ಪಂಜಾಬ್ ಎದುರು ಮುಂಬೈಗೆ ಮತ್ತೊಂದು ಮಾಡು-ಮಡಿ ಪಂದ್ಯ

Posted By: Sadashiva
IPL 2018: 50 Match-MI Keen To Keep Playoff Hopes Alive

ಮುಂಬೈ, ಮೇ 16: ಅತಿಥೇಯ ಮುಂಬೈ ಇಂಡಿಯನ್ಸ್ ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಎದುರು ಮತ್ತೊಂದು ಮಾಡು ಇಲ್ಲವೆ ಮಡಿ ಪಂದ್ಯ ಎದುರಿಸಲಿದೆ.

ಮುಂಬೈ ಪ್ಲೇಆಫ್ ಕನಸು ಬಹುತೇಕ ಸಂಕಷ್ಟದಲ್ಲಿದ್ದು ಲೆಕ್ಕಾಚಾರ ಆಧಾರದಲ್ಲಿ ಇನ್ನುಳಿದ ಪಂದ್ಯಗಳಲ್ಲಿ ಮುಂಬೈ ಗೆದ್ದರೆ ಪ್ಲೇ ಆಫ್ ಪ್ರವೇಶಕ್ಕೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಹಾಗಾಗಿ ಇಂದಿನ ಪಂದ್ಯ ಹಾಲಿ ಚಾಂಪಿಯನ್ ಮುಂಬೈಗೆ ಬಲು ಮಹತ್ವದ್ದಾಗಿದೆ.

ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಪಂಜಾಬ್ 5ನೇ ಸ್ಥಾನದಲ್ಲಿದ್ದು ಆಡಿರುವ 12 ಪಂದ್ಯಗಳಲ್ಲಿ 6 ಗೆಲುವು 6 ಸೋಲುಗಳನ್ನು ಕಂಡಿದೆ. ಮುಂಬೈ ತಂಡ ಪಂಜಾಬ್ ಬೆನ್ನಿಗಿದೆ. ಮುಂಬೈ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 7ರಲ್ಲಿ ಸೋತಿದೆ. ಪಾಯಿಂಟ್ ಆಧಾರದಲ್ಲೂ ಮುಂಬೈ ಹಿಂದಿದ್ದು ಪಂಜಾಬ್ 12 ಅಂಕ ಪಡೆದಿದೆ. ಮುಂಬೈ ಖಾತೆಯಲ್ಲಿರುವುದು ಬರೀ 10 ಅಂಕಗಳು.

ಹಿಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 10 ವಿಕೆಟ್ ಹೀನಾಯ ಸೋಲು ಕಂಡಿತ್ತು. ಇತ್ತ ಮುಂಬೈ ಕೂಡ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು 7 ವಿಕೆಟ್ ಸೋಲಿನೊಂದಿಗೆ ತಲೆ ಬಾಗಿತ್ತು.

50ನೇ ಪಂದ್ಯವಾಗಿ ಇಂದಿನ ಹಣಾಹಣಿಯಲ್ಲಿ ಮುಂಬೈ ಗೆಲ್ಲುತ್ತಾ ಅಥವಾ ಕಿಂಗ್ಸ್ ಇಲೆವೆನ್ ಪಂಬಾಬ್ ಮುಂಬೈಗೆ ಸೋಲುಣಿಸುತ್ತಾ ಕಾದು ನೋಡಬೇಕಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, May 16, 2018, 18:48 [IST]
Other articles published on May 16, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ