ಗಂಗ್ನಮ್ ಸ್ಟೈಲ್ ಓಲ್ಡ್ , ಗೇಲ್ ಈಗ ರೊನಾಲ್ಡೊ ಸ್ಟೈಲ್

Posted By:

ಬೆಂಗಳೂರು, ಮೇ.7: ಜಮೈಕಾದ ಕಿಂಗ್ ಕ್ರಿಸ್ ಗೇಲ್ ಗೆ ಈಗ ಗಂಗ್ನಮ್ ಸ್ಟೈಲ್ ತುಂಬಾ ಹಳೆಯದಾಯಿತು. ಈಗೇನಿದ್ದರೂ ಸಂಭ್ರಮ ಪಡಲು ಫುಟ್ಬಾಲರ್ ಕ್ರಿಶ್ಚಿಯಾನೋ ರೊನಾಲ್ಡೋ ಸ್ಟೈಲೇ ಬೇಕಂತೆ. ರೊನಾಲ್ಡೋ ರೀತಿಯಲ್ಲೇ ಕ್ರಿಸ್ ಗೇಲ್ ಐಪಿಎಲ್ ನಲ್ಲಿ ತಮ್ಮ ಶತಕದ ಸಂಭ್ರಮ ಆಚರಿಸಿಕೊಂಡರು. ಆರ್ ಸಿಬಿ ಅಬ್ಬರಕ್ಕೆ ಕಿಂಗ್ಸ್ XI ಪಂಜಾಬ್ ತತ್ತರಿಸಿಬಿಟ್ಟಿತು.

ಪೋರ್ಚುಗಲ್ ಹಾಗೂ ರಿಯಲ್ ಮ್ಯಾಡ್ರಿಡ್ ಕ್ಲಬ್ ಪರ ಆಡುವ ಅದ್ಭುತ ಪ್ರತಿಭೆ ರೊನಾಲ್ಡೋ ಗೋಲು ಗಳಿಸಿ ಸಂಭ್ರಮಿಸುವ ಶೈಲಿ ತುಂಬಾ ಜನಪ್ರಿಯವಾಗಿದೆ. ಇದೇ ಸ್ಟೈಲ್ ನಲ್ಲಿ ಕ್ರಿಸ್ ಗೇಲ್ ಅವರು ಸಂಭ್ರಮಿಸಿದ್ದಾರೆ.

Chris Gayle 'unveils' Cristiano Ronaldo in Bengaluru

ಐಪಿಎಲ್ 2015ರ 40ನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಕ್ರಿಸ್ ಗೇಲ್ ಅಬ್ಬರಕ್ಕೆ ಹವಾಮಾನ ಕೂಡಾ ಬೆಚ್ಚಿತ್ತು. ಗುಡುಗು, ಮಳೆ ಕೂಡಾ ಮೈದಾನದಿಂದ ಆಚೆ ನಿಂತು ಕಿಂಗ್ ಗೇಲ್ ಆಟವನ್ನು ನೋಡತೊಡಗಿತು. 57 ಎಸೆತಗಳಲ್ಲಿ 117ರನ್ ಚೆಚ್ಚಿದ ಗೇಲ್ ತಂಡಕ್ಕೆ 138 ರನ್ ಗೆಲುವು ದೊರಕಿಸಿಕೊಡುವಲ್ಲಿ ಸಫಲರಾದರು.

| |

ಇಷ್ಟಕ್ಕೂ ಗೇಲ್ ಸ್ಟೈಲ್ ಬದಲಾಗಿದ್ದೇಕೆ?: ಸಾಮಾನ್ಯವಾಗಿ ಶತಕದ ಸಂಭ್ರಮವನ್ನು ಕೆರೆಬಿಯನ್ ಸ್ಟೈಲ್ ಡ್ಯಾನ್ಸ್ ಅಥವಾ ಗಂಗ್ನಮ್ ಶೈಲಿ ನೃತ್ಯದ ಮೂಲಕ ಆಚರಿಸಿಕೊಳ್ಳುತ್ತಿದ್ದ ಗೇಲ್ ನಿನ್ನೆ(ಮೇ.6) ಮಾತ್ರ ರೊನೊಲ್ಡೊ ರೀತಿ ನಿಂತುಕೊಂಡರು.

Ronaldo

ಈ ಬಗ್ಗೆ ಪ್ರಶ್ನಿಸಿದಾಗ,' ನಾನು ಕ್ರಿಶ್ಚಿಯಾನೋ ರೊನಾಲ್ಡೊ ಬಿಗ್ ಫ್ಯಾನ್. ಕಳೆದ ರಾತ್ರಿ ರಿಯಲ್ ಮ್ಯಾಡ್ರಿಡ್ ಪಂದ್ಯ ನೋಡುತ್ತಿದ್ದೆ. ರೊನಾಲ್ಡೊ ಗೋಲು ಹೊಡೆದು ಸಂಭ್ರಮಿಸುವ ರೀತಿ ಇಷ್ಟವಾಯ್ತು. ಇದನ್ನು ನಾನು ಕೂಡಾ ಇಷ್ಟು ಬೇಗ ಮಾಡುತ್ತೇನೆ ಎಂದುಕೊಂಡಿರಲಿಲ್ಲ' ಎಂದಿದ್ದಾರೆ.

| ಐಪಿಎಲ್ ವಿಶೇಷ ಪುಟ| ಅಂಕಪಟ್ಟಿ

ಗೇಲ್ ಎಂದರೆ ಹಾಗೆ. ಮಕ್ಕಳಿಂದ ಮುದುಕರವರೆಗೂ ಕ್ರಿಕೆಟ್ ನೋಡುವವರಿಗೆಲ್ಲರಿಗೂ ಅಚ್ಚುಮೆಚ್ಚು. ಗೇಲ್ ಹಾಡು, ಡ್ಯಾನ್ಸ್, ಸ್ಟೈಲ್, ಬಿಗ್ ಸಿಕ್ಸರ್ ಎಲ್ಲವನ್ನು ಭಾರತೀಯರು ಇಷ್ಟ ಪಡುತ್ತಾರೆ. ಮುಂದಿನ ಬಾರಿ ಯಾವ ಸ್ಟೈಲ್ ನಲ್ಲಿ ಸೆಲೆಬ್ರೇಷನ್ ಮಾಡುತ್ತಾರೋ ಕಾದು ನೋಡಬೇಕಿದೆ.

ರೊನಾಲ್ಡೊ ರೀತಿ ಗೇಲ್ ಸಂಭ್ರಮ:

(ಒನ್ ಇಂಡಿಯಾ ಸುದ್ದಿ)

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, May 7, 2015, 11:11 [IST]
Other articles published on May 7, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ