ಐಪಿಎಲ್ 2018: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವೇಳಾಪಟ್ಟಿ

Posted By:
IPL 2018 Full Schedule : Delhi Daredevils (DD)

ಬೆಂಗಳೂರು, ಮಾರ್ಚ್ 23: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ರ ಹರಾಜು ಪ್ರಕ್ರಿಯೆಯಲ್ಲಿ ಹೊಸ ಪ್ರತಿಭೆಗಳಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಮಣೆ ಹಾಕಿದ್ದು ವಿಶೇಷ. ಏಪ್ರಿಲ್ 08ರಂದು ಡೆಲ್ಲಿ ಡೇರ್ ಡೆವಿಲ್ಸ್ ತನ್ನ ಮೊದಲ ಪಂದ್ಯವಾಡಲಿದೆ.

11ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ. ಏಪ್ರಿಲ್ 08ರಂದು ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಮೊದಲ ಪಂದ್ಯವನ್ನು ಡೆಲ್ಲಿ ಡೇರ್ ಡೆವಿಲ್ಸ್ ಆಡಲಿದೆ.

ಐಪಿಎಲ್ 11ರ ವೇಳಾಪಟ್ಟಿ: ಚೆನ್ನೈ -ಮುಂಬೈ ಮೊದಲ ಪಂದ್ಯ

ಈ ಆವೃತ್ತಿಯಲ್ಲಿ ಪಂದ್ಯಗಳನ್ನು ಸಂಜೆ 5.30 ಮತ್ತು 7 ಕ್ಕೆ ಪ್ರಾರಂಭ ಮಾಡಲು ಬೇಡಿಕೆ ಬಂದಿತ್ತು. ಆದರೆ, ಆದ್ಯತೆ ಮೇರೆಗೆ ಈ ಬದಲಾವಣೆ ಮಾಡಲಾಗುವುದು ಸದ್ಯಕ್ಕೆ 4ಕ್ಕೆ ಹಾಗೂ 8 ಗಂಟೆಗೆ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ.

ಐಪಿಎಲ್‌: ದೆಹಲಿ ತಂಡಕ್ಕೆ ಗೌತಮ್ ಗಂಭೀರ್ ಬಲ

2011ರಲ್ಲಿ ಫ್ರಾಂಚೈಸಿ ತೊರೆದಿದ್ದ ಗೌತಮ್ ಅವರು ಮತ್ತೆ ತವರು ತಂಡಕ್ಕೆ ಮರಳಿದ್ದು, ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಮೊಹಮ್ಮದ್ ಶಮಿ ಅವರು ಕೂಡಾ ಐಪಿಎಲ್ ನಲ್ಲಿ ಆಡಲು ಅರ್ಹರಾಗಿದ್ದಾರೆ.

IPL- 2018: ಡೆಲ್ಲಿ ಡೇರ್ ಡೆವಿಲ್ಸ್ (DD) ಏಪ್ರಿಲ್ ತಿಂಗಳ ಪಂದ್ಯಗಳ ವೇಳಾಪಟ್ಟಿ
ಯಾವಾಗ, ದಿನ ಯಾವ ತಂಡದ ವಿರುದ್ಧ ಎಲ್ಲಿ
ಏಪ್ರಿಲ್ 08, ಭಾನುವಾರ
vs ಕಿಂಗ್ಸ್ ಎಲೆವನ್ ಪಂಜಾಬ್ ಫಿರೋಜ್ ಶಾ ಕೋಟ್ಲಾ, ದೆಹಲಿ
ಏಪ್ರಿಲ್ 11, ಶುಕ್ರವಾರ ರಾಜಸ್ಥಾನ್ ರಾಯಲ್ಸ್ ಸವಾಯಿ ಮಾನ್ ಸಿಂಗ್ ಸ್ಟೇಡಿಯ, ಜೈಪುರ
ಏಪ್ರಿಲ್ 14, ಶನಿವಾರ ಮುಂಬೈ ಇಂಡಿಯನ್ಸ್ ವಾಂಖೆಡೆ ಸ್ಟೇಡಿಯಂ, ಮುಂಬೈ
ಏಪ್ರಿಲ್ 16, ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ಈಡೆನ್ ಗಾರ್ಡನ್ಸ್, ಕೋಲ್ಕತಾ
ಏಪ್ರಿಲ್ 21, ಶನಿವಾರ
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಫಿರೋಜ್ ಶಾ ಕೋಟ್ಲಾ, ದೆಹಲಿ
ಏಪ್ರಿಲ್ 23, ಸೋಮವಾರ ಕಿಂಗ್ಸ್ ಎಲೆವನ್ ಪಂಜಾಬ್ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ, ಇಂದೋರ್
ಏಪ್ರಿಲ್ 27, ಶುಕ್ರವಾರ ಕೋಲ್ಕತಾ ನೈಟ್ ರೈಡರ್ಸ್ ಫಿರೋಜ್ ಶಾ ಕೋಟ್ಲಾ, ದೆಹಲಿ
ಏಪ್ರಿಲ್ 30, ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ಎಂ.ಎ ಚಿದಂಬರಂ ಸ್ಟೇಡಿಯಂ, ಚೆನ್ನೈ
IPL- 2018: ಡೆಲ್ಲಿ ಡೇರ್ ಡೆವಿಲ್ಸ್ ಮೇ ತಿಂಗಳ ಪಂದ್ಯಗಳ ವೇಳಾಪಟ್ಟಿ
ಯಾವಾಗ, ದಿನ ಯಾವ ತಂಡದ ವಿರುದ್ಧ
ಎಲ್ಲಿ
ಮೇ 02, ಸೋಮವಾರ vs ರಾಜಸ್ಥಾನ್ ರಾಯಲ್ಸ್ ಫಿರೋಜ್ ಶಾ ಕೋಟ್ಲಾ, ದೆಹಲಿ
ಮೇ 05, ಶನಿವಾರ ಸನ್ ರೈಸರ್ಸ್ ಹೈದರಾಬಾದ್ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂ, ಹೈದರಾಬಾದ್
ಮೇ 10, ಗುರುವಾರ
ಸನ್ ರೈಸರ್ಸ್ ಹೈದರಾಬಾದ್ ಫಿರೋಜ್ ಶಾ ಕೋಟ್ಲಾ, ದೆಹಲಿ
ಮೇ 12, ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಮೇ 18, ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಫಿರೋಜ್ ಶಾ ಕೋಟ್ಲಾ, ದೆಹಲಿ
ಮೇ 20, ಭಾನುವಾರ ಮುಂಬೈ ಇಂಡಿಯನ್ಸ್ ಫಿರೋಜ್ ಶಾ ಕೋಟ್ಲಾ, ದೆಹಲಿ

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, March 23, 2018, 18:21 [IST]
Other articles published on Mar 23, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ