ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2019: ಅಗ್ರಸ್ಥಾನಕ್ಕಾಗಿ ಸೂಪರ್‌ ಕಿಂಗ್ಸ್‌ v/s ಡೆಲ್ಲಿ ಕ್ಯಾಪಿಟಲ್ಸ್‌ ಫೈಟ್‌

IPL 2019: Chennai Super Kings, Delhi Capitals set for table-top clash

ಚೆನ್ನೈ, ಮೇ 01: ಮುಂಬೈ ಇಂಡಿಯನ್ಸ್‌ ಎದುರು ಸೋತು ನೆಟ್‌ ರನ್‌ರೇಟ್‌ ಕಳೆದುಕೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಇದೀಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ಪೈಪೋಟಿ ನಡೆಸಲಿದೆ.

 ಭಾರತ ಬಿಟ್ಟು ಹೊರಡೋ ಮುನ್ನ ಭಾವನಾತ್ಮಕ ಸಂದೇಶ ಬರೆದ ವಾರ್ನರ್ ಭಾರತ ಬಿಟ್ಟು ಹೊರಡೋ ಮುನ್ನ ಭಾವನಾತ್ಮಕ ಸಂದೇಶ ಬರೆದ ವಾರ್ನರ್

ಅಂಕಪಟ್ಟಿಯ ಮೊದಲೆರಡು ಸ್ಥಾನಗಳಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ ಜಟಾಪಟಿ ಎಲ್ಲರ ಗಮನ ತಮ್ಮತ್ತ ಸೆಳೆದಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಅಗ್ರಸ್ಥಾನ ಖಾತ್ರಿಯಾಗಲಿದೆ.

ಎಂದಿನ ನಾಯಕ ಎಂ.ಎಸ್‌ ಧೋನಿ ಅವರ ಸೇವೆ ಇಲ್ಲದೆ ಸೂಪರ್‌ ಕಿಂಗ್ಸ್‌ ಮುಂಬಯಿ ಇಂಡಿಯನ್ಸ್‌ ಎದುರು ಕಳೆದ ಪಂದ್ಯದಲ್ಲಿ ಹೀನಾಯ ಸೋಲುಂಡಿತ್ತು. ಇದೀಗ ತನ್ನ ಉಳಿದ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿ ರನ್‌ರೇಟ್‌ನಲ್ಲಿ ಸುಧಾರಣೆ ತಂದುಕೊಳ್ಳಲು ಸಿಎಸ್‌ಕೆ ಎದುರು ನೋಡುತ್ತಿದೆ. ಸದ್ಯ ಚೆನ್ನೈ ಪಡೆ 12 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾಗೆ ಇವರೆಲ್ಲಾ ಶುಭಕೋರಿದ್ದಾರೆ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾಗೆ ಇವರೆಲ್ಲಾ ಶುಭಕೋರಿದ್ದಾರೆ

ಮತ್ತೊಂದೆಡೆ ಕಳೆದ ಐದು ಪಂದ್ಯಗಳಲ್ಲಿ 4 ಜಯ ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆತ್ಮವಿಶ್ವಾಸದ ಅಲೆಯಲ್ಲಿ ಮುನ್ನುಗ್ಗುತ್ತಿದೆ. ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್‌ ಪಂತ್‌ ಅವರ ಬ್ಯಾಟಿಂಗ್‌ ಮತ್ತು ಕಗಿಸೊ ರಬಾಡ ಅವರ ಭರ್ಜರಿ ಬೌಲಿಂಗ್‌ ನೆರವಿನಿಂದ 12 ಪಂದ್ಯಗಳಲ್ಲಿ 16 ಅಂಕಗಳನ್ನು ಒಗ್ಗೂಡಿಸಿರುವ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಒಟ್ಟಾರೆ ಬಲಿಷ್ಠರ ನಡುವಣ ಜಟಾಪಟಿ ಕ್ರಿಕೆಟ್‌ ಪ್ರಿಯರಿಗೆ ಟಿ20 ಕ್ರಿಕೆಟ್‌ನ ರಸದೌತಣ ಬಡಿಸಲು ಸಜ್ಜಾಗಿದೆ.

ಸಿಎಸ್‌ಕೆ ಸಂಭಾವ್ಯ 11: ಎಂ.ಎಸ್‌ ಧೋನಿ/ಮುರಳಿ ವಿಜಯ್‌, ಶೇನ್‌ ವ್ಯಾಟ್ಸನ್‌, ಸುರೇಶ್‌ ರೈನಾ, ಅಂಬಾಟಿ ರಾಯುಡು, ಕೇದಾರ್‌ ಜಾಧವ್‌, ಧೃವ ಶೋರೆ, ಡ್ವೇನ್‌ ಬ್ರಾವೋ, ಮಿಚೆಲ್‌ ಸ್ಯಾಂಟ್ನರ್‌, ದೀಪಕ್‌ ಚಹರ್‌, ಹರ್ಭಜನ್‌ ಸಿಂಗ್‌, ಇಮ್ರಾನ್‌ ತಾಹಿರ್‌.

ಡಿಸಿ ಸಂಭಾವ್ಯ 11: ಪೃಥ್ವಿ ಶಾ, ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಕಾಲಿನ್‌ ಇಂಗ್ರಮ್‌, ಶೆರ್ಫೇನ್‌ ರುದರ್‌ಫೋರ್ಡ್‌, ಅಕ್ಷರ್‌ ಪಟೇಲ್‌, ಅಮಿತ್‌ ಮಿಶ್ರಾ, ಕಗಿಸೊ ರಬಾಡ, ಇಶಾಂತ್‌ ಶರ್ಮಾ, ಸಂದೀಪ್‌ ಲಾಮಿಚ್ಚಾನೆ.

Story first published: Tuesday, April 30, 2019, 20:51 [IST]
Other articles published on Apr 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X