ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆ್ಯಟಮ್ ಬಾಂಬ್‌ನಂತೆ ಕಾಣಿಸಿ ಠುಸ್ ಪಟಾಕಿ ಆದೋರು!

ತಗೊಂಡಿದ್ದು ಕೋಟಿ ಕೋಟಿ ದುಡ್ಡು..! ಹೊಡೆದಿದ್ದು...?
IPL 2019: The indian premier league Underperformers

ನವದೆಹಲಿ, ಏಪ್ರಿಲ್ 28: ಕ್ರೀಡೆಯಲ್ಲಿ ಲೆಕ್ಕಾಚಾರಗಳು, ನಿರೀಕ್ಷೆಗಳು ತಲೆಕೆಳಗಾಗುವುದು ಇದ್ದಿದ್ದೇ. ಕ್ರಿಕೆಟ್‌ನಲ್ಲಿ ಆಡುವ 11ರಲ್ಲಿ ಸ್ಥಾನ ಸಿಗೋದೇ ದೊಡ್ಡದು. ಇವರು ಚೆನ್ನಾಗಿ ಆಡಿಯಾರು ಅನ್ನೋ ಎಣಿಕೆಯಿಂದ ಮೈದಾನಕ್ಕಿಳಿಸಿದವರು ಆಡದಿದ್ದರೆ? ಇನ್ನೇನಾದೀತು; ಗೆಲ್ಲೋ ತಂಡದ ಸೋಲಿಗೆ ಅದೇ ಕಾರಣವಾದೀತು.

ಅಪ್ಪ-ಮಗ ಇಬ್ಬರನ್ನೂ ಔಟ್ ಮಾಡಿ ಅಚ್ಚರಿಗೆ ಕಾರಣರಾದ ಎಂಎಸ್ ಧೋನಿ!ಅಪ್ಪ-ಮಗ ಇಬ್ಬರನ್ನೂ ಔಟ್ ಮಾಡಿ ಅಚ್ಚರಿಗೆ ಕಾರಣರಾದ ಎಂಎಸ್ ಧೋನಿ!

ಚೆನ್ನಾಗಿ ಆಟ ಪ್ರದರ್ಶಿಸಬೇಕಾದ ಆಟಗಾರರು ನೀರಸ ಪ್ರದರ್ಶನ ನೀಡಿದ್ದು ಈ ಬಾರಿಯ ಐಪಿಎಲ್‌ನಲ್ಲಿ ಕಾಣಸಿಕ್ಕಿದೆ. ಈ ಸಾರಿ ಅನ್ನುವುದಕ್ಕಿಂತಲೂ ಪ್ರತೀಸಾರಿಯೂ ಐಪಿಎಲ್‌ನಲ್ಲಿ ಇದು ಇದ್ದಿದ್ದೆ. ಕಳೆದ ಸೀಸನ್‌ನಲ್ಲಿ ಆಡದೋರು ಈ ಸಾರಿ ಕೊಂಚ ಚೇತರಿಕೆ ತೋರಿದರೆ, ಹಿಂದಿನ ಸಾರಿ ಆಡಿದೋರು ಈ ಸಾರಿ ಠುಸ್ ಪಟಾಕಿ ಆಗಿದ್ದಾರೆ.

ಪಾಕಿಸ್ತಾನ ವಿರುದ್ಧದ ಅಂಡರ್-19 ಸರಣಿ ರದ್ದುಗೊಳಿಸಿದ ಶ್ರೀಲಂಕಾ ಕ್ರಿಕೆಟ್ಪಾಕಿಸ್ತಾನ ವಿರುದ್ಧದ ಅಂಡರ್-19 ಸರಣಿ ರದ್ದುಗೊಳಿಸಿದ ಶ್ರೀಲಂಕಾ ಕ್ರಿಕೆಟ್

ಹಾಗಂತ ಐಪಿಎಲ್ ಅಂತಿಮ ಹಂತಕ್ಕೆ ಇನ್ನೂ ಬಂದಿಲ್ಲ. ಆದರೆ ಈವರೆಗಿನ ಟೂರ್ನಿಯಲ್ಲಿ ನಿರೀಕ್ಷಿತ ಆಟ ಪ್ರದರ್ಶಿಸದ ಆಟಗಾರರ ಕಿರು ಮಾಹಿತಿ ಇಲ್ಲಿದೆ.

ಸುರೇಶ್ ರೈನಾ

ಸುರೇಶ್ ರೈನಾ

ಐಪಿಎಲ್‌ನಲ್ಲಿ ಅತ್ಯಧಿಕ ರನ್ (5000+) ಮತ್ತು ಅತ್ಯಧಿಕ ಕ್ಯಾಚ್‌ (99) ದಾಖಲೆ ಹೊಂದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಬ್ಯಾಟ್ಸ್ಮನ್ ಸುರೇಶ್ ರೈನಾ ಈ ಸಾರಿ ಅಂಥದ್ದೇನೂ ಪ್ರದರ್ಶನ ನೀಡಿಲ್ಲ. 12 ಪಂದ್ಯಗಳನ್ನು ಆಡಿದ ಬಳಿಕವೂ 22.45 ಬ್ಯಾಟಿಂಗ್ ಸರಾಸರಿ ಈ ಸರಿ ರೈನಾ ತೋರಿಸಿದ್ದಾರೆ.

ಕೇದಾರ್ ಜಾಧವ್

ಕೇದಾರ್ ಜಾಧವ್

ಚೆನ್ನೈ ಸೂಪರ್‌ ಕಿಂಗ್ಸ್ ಆಲ್ ರೌಂಡರ್ ಆಟಗಾರ ಕೇದಾರ್ ಜಾಧವ್ ಕೂಡ ಈ ಸೀಸನ್‌ನಲ್ಲಿ ವೈಫಲ್ಯವನ್ನು ತೋರಿಸಿಕೊಂಡಿದ್ದೇ ಹೆಚ್ಚು. ಒಟ್ಟು 162 ರನ್‌ ಕಲೆ ಹಾಕಿರುವ ಜಾಧವ್ ಸರಾಸರಿ ಕೇವಲ 20.25. ಚೆನ್ನೈ ಟಾಪ್ ಆರ್ಡರ್ ಬ್ಯಾಟ್ಸ್ಮನ್‌ ಆಗಿದ್ದೂ ಜಾಧವ್ ಕಳಪೆ ಪ್ರದರ್ಶನ ನೀಡಿದ್ದಾರೆ.

ಶುಭ್‌ಮಾನ್‌ ಗಿಲ್

ಶುಭ್‌ಮಾನ್‌ ಗಿಲ್

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬಲವಾಗಿ ನಿಲ್ಲಲಿದ್ದಾರೆ ಎಂದು ಭಾವಿಸಲಾಗಿದ್ದ ಶುಭ್‌ಮಾನ್‌ ಗಿಲ್‌ ಕೂಡ ಈ ಬಾರಿ ಗಮನಾರ್ಹ ಪ್ರದರ್ಶನವೇನೂ ನೀಡಿಲ್ಲ. 19ರ ಹರೆಯದ ಶುಭ್‌ಮಾನ್ ಸದ್ಯದ ಐಪಿಎಲ್ ಬ್ಯಾಟಿಂಗ್ ಎವರೇಜ್ 20.85.

ಡೇವಿಡ್ ಮಿಲ್ಲರ್

ಡೇವಿಡ್ ಮಿಲ್ಲರ್

ಸ್ಫೋಟಕ ಬ್ಯಾಟಿಂಗ್‌ಗೆ ಗುರುತಿಸಿಕೊಂಡಿದ್ದ, ಹಿಂದೆ ತಂಡದ ಗೆಲುವಿಗೆ ಕಾರಣರಾಗುತ್ತಿದ್ದ ಬೀಸುಗೈ ದಾಂಡಿಗ ಡೇವಿಡ್ ಮಿಲ್ಲರ್ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಳಪೆ ಬ್ಯಾಟಿಂಗ್‌ ನೀಡುತ್ತಿದ್ದಾರೆ. ಎರಡು ಪಂದ್ಯಗಳಲ್ಲಿ 40+ ರನ್ ಗಳಿಸಿ, 4 ಪಂದ್ಯಗಳಲ್ಲಿ ಬೆರಳೆಣಿಕೆ ರನ್‌ಗೆ ವಿಕೆಟ್ ಒಪ್ಪಿಸಿದ್ದ ಮಿಲ್ಲರ್ ಬ್ಯಾಟಿಂಗ್ ಸರಾಸರಿ 28.85.

ಬೆನ್ ಸ್ಟೋಕ್ಸ್

ಬೆನ್ ಸ್ಟೋಕ್ಸ್

ಇಂಗ್ಲೆಂಡ್ ಆಟಗಾರರಾದ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದು ನೋಡಿ ತಂಡಕ್ಕೆ ಆನೆಬಲ ಲಭಿಸಿದೆ ಎಂಬಂತಾಗಿತ್ತು. ಬಟ್ಲರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಆಲ್ ರೌಂಡರ್ ಸ್ಟೋಕ್ಸ್ ಅಂಥ ಗಮನಾರ್ಹ ಸಾಧನೆ ತೋರಿಲ್ಲ.

ವಿಜಯ್ ಶಂಕರ್

ವಿಜಯ್ ಶಂಕರ್

ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ವಿಜಯ್ ಶಂಕರ್‌ ಕೂಡ ನಿರೀಕ್ಷಿತ ಪ್ರದರ್ಶನ ನೀಡಿದ್ದು ಕಾಣಿಸಿಲ್ಲ. 10 ಇನ್ನಿಂಗ್ಸ್‌ಗಳಲ್ಲಿ 173 ರನ್ ಗಳಿಸಿರುವ ಶಂಕರ್ 19.2 ಸರಾಸರಿ ಹೊಂದಿದ್ದಾರೆ. ಇನ್ನು ಇದೇ ಸಾಲಿನಲ್ಲಿ ಅಂಬಾಟಿ ರಾಯುಡು (ಸಿಎಸ್‌ಕೆ), ಜಯದೇವ್ ಉನಾದ್ಕತ್ (ಆರ್‌ಆರ್), ಕುಲದೀಪ್ ಯಾದವ್ (ಕೆಕೆಆರ್), ಪ್ರಸಿದ್ಧ್ ಕೃಷ್ಣ (ಕೆಕೆಆರ್) ಮತ್ತು ಶರ್ದೂಲ್ ಠಾಕೂರ್‌ (ಸಿಎಸ್‌ಕೆ) ಕೂಡ ಇದ್ದಾರೆ.

Story first published: Sunday, April 28, 2019, 6:50 [IST]
Other articles published on Apr 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X