ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಕೆ ಗೌತಮ್ ಚಿನಕುರಳಿ ಆಟ, ಮುಂಬೈಗೆ ಸೋಲಿನ ಪಾಠ

By Mahesh
IPL 2018: RR Vs MI: Suryakumar-Ishan put up 100-plus stand for Mumbai

ಜೈಪುರ, ಏಪ್ರಿಲ್ 21: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ತಕ್ಕಮಟ್ಟಿಗೆ ಯಶಸ್ಸು ತಂದುಕೊಟ್ಟಿತು. ಆರಂಭಿಕ ಬ್ಯಾಟ್ಸ್ ಮನ್ ಗಳಾದ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶಾನ್ ಉತ್ತಮ ಆರಂಭ ಒದಗಿಸಿದರು. ಮುಂಬೈ 167 ಸ್ಕೋರ್ ಮಾಡಿತು. ಕೊನೆಯಲ್ಲಿ ರಾಜಸ್ಥಾನ ತಂಡ ರೋಚಕವಾಗಿ ಚೇಸ್ ಮಾಡಿ 3 ವಿಕೆಟ್ ಗಳಿಂದ ಗೆಲುವು ದಾಖಲಿಸಿತು.

ಪಂದ್ಯದ ಲೈವ್ ಸ್ಕೋರ್ ಕಾರ್ಡ್

168ರನ್ ಗುರಿ ಬೆನ್ನು ಹತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಮ್ಮೆ ಸಂಜು ಸಾಮನ್ಸ್ ಹಾಗೂ ಬೆನ್ ಸ್ಟೋಕ್ಸ್ ಉತ್ತಮ ಜೊತೆಯಾಟದ ಮೂಲಕ ಆಸರೆಯಾದರು. ಸಂಜು ಸಾಮ್ಸನ್ 52ರನ್ (39 ಎಸೆತ), ಬೆನ್ ಸ್ಟೋಕ್ಸ್ 40ರನ್ (27 ಎಸೆತ) ಗಳಿಸಿ ಗೆಲುವಿನ ಹೊಸ್ತಿಲಿಗೆ ತಂದರು.

IPL 2018: RR Vs MI: Suryakumar-Ishan put up 100-plus stand for Mumbai

ಸಾಮ್ಸನ್, ಸ್ಟೋಕ್ಸ್ ವಿಕೆಟ್ ಪತನದ ನಂತರ ಬಟ್ಲರ್ ಹಾಗ್ ಕ್ಲಾಸೆನ್ ಕೂಡಾ ತ್ವರಿತವಾಗಿ ಪೆವಿಲಿಯನ್ ತಲುಪಿದರು. ತಂಡದ ಮೊತ್ತ 125/6 ಆಗಿತ್ತು. ಕೃಷ್ಣಪ್ಪ ಗೌತಮ್ 11 ಎಸೆತಗಳಲ್ಲಿ 33ರನ್ (4 ಬೌಂಡರಿ, 2ಸಿಕ್ಸರ್) ಸಿಡಿಸಿ, ತಂಡಕ್ಕೆ ಜಯ ತಂದಿತ್ತರು.

ಅಂಕಪಟ್ಟಿ | ಫ್ಯಾಂಟಸಿ ಲೀಗ್ ಆಡಿ

ತಂಡದ ಮೊತ್ತ 1 ರನ್ ಆಗಿದ್ದಾಗ ಎವಿನ್ ಲೆವಿಸ್ ವಿಕೆಟ್ ಕಳೆದುಕೊಂಡಿತು. ಸೂರ್ಯಕುಮಾರ್ ಯಾದವ್ 72ರನ್ (47ಎಸೆತ, 6 ಬೌಂಡರಿ, 3ಸಿಕ್ಸರ್) ಗಳಿಸಿದರೆ, ಇಶಾನ್ ಕಿಸಾನ್ 58ರನ್ (42 ಎಸೆತಗಳು, 4 ಬೌಂಡರಿ, 3ಸಿಕ್ಸರ್ ) ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ, ಇಬ್ಬರು ಐದು ರನ್ ಅಂತರದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ತಲುಪಿದರು. ನಾಯಕ ರೋಹಿತ್ ಶರ್ಮ ಕೂಡಾ ಶೂನ್ಯ ಸುತ್ತಿದಾಗ ತಂಡದ ಮೊತ್ತ 136/4.

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಸ್ಟುವರ್ಟ್ ಬಿನ್ನಿ ಬದಲಿಗೆ ಧವಳ್ ಕುಲಕರ್ಣಿ, ಬೆನ್ ಲಾಫ್ಲಿನ್ ಬದಲಿಗೆ ಜೋಫ್ರಾ ಆರ್ಚರ್ ತಂಡ ಸೇರಿದ್ದಾರೆ.

Story first published: Monday, April 23, 2018, 0:09 [IST]
Other articles published on Apr 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X