ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈಗೆ ಗೆಲ್ಲಲು 205ರನ್ ಗುರಿ ನೀಡಿದ ಆರ್‌ಸಿಬಿ, ಗೆಲ್ಲುವ ಭರವಸೆ

ipl 2018 match 24 Royal Challengers Bangalore Chennai Super Kings

ಬೆಂಗಳೂರು, ಏಪ್ರಿಲ್ 25: ಎಂ. ಎಬಿ ಡಿವಿಲಿಯರ್ಸ್ ಹಾಗೂ ಮಂದೀಪ್ ಅವರ ಭಿರುಸಿನ ಬ್ಯಾಟಿಂಗ್‌ನಿಂದ ಆರ್‌ಸಿಬಿ ತಂಡವು ಚೆನ್ನೈ ವಿರುದ್ಧ 204ರನ್ ಗಳ ಬೃಹತ್ ಮೊತ್ತ ಕಲೆಹಾಕಿದ್ದು ಗೆಲ್ಲುವ ವಿಶ್ವಾಸದಲ್ಲಿದೆ.

ಟಾಸ್ ಸೋತರು ಮೊದಲು ಬ್ಯಾಟಿಂಗ್‌ಗೆ ಬಂದ ಆರ್‌ಸಿಬಿ ಆರಂಭದಿಂದಲೇ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ಆರಂಭಿಕ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿಕಾಕ್ 37 ಎಸೆತದಲ್ಲಿ 53 ರನ್ ಭಾರಿಸಿದರು. ಕೊಹ್ಲಿ ಸಹ 18 ರನ್ ಗಳಿಸಿ ಔಟಾದರು. ಆದರೆ ಇಂದಿನ ನಿಜವಾದ ಶ್ರೇಯ ಸಲ್ಲಬೇಕಿರುವುದು ಮಿಸ್ಟರ್ 360 ಎಬಿ ಡಿವಿಲಿಯರ್ಸ್‌ಗೆ.

ಪಂದ್ಯದ ಸ್ಕೋರ್ ಕಾರ್ಡ್

ಎಬಿ ಡಿವಿಲಿಯರ್ಸ್ ಅವರು ಸ್ಕ್ರೀಜಿನಲ್ಲಿ ಇದ್ದಷ್ಟು ಸಮಯ ಚೆನ್ನೈನ ಎಲ್ಲ ಬೌಲರ್‌ಗಳಿಗೆ ಮನಸೋ ಇಚ್ಛೆ ದಂಡಿಸಿದರು. ಅವರು ಕೇವಲ 30 ಎಸೆತದಲ್ಲಿ 68 ರನ್ ಭಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್ ಮತ್ತು 2 ಬೌಂಡರಿಗಳಿದ್ದವು. ಶಾರ್ದೂಲ್ ಠಾಕೂರ್‌ ಬೌಲಿಂಗ್‌ನಲ್ಲಿ ಅವರು ಎತ್ತಿದ ಹ್ಯಾಟ್ರಿಕ್ ಸಿಕ್ಸರ್‌ ಇಂದಿನ ವಿಶೇಷ.

ಅವರು ಇಮ್ರಾನ್ ತಾಹಿರ್‌ಗೆ ವಿಕೆಟ್ ಒಪ್ಪಿಸಿದ ನಂತರ ಬಂದ ಮಂದೀಪ್ ಸಿಂಗ್‌ ಕೂಡಾ ಭಿರುಸಿನ ಬ್ಯಾಟಿಂಗ್ ನಡೆಸಿದರು. ಕೇವಲ 17 ಎಸೆತದಲ್ಲಿ 32 ರನ್ ಗಳಿಸಿ ಎಬಿಡಿ ಔಟಾದ ನಂತರ ನಿಂತಿದ್ದ ರನ್‌ರೇಟ್‌ ಅನ್ನು ಹೆಚ್ಚಿಸಿ ಆರ್‌ಸಿಬಿ 200 ಗಡಿ ಸಮೀಪಿಸುವಂತೆ ಮಾಡಿದರು.

ಕೊನೆಯಲ್ಲಿ ಆಗಮಿಸಿದ ವಾಷಿಂಗ್ಟನ್ ಸುಂದರ್‌ ಬ್ರಾವೊ ಬೌಲಿಂಗ್‌ನಲ್ಲಿ ಸಿಕ್ಸರ್ ಬೌಂಡರಿ ಭಾರಿಸಿ ಆರ್‌ಸಿಬಿ 204 ರನ್ ಗಳಿಸುವಂತೆ ಮಾಡಿದರು. ಪಂದ್ಯ ಗೆಲ್ಲಲು ಚೆನ್ನೈ ತಂಡವು ಓವರ್‌ ಒಂದಕ್ಕೆ 10ರ ಸರಾಸರಿಯಲ್ಲಿ ರನ್ ಗಳಿಸಬೇಕಿದ್ದು, ಆರ್‌ಸಿಬಿಯು ಗೆಲ್ಲುವ ಭರವಸೆಯಲ್ಲಿದೆ.

ತಂಡಗಳು ಹೀಗಿವೆ
ಆರ್‌ಸಿಬಿ: ಕ್ವಿಂಟಾನ್ ಡಿ ಕಾಕ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕೋರೆ ಆಂಡರ್ಸನ್, ಮಂದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಕಾಲಿನ್ ಗ್ರಾಂಡ್ ಹೋಮ್‌, ಉಮೇಶ್ ಯಾದವ್, ಪವನ್ ನೇಗಿ, ಮೊಹಮ್ಮದ್ ಸಿರಾಜ್, ಯಜುರ್ವೇಂದ್ರ ಚಾಹಲ್

ಸಿಎಸ್‌ಕೆ: ಶೇನ್ ವಾಟ್ಸನ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ, ಸ್ಯಾಮ್ ಬಿಲ್ಲಿಂಗ್ಸ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್, ಶಾರ್ದೂಲ್ ಠಾಕೂರ್.

Story first published: Wednesday, April 25, 2018, 21:53 [IST]
Other articles published on Apr 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X