ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈಗೆ ಮುಖಭಂಗ: ರಾಜಸ್ಥಾನ್ ರಾಯಲ್ಸ್ 7 ವಿಕೆಟ್ ಜಯ

IPL 2018: Rajasthan Royals get a move on through Buttler

ಮುಂಬೈ, ಮೇ 14: ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 47 ಪಂದ್ಯದಲ್ಲಿ ಜೋಸ್ ಬಟ್ಲರ್ (94/53) ಸ್ಫೋಟಕ ಬ್ಯಾಟಿಂಗ್ ಸಾಹಸದಿಂದಾಗಿ ರಾಜಸ್ಥಾನ್ ರಾಯಲ್ ತಂಡ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಜಯ ಸಾಧಿಸಿದೆ.

ಮುಂಬೈ ಇಂಡಿಯನ್ಸ್ ನೀಡಿದ್ದ 168 ರನ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 18 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 171 ರನ್ ಕಲೆ ಹಾಕಿ ವಿಜಯದ ಕೇಕೆ ಹಾಕಿತು. ಈ ಪಂದ್ಯದ ಸೋಲು ಮುಂಬೈಗೆ ತವರಿನಲ್ಲೇ ಮುಖಭಂಗ ಮಾಡಿದೆಯಲ್ಲದೆ ಅದರ ಪ್ಲೇ ಆಫ್ ಕನಸನ್ನೂ ಭಗ್ನಗೊಳಿಸಿದೆ.

ಸ್ಕೋರ್ ಕಾರ್ಡ್

ಸುರ್ಯಕುಮಾರ್ ಯಾದವ್ 38 (31), ಎವಿನ್ ಲೆವಿಸ್ 60 (42), ಹಾರ್ದಿಕ್ ಪಾಂಡ್ಯ 36 (21) ರನ್ ನೆರವಿನೊಂದಿಗೆ ಮುಂಬೈ ಇಂಡಿಯನ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಪೇರಿಸಿ ರಾಜಸ್ಥಾನ್ ರಾಯಲ್ಸ್ ಗೆ 169 ರನ್ ಗುರಿ ನೀಡಿತ್ತು.

ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ ಆರಂಭದಲ್ಲಿ ವೇಗದ ಏರುಗತಿಯ ರನ್ ತೋರಿಸಿತಾದರೂ ಬಹುತೇಕ ಬ್ಯಾಟ್ಸ್ಮನ್ ಗಳ ರನ್ ಬೆಂಬಲ ತಂಡಕ್ಕೆ ಸಿಗದೆ ಸೊರಗಿತು. ಇದು ತಂಡದ ಸೋಲಿಗೂ ಕಾರಣವಾಯಿತು.

ನಾಯಕ ರೋಹಿತ್ ಶರ್ಮ ಸೊನ್ನೆ ಸುತ್ತಿದರು. ಇಶಾನ್ ಕಿಶಾನ್ 12 (11), ಕೃಣಾಲ್ ಪಾಂಡ್ಯ 3 (7), ಬೆನ್ ಕಟಿಂಗ್ ಅಜೇಯ 10 (7) ರನ್ ಮುಂಬೈ ತಂಡದ ನೆರವಿಗೆ ಬಾರದೆ ಹೋಯಿತು.

ಆರಂಭದಲ್ಲಿ ವೇಗದಲ್ಲಿ ಏರಿಕೆ ಕಂಡಿದ್ದ ತಂಡದ ರನ್ ಕ್ರಮೇಣ ನಿಧಾನಗತಿಗೆ ತಿರುಗಿತು. ಅದೂ 13 ರಿಂದ 17 ಓವರ್ ಅಂತರದಲ್ಲೇ ಮುಂಬೈಯ ಮೂರು (ಲೆವಿನ್ , ಇಶಾನ್, ಕೃಣಾಲ್) ವಿಕೆಟ್ ಗಳು ಉರುಳಿದ್ದು ತಂಡವನ್ನು ಇಕ್ಕಿಟ್ಟಿಗೆ ಸಿಲುಕಿಸಿತಲ್ಲದೆ ವೇಗದಲ್ಲಿ ಏರುತ್ತಿದ್ದ ರನ್ ನಿಯಂತ್ರಣಕ್ಕೆ ಬಂತು.

ರಾಜಸ್ಥಾನ್ ತಂಡದ ಬೌಲಿಂಗ್ ವಿಭಾಗದಿಂದ ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟ್ ಉರುಳಿಸಿ ಗಮನ ಸೆಳೆದರು. ಆರ್ಚರ್ 16 ರನ್ ನೀಡಿ ಮುಂಬೈಯ 2 ವಿಕೆಟ್ ಕಬಳಿಸಿದರೆ, ಸ್ಟೋಕ್ಸ್ 26 ರನ್ ನೀಡಿ 2 ವಿಕೆಟ್ ಕೆಡವಿದರು.

ಚೇಸಿಂಗ್ ಗೆ ಇಳಿದ ರಾಜಸ್ಥಾನ್ ನಿಂದ ಜೋಸ್ ಬಟ್ಲರ್ ಬ್ಯಾಟಿಂಗ್ ಆರ್ಭಟ ನಡೆಸಿದರು. ನಾಯಕ ಅಜಿಂಕ್ಯ ರಹಾನೆ (37/36) ಬೇಗನೆ ಔಟಾದರಾದರೂ ಬಟ್ಲರ್ ಮತ್ತು ಸ್ಯಾಮ್ಸನ್ ಜೋಡಿ ರಾಜಸ್ಥಾನ್ ತಂಡವನ್ನು ಗೆಲುವಿನಂಚಿಗೆ ತಂದಿತು.

ಸ್ಯಾಮ್ಸನ್ (26/14) ಕೊನೇ ಗಳಿಗೆಯಲ್ಲಿ ಹಾರ್ದಿಕ್ ಓವರ್ ನಲ್ಲಿ ಔಟಾದರಾದರೂ ಸ್ಪೋಟಕ ಬ್ಯಾಟಿಂಗ್ ನಡೆಸಿದ ಬಟ್ಲರ್ ರಾಜಸ್ಥಾನ್ ತಂಡವನ್ನು ಗೆಲುವಿನ ಗೆರೆ ದಾಟಿಸಿದರು.

Story first published: Monday, May 14, 2018, 0:14 [IST]
Other articles published on May 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X