏಕದಿನ: ಜುಲೈ 18, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (2:30 PM IST)

* ಎರಡನೇ ಏಕದಿನ: ಜುಲೈ 20, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (2:30 PM IST)

* ಮೂರನೇ ಏಕದಿನ: ಜುಲೈ 23, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (2:30 PM IST)

ಟಿ20ಐ ವೇಳಾಪಟ್ಟಿ

ಟಿ20ಐ ವೇಳಾಪಟ್ಟಿ

* ಮೊದಲ ಟಿ20ಐ: ಜುಲೈ 25, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (7 PM IST)

* ಎರಡನೇ ಟಿ20ಐ: ಜುಲೈ 27, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (7 PM IST)

* ಮೂರನೇ ಟಿ20ಐ: ಜುಲೈ 29, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (7 PM IST)

ಸಂಪೂರ್ಣ ಭಾರತ ತಂಡ

ಸಂಪೂರ್ಣ ಭಾರತ ತಂಡ

ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ವಿಸಿ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕೆ. ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಾಹರ್, ಚೇತನ್ ಸಕರಿಯಾ, ನವದೀಪ್ ಸೈನಿ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, July 10, 2021, 14:49 [IST]
Other articles published on Jul 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X