
ರಾಜಸ್ಥಾನ್ ಇನ್ನಿಂಗ್ಸ್: ಆರಂಭಿಕ ಆಟಗಾರ ಅಜಿಂಕ್ಯ ರಹಾನೆ 20 ಎಸೆತಗಳಲ್ಲಿ 36ರನ್ ಗಳಿಸಿದರು. ಸಂಜು ಸಾಮ್ಸನ್ 45 ಎಸೆತಗಳಲ್ಲಿ 92 ರನ್ (2 ಬೌಂಡರಿ, 10 ಸಿಕ್ಸರ್ ) ಸಿಡಿಸಿ, ಬೆನ್ ಸ್ಟೋಕ್ಸ್ 27, ಬಟ್ಲರ್ 23ರನ್ ಗಳಿಸಿ ತಂಡದ ಮೊತ್ತವನ್ನು 217/4 ಸ್ಕೋರ್ ಮಾಡಿದರು. ಬೆಂಗಳೂರು ತಂಡದ ಪರ ಉಮೇಶ್ ಯಾದವ್ 59ರನ್ ಚೆಚ್ಚಿಸಿಕೊಂಡು ದುಬಾರಿ ಎನಿಸಿಕೊಂಡರು.
ಟಾಸ್ ಗೆದ್ದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯದಲ್ಲಿ ಗೋ ಗ್ರೀನ್ ಸಂದೇಶವನ್ನು ಆರ್ ಸಿಬಿ ಸಾರುತ್ತಿದ್ದು, ಹಸಿರು ದಿರಿಸು ಧರಿಸಿ ಕಣಕ್ಕಿಳಿದಿದೆ.
ರಾಜಸ್ಥಾನ ರಾಯಲ್ಸ್ : ಅಜಿಂಕ್ಯ ರಹಾನೆ, ಶಾರ್ಟ್, ಸಂಜು ಸಾಮ್ಸನ್, ಜಾಸನ್ ಬಟ್ಲರ್, ತ್ರಿಪಾಠಿ, ಕೆ ಗೌತಮ್, ಶ್ರೇಯಸ್ ಗೋಪಾಲ್, ಧವಳ್ ಕುಲಕರ್ಣಿ, ಜಯದೇವ್ ಉನದ್ಕತ್, ಲಾಫಲಿನ್