ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ 5 ವಿಕೆಟ್ ಜಯಭೇರಿ

IPL 2018: DD Vs RCB; Kohli falls for fine 40-ball 70

ನವದೆಹಲಿ, ಮೇ 12: ವಿರಾಟ್ ಕೊಹ್ಲಿ (70/40) ಮತ್ತು ಎಬಿ ಡಿವಿಲಿಯರ್ಸ್ (72/37) ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿಡೇರ್ ಡೆವಿಲ್ಸ್ ವಿರುದ್ಧ 5 ವಿಕೆಟ್ ಜಯ ಗಳಿಸಿದೆ.

ಡೆಲ್ಲಿ ನೀಡಿದ್ದ 182 ರನ್ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಪೇರಿಸಿ ಗೆಲುವಿನ ಸಂಭ್ರಮಾಚರಿಸಿತು.

ಸ್ಕೋರ್ ಕಾರ್ಡ್

ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಶ್ರೇಯಸ್ ಐಯರ್ 32 (35), ರಿಷಬ್ ಪಂತ್ 61 (34) ಮತ್ತು ಅಭಿಷೇಕ್ ಶರ್ಮ 46 (19) ರನ್ ನೆರವಿನೊಂದಿಗೆ ಡೆಲ್ಲಿ 181 ರನ್ ಪೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 182 ರನ್ ಗುರಿ ನೀಡಿತ್ತು.

ಡೆಲ್ಲಿ ಬ್ಯಾಟ್ಸ್ಮನ್ ಗಳಲ್ಲಿ ಪೃಥ್ವಿ ಶಾ 2 (4), ಜೇಸನ್ ರಾಯ್ 12 (9), ವಿ. ಶಂಕರ್ ಅಜೇಯ 21 (20) ರನ್ ಕೊಡುಗೆ ತಂಡವನ್ನು ಹೆಚ್ಚು ಬೆಂಬಲಿಸಲಿಲ್ಲ. ಡೆಲ್ಲಿಯಲ್ಲಿ ರಿಷಬ್ ಮತ್ತು ಅಭಿಷೇಕ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಬಿಟ್ಟರೆ ಉಳಿದವರಿಂದ ಅಂಥದ್ದೇನು ಲಾಭವಾಗದಿದ್ದಿದ್ದು ತಂಡಕ್ಕೆ ಮೈನಸ್ಸಾಗಿ ಪರಿಣಮಿಸಿತು.

ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಡೆಲ್ಲಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಪೇರಿಸಿತ್ತು. ಬೆಂಗಳೂರು ಪರ ಯುಜುವೇಂದ್ರ ಚಾಹಲ್ ಉತ್ತಮ ಬೌಲಿಂಗ್ ನಿರ್ವಹಣೆ ತೋರಿದರು. ಚಾಹಲ್ 28 ರನ್ ನೀಡಿ 2 ವಿಕೆಟ್ ಕಬಳಿಸಿ ಡೆಲ್ಲಿ ತಂಡವನ್ನು ಕಾಡಿದರು.

ಚೇಸಿಂಗ್ ಗಿಳಿದ ಬೆಂಗಳೂರು ತಂಡ ಬಹುಬೇಗನೆ ಎರಡು ವಿಕೆಟ್ ಕಳೆದುಕೊಂಡಿತು. ಪಾರ್ಥೀವ್ ಪಟೇಲ್ 6 (8), ಮೊಹಮ್ಮದ್ ಅಲಿ 1 (3) ರನ್ ನೊಂದಿಗೆ ಪೆವಿಲಿಯನ್ ದಾರಿ ಹಿಡಿದರು.

ಆದರೆ ನಾಯಕ ವಿರಾಟ್ ಕೊಹ್ಲಿ ರನ್ ತಂಡವನ್ನು ಗೆಲುವಿನೆಡೆಗೆ ಸೆಳೆಯಿತು. ವಿರಾಟ್ 40 ಎಸೆತಗಳಿಗೆ 70 ರನ್ ಸಿಡಿಸಿದರು. ಕೊಹ್ಲಿ ಜೊತೆ ಎಬಿ ಡಿವಿಲಿಯರ್ಸ್ ಕೂಡ ಬೆಂಗಳೂರು ತಂಡದ ರನ್ ಖಾತೆಯನ್ನು ಏರಿಸಿದರು.

Story first published: Saturday, May 12, 2018, 23:47 [IST]
Other articles published on May 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X