ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿರ್ಲಕ್ಷ್ಯದಾಟಕೆ ಬೆಲೆತೆತ್ತ ಚೆನ್ನೈ: ಡೆಲ್ಲಿಗೆ 34 ರನ್ ಗೆಲುವು

IPL 2018: Delhi vs Chennai: DD Beat CSK By 34 Runs

ನವದೆಹಲಿ, ಮೇ 19: ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶ್ರೇಯಸ್ ಐಯರ್ ನಾಯಕತ್ವದ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 34 ರನ್ ಸೋಲೊಪ್ಪಿಕೊಂಡಿದೆ. ಚೆನ್ನೈ ಪರ ಕೊಸರಾಡಿದ ಅಂಬಾಟಿ ರಾಯುಡು ಅರ್ಧ ಶತಕ ವ್ಯರ್ಥವಾಯಿತು.

ಡೆಲ್ಲಿ ನೀಡಿದ್ದ 163 ರನ್ ಗುರಿ ಬೆನ್ನಟ್ಟಿದ ಚೆನ್ನೈ, ಬ್ಯಾಟ್ಸ್ಮನ್ ಗಳ ಬೇಜಾವಬ್ದಾರಿಯ ಆಟದಿಂದಾಗಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 128 ರನ್ ಪೇರಿಸಲಷ್ಟೇ ಶಕ್ತವಾಯಿತು.

ಸ್ಕೋರ್ ಕಾರ್ಡ್

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ಡೇರ್ ಡೆವಿಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಪೇರಿಸಿ ಚೆನ್ನೈ ಸೂಪರ್ ಕಿಂಗ್ಸ್ ಗೆ 163 ರನ್ ಗುರಿ ನೀಡಿತ್ತು. ಡೆಲ್ಲಿ ಪರ ರನ್ ಕೊಡುಗೆ ನೀಡಿದ್ದು ರಿಶಬ್ ಪಂತ್ (38/26), ವಿ ಶಂಕರ್ (36/28) ಮತ್ತು ಹರ್ಷಲ್ ಪಟೇಲ್ (36/16) ಮಾತ್ರ.

ಡೆಲ್ಲಿ ತಂಡವೂ ಕಳಪೆ ಬ್ಯಾಟಿಂಗ್ ಗೆ ಸಾಕ್ಷಿಯಾಯಿತು. ಶ್ರೇಯಸ್ ಐಯರ್ 19, ಗ್ಲೆನ್ ಮ್ಯಾಕ್ಸ್ ವೆಲ್ 5, ಅಭಿಷೇಕ್ ಶರ್ಮ 2 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದಿದ್ದು ಡೆಲ್ಲಿ ಸೋಲಿಗೆ ಈಡಾಗುವ ಭೀತಿಯಲ್ಲಿತ್ತು.

ಆದರೆ ಚೇಸಿಂಗ್ ಗೆ ಇಳಿದ ಚೆನ್ನೈನಿಂದಲೂ ಅತ್ಯಂತ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನವಾಗಿದ್ದು ಡೆಲ್ಲಿಗೆ ಪ್ರಸ್ಸಾಗಿ ಪರಿಣಮಿಸಿತು. ಶೇನ್ ವಾಟ್ಸನ್ 14, ಸುರೇಶ್ ರೈನ 15, ಧೋನಿ 17, ಸ್ಯಾಮ್ ಬಿಲ್ಲಿಂಗ್ಸ್ 1, ಜಡೇಜಾ 27, ಡ್ವೇನ್ ಬ್ರಾವೋ 1, ದೀಪಕ್ ಚಾಹರ್ 1 ರನ್ ಪೇರಿಸಿದ್ದು ಚೆನ್ನೈ ರನ್ ಬರ ಎದುರುಗೊಳ್ಳುವಂತೆ ಮಾಡಿತು.

36 ರನ್ ಕೊಡುಗೆ ಮತ್ತು 1 ವಿಕೆಟ್ ಕಬಳಿಸಿದ್ದಕ್ಕಾಗಿ ಡೆಲ್ಲಿ ತಂಡದ ಹರ್ಷಲ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Saturday, May 19, 2018, 0:47 [IST]
Other articles published on May 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X