ಐಪಿಎಲ್: ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಯಾರಿದ್ದಾರೆ?

Posted By:

ಬೆಂಗಳೂರು, ಜನವರಿ 28: ಐಪಿಎಲ್ 2016ರ ಚಾಂಪಿಯನ್ ತಂಡ ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಕಷ್ಟು ಯತ್ನಿಸಿದ್ದು ಕಂಡು ಬಂದಿತು.

ತಂಡದ ನಾಯಕ ಡೇವಿಡ್ ವಾರ್ನರ್, ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಉಳಿಸಿಕೊಂಡಿದ್ದ ಸನ್ ರೈಸರ್ಸ್ ತಂಡ ಶಿಖರ್ ಧವನ್ ಅವರನ್ನು ಹರಾಜಿಗೆ ದೂಡಿತ್ತು. ಆದರೆ, ರೈಟ್ ಟು ಮ್ಯಾಚ್ ಅಸ್ತ್ರ ಬಳಸಿ ಪುನಃ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರನ್ನು ತಂಡಕ್ಕೆ ಕರೆಸಿಕೊಂಡಿತು. ಜತೆಗೆ ರಶೀದ್ ಖಾನ್ ಹಾಗೂ ದೀಪಕ್ ಹೂಡಾ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ನಾಯಕ ವಾರ್ನರ್ ಅಲ್ಲದೆ, ಕೆಕೆಆರ್ ನಿಂದ ಬಂದಿರುವ ಮನೀಶ್ ಪಾಂಡೆ, ಯೂಸುಫ್ ಪಠಾಣ್ ಸ್ಫೋಟಕ ಬ್ಯಾಟಿಂಗ್ ಬಲ, ಶಕೀಬ್ ಅಲ್ ಹಸನ್ ಆಲ್ ರೌಂಡರ್ ಆಟದ ಮೇಲೆ ನಂಬಿಕೆ ಇರಿಸಿಕೊಂಡಿದೆ. ಭುವನೇಶ್ವರ್ ಕುಮಾರ್ ಹಾಗೂ ಸಂದೀಪ್ ಶರ್ಮಕ್ಕೆ ಬಲ ತುಂಬಲು ಇಂಗ್ಲೆಂಡಿನ ಕ್ರಿಸ್ ಜೋರ್ಡನ್ ರನ್ನು ಸೇರಿಸಿಕೊಳ್ಳಲಾಗಿದೆ. ಹೈದರಾಬಾದ್ ತಂಡದಲ್ಲಿ ಯಾರು ಯಾರು ಇದ್ದಾರೆ? ಮುಂದೆ ಓದಿ...

ಬ್ಯಾಟ್ಸ್ ಮನ್ (2 ವಿದೇಶಿ)

ಬ್ಯಾಟ್ಸ್ ಮನ್ (2 ವಿದೇಶಿ)

* ಡೇವಿಡ್ ವಾರ್ನರ್ retained 12.50 ಕೋಟಿ ರು
* ಮನೀಶ್ ಪಾಂಡೆ 11 ಕೋಟಿ ರು ಗೆ ಖರೀದಿ
* ಶಿಖರ್ ಧವನ್ 5.20 ಕೋಟಿ ರು ಗೆ ಖರೀದಿ
* ಕೇನ್ ವಿಲಿಯಮ್ಸನ್ 3 ಕೋಟಿ ರು ಗೆ ಖರೀದಿ
* ರಿಕ್ಕಿ ಬುಯಿ ಮೂಲ ಬೆಲೆಗೆ ಖರೀದಿ
* ಸಚಿನ್ ಬೇಬಿ ಮೂಲ ಬೆಲೆಗೆ ಖರೀದಿ
* ತನ್ಮಯ್ ಅಗರವಾಲ್ ಮೂಲ ಬೆಲೆಗೆ ಖರೀದಿ

ಆಲ್ ರೌಂಡರ್

ಆಲ್ ರೌಂಡರ್

* ದೀಪಕ್ ಹೂಡಾ 3.60 ಕೋಟಿ ರು ಗೆ ಖರೀದಿ.
* ಶಕೀಬ್ ಅಲ್ ಹಸನ್ 2 ಕೋಟಿ ರು ಗೆ ಖರೀದಿ.
* ಕಾರ್ಲೊಸ್ ಬ್ರಥ್ ವೇಟ್ 2 ಕೋಟಿ ರು ಗೆ ಖರೀದಿ
* ಯೂಸುಫ್ ಪಠಾಣ್ 1.90 ಕೋಟಿ ರು ಗೆ ಖರೀದಿ
* ಮೊಹಮ್ಮದ್ ನಬಿ ಇಸಾಖಿಲ್ 1 ಕೋಟಿ ರು ಗೆ ಖರೀದಿ
* ಕ್ರಿಸ್ ಜಾರ್ಡನ್ 1 ಕೋಟಿ ರು ಗೆ ಖರೀದಿ.
* ಬಿಪುಲ್ ಶರ್ಮಾ ಮೂಲ ಬೆಲೆಗೆ ಖರೀದಿ
* ಮೆಹ್ದಿ ಹಸನ್ ಮೂಲ ಬೆಲೆಗೆ ಖರೀದಿ

ವಿಕೆಟ್ ಕೀಪರ್

ವಿಕೆಟ್ ಕೀಪರ್

* ವೃದ್ಧಿಮಾನ್ ಸಹಾ 5 ಕೋಟಿ ರು ಗೆ ಖರೀದಿ. ಎಂಎಸ್ ಧೋನಿ ಅವರ ನಿವೃತ್ತಿ ನಂತರ ಟೀಂ ಇಂಡಿಯಾದ ಟೆಸ್ಟ್ ತಂಡದ ಪರ ಉತ್ತಮ ಕಾರ್ಯ ನಿರ್ವಹಣೆ ಮಾಡಿರುವ ವೃದ್ಧಿಮಾನ್ ಸಹಾ ಅವರು ಐಪಿಎಲ್ ನಲ್ಲೂ ಉತ್ತಮ ಅನುಭವ ಹೊಂದಿದ್ದಾರೆ.

Story first published: Sunday, January 28, 2018, 23:48 [IST]
Other articles published on Jan 28, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ