ಐಪಿಎಲ್ 2018 : ಟಿಕೆಟ್ ಎಲ್ಲಿ ಸಿಗುತ್ತೆ? ಬೆಲೆ ಎಷ್ಟು?

Posted By:
IPL 2018 Tickets Price; Where to Book

ಬೆಂಗಳೂರು, ಏಪ್ರಿಲ್ 04: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಯ ಪಂದ್ಯಗಳಿಗೆ ಮೈದಾನಗಳು ಸಜ್ಜಾಗುತ್ತಿವೆ. ಈ ನಡುವೆ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಪರ ಅಭಿಯಾನ ಆರಂಭಿಸಿವೆ. ಇದರ ಜೊತೆಗೆ ಟಿಕೆಟ್ ಎಲ್ಲಿ ಸಿಗುತ್ತೆ? ಯಾವ ಪಂದ್ಯ ನೋಡಬೇಕು ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ..

ಐಪಿಎಲ್ ವಿಶೇಷ ಪುಟ | ಪೂರ್ಣವೇಳಾಪಟ್ಟಿ | ಆರ್ ಸಿಬಿ ವೇಳಾಪಟ್ಟಿ

ಭ್ರಷ್ಟಾಚಾರದ ಆರೋಪ ಹೊತ್ತು ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮತ್ತೊಮ್ಮೆ ಕಣಕ್ಕಿಳಿಯುತ್ತಿರುವುದರಿಂದ ಆಟದ ಕಿಚ್ಚು ಇನ್ನು ಹೆಚ್ಚಾಗಿದೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಎರಡು ಜನಪ್ರಿಯ ತಂಡಗಳ ನಡುವಿನ ಕಾಳಗ ವೀಕ್ಷಿಸಲು ಅಭಿಮಾನಿಗಳು ಕಾತುರರಾಗಿದ್ದು, ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಟಿಕೆಟ್ ದರ: ಐಪಿಎಲ್ ಲೀಗ್ ಪಂದ್ಯಗಳ ಟಿಕೆಟ್ ದರ 500 ರು ನಿಂದ 26,000 ರು ತನಕ ಇದೆ.

ಎಲ್ಲಿ ಬುಕ್ ಮಾಡಬಹುದು: ಆನ್ ಲೈನ್ ನಲ್ಲಿ ಬುಕ್ ಮೈ ಶೋ.ಕಾಂ ನಲ್ಲಿ ಎಲ್ಲಾ ಪಂದ್ಯಗಳ ಬುಕ್ಕಿಂಗ್ ಮಾಡಲು ಸಾಧ್ಯವಿದೆ. ಪ್ರತಿ ಫ್ರಾಂಚೈಸಿಗೆ ಪ್ರತ್ಯೇಕ ಪುಟ ಹಾಗೂ ನಗರ ಆಧಾರಿತ ಬುಕ್ಕಿಂಗ್ ವ್ಯವಸ್ಥೆ ಇದೆ. ಉದಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳಿಗೆ ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮುಂಬೈನ ವಾಂಖೆಡೆ ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಬಾರಿ ಅಂದಿನ ಪಂದ್ಯ ನಾಯಕರಾದ ಎಂಎಸ್ ಧೋನಿ(ಚೆನ್ನೈ ಸೂಪರ್ ಕಿಂಗ್ಸ್) ಹಾಗೂ ರೋಹಿತ್ ಶರ್ಮ (ಮುಂಬೈ ಇಂಡಿಯನ್ಸ್) ಮಾತ್ರ ಹಾಜರಿರುತ್ತಾರೆ. ಮಿಕ್ಕ ತಂಡಗಳ ನಾಯಕರು ಹಾಜರಿರುವುದಿಲ್ಲ.

ಪ್ರತಿ ತಂಡಗಳು 14 ಪಂದ್ಯಗಳನ್ನಾಡಲಿದ್ದು, 7 ತವರು ನೆಲದಲ್ಲಿ ಹಾಗೂ 7 ಪಂದ್ಯಗಳನ್ನು ಎದುರಾಳಿ ನೆಲದಲ್ಲಿ ಆಡಬೇಕಿದೆ.

ಫ್ಯಾಂಟಸಿ ಲೀಗ್ ನಲ್ಲಿ ಆಡಲು ಇಲ್ಲಿ ಕ್ಲಿಕ್ ಮಾಡಿ

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, April 4, 2018, 14:18 [IST]
Other articles published on Apr 4, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ