ರಾಜಸ್ಥಾನ ವಿರುದ್ಧ ಸುಲಭ ಜಯ ದಾಖಲಿಸಿದ ಹೈದರಾಬಾದ್

Written By:
SRH vs RR

ಹೈದರಾಬಾದ್, ಏಪ್ರಿಲ್ 09: ಐಪಿಎಲ್‌ 2018ರ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್ ತಂಡ 9 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ. ಹೈದರಾಬಾದ್ ಪರ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಅಜೇಯ 77ರನ್ ಗಳಿಸಿದರೆ, ನಾಯಕ ವಿಲಿಯಮ್ಸನ್ 36ರನ್ ಗಳಿಸಿದರು. 15.5 ಓವರ್ ಗಳಲ್ಲಿ 127/1 ಸ್ಕೋರ್ ಮಾಡಿ, ಜಯ ದಾಖಲಿಸಿತು.

ಸ್ಕೋರ್ ಕಾರ್ಡ್, ಕಾಮೆಂಟ್ರಿ, ಗ್ರಾಫಿಕ್ಸ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್‌ ತಂಡವು ಹೈದರಾಬಾದ್ ತಂಡದ ಕರಾರುವಾಕ್ ದಾಳಿಯ ಮುಂದೆ ತಡಬಡಾಯಿಸಿತು. ದೊಡ್ಡ ಜೊತೆಯಾಟ ಆಡುವಲ್ಲಿ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಸಫಲರಾಗಲಿಲ್ಲ.

ಭರವಸೆ ಇರಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಆರ್ಕಿ ಶಾರ್ಟ್ ರನ್‌ಔಟ್ ಆದರು. ಆನಂತರ 13 ರನ್ ಗಳಿಸಿ ಅಜಿಂಕ್ಯಾ ರಹಾನೆ ಔಟಾದರು. ಯುವ ಆಟಗಾರ ಸಂಜು ಸ್ಯಾಮ್‌ಸನ್‌ ಅವರು ಅಲ್ಪ ಹೊರಾಟ ಮಾಡಿದರಾದರೂ ಅರ್ಧಶತಕಕ್ಕೆ ಒಂದು ರನ್ ಕಡಿಮೆ (49) ಇದ್ದಾಗ ಕ್ಯಾಚಿತ್ತು ಹೊರನಡೆದರು.

ಹೈದರಾಬಾದ್ ಪರ ಶಕಿಬ್ ಉಲ್ ಹಸನ್ 4 ಓವರ್‌ಗೆ 23 ರನ್ ನೀಡಿ 2 ವಿಕೆಟ್ ಗಳಿಸಿದರು. ಅಪ್ಘಾನಿಸ್ಥಾನ ಬೌಲರ್‌ ರಶೀದ್ ಖಾನ್ 24 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು. ಉತ್ತಮವಾಗಿ ಬೌಲ್ ಮಾಡಿದ ಸಿದ್ದಾರ್ಥ್ ಕೌಲ್ ನಾಲ್ಕು ಓವರ್‌ಗೆ ಕೇವಲ 20 ರನ್ ನೀಡಿ ಪ್ರಮುಖ ಎರಡು ವಿಕೆಟ್ ಕಬಳಿಸಿದರು. ಪಂದ್ಯ ಗೆಲ್ಲಲು ಸನ್‌ರೈಸರ್ಸ್ ತಂಡವು 126 ಟಾರ್ಗೆಟ್ ನೀಡಿತ್ತು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, April 9, 2018, 21:43 [IST]
Other articles published on Apr 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ