ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನಿನ್ನ ಹಣೆಬರಹ ನೋಡ್ಕೋ': ಆಕಾಶ್ ಚೋಪ್ರಾಗೆ ಜಿಮ್ಮಿ ನೀಶಮ್ ಟಾಂಗ್

ಕ್ರಿಕೆಟ್ ಎಂದಾಗ ಕಾಳೆಯುವಿಕೆ ಸಾಮಾನ್ಯ. ಅದರಲ್ಲಿಯೂ ವೀಕ್ಷಕ ವಿವರಣೆ ನೀಡುವವರು ಆಟಗಾರರ ಸಾಮರ್ಥ್ಯವನ್ನು ವಿಶ್ಲೇಷಿಸುತ್ತಾರೆ, ಅವರ ತಪ್ಪುಗಳನ್ನು ಟೀಕಿಸುತ್ತಾ, ಹಾಗೆಯೇ ಅವರ ಕಾಲೆಳೆದು ತಮಾಷೆ ಮಾಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಇಂತಹ ಟೀಕೆಗಳು ದೊಡ್ಡ ವಾಗ್ವಾದಕ್ಕೂ ಕಾರಣವಾಗುತ್ತದೆ. ಇತ್ತೀಚೆಗೆ ವಿರಾಟ್ ಕೊಹ್ಲಿ ವಿಚಾರವಾಗಿ ಮಾತನಾಡುವಾಗ ಸುನಿಲ್ ಗವಾಸ್ಕರ್, ಅನುಷ್ಕಾ ಶರ್ಮಾ ಹೆಸರು ಹೇಳಿದ್ದು ವಿವಾದ ಸೃಷ್ಟಿಸಿತ್ತು.

ಈಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಲ್‌ರೌಂಡರ್, ನ್ಯೂಜಿಲೆಂಡ್ ಆಟಗಾರ ಜಿಮ್ಮಿ ನೀಶಮ್ ಮತ್ತು ಭಾರತದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ನಡುವೆ ಟ್ವಿಟ್ಟರ್ ವಾರ್ ನಡೆದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರದರ್ಶನದಲ್ಲಿ ಜಿಮ್ಮಿ ನೀಶಮ್ ಪಾತ್ರ ಚರ್ಚೆಗೆ ಒಳಗಾಗಿತ್ತು. ಜಿಮ್ಮಿ ನೀಶಮ್ ಮ್ಯಾಚ್ ಗೆಲ್ಲಿಸಿ ಕೊಡುವ ಸಾಮರ್ಥ್ಯ ಇಲ್ಲದ ವ್ಯಕ್ತಿ ಎಂದು ಆಕಾಶ ಚೋಪ್ರಾ ಟೀಕಿಸಿದ್ದರು. ಅದಕ್ಕೆ ಜಿಮ್ಮಿ ಆಕಾಶ್ ಚೋಪ್ರಾ ಅವರ ಸಾಧನೆಯನ್ನು ಕೆದಕಿ ಕೆಣಕಿದ್ದಾರೆ. ಹಾಗೆಯೇ ಅದಕ್ಕೂ ಚೋಪ್ರಾ ತಿರುಗೇಟು ನೀಡಿದ್ದಾರೆ. ಮುಂದೆ ಓದಿ.

ಮ್ಯಾಚ್ ವಿನ್ನರ್ ಅಲ್ಲದ ಆಟಗಾರ

ಮ್ಯಾಚ್ ವಿನ್ನರ್ ಅಲ್ಲದ ಆಟಗಾರ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡ ಬಳಿಕ ಜಿಮ್ಮಿ ನೀಶಮ್ ಅವರ ಆಟವನ್ನು ಆಕಾಶ್ ಚೋಪ್ರಾ ಟೀಕಿಸಿದ್ದರು. 'ಓವರ್‌ಸೀಸ್ ವೇಗದ ಬೌಲರ್ ಆದ ನೀಶಮ್, ಪವರ್ ಪ್ಲೇನಲ್ಲಿಯೂ ಬೌಲಿಂಗ್ ಮಾಡುವುದಿಲ್ಲ, ಡೆತ್ ಓವರ್‌ನಲ್ಲಿಯೂ ಬೌಲಿಂಗ್ ಮಾಡಲಾರರು. ಅವರೊಬ್ಬ ಅದ್ಭುತ ಫಿನಿಶರ್ ಅಲ್ಲ ಮತ್ತು ಮೊದಲ ನಾಲ್ಕು ಅಥವಾ ಐದನೇ ಕ್ರಮಾಂಕದ ದೊಡ್ಡ ಬ್ಯಾಟ್ಸ್‌ಮನ್ ಕೂಡ ಅಲ್ಲ. ಹೀಗಿರುವಾಗ ಕಿಂಗ್ಸ್ ಇಲೆವೆನ್ ಅವರನ್ನು ಏಕೆ ಆಡಿಸುತ್ತಿದೆ? ನಿಜಕ್ಕೂ ಮ್ಯಾಚ್ ವಿನ್ನರ್ ಅಲ್ಲದ ಆಟಗಾರನನ್ನು ಆಡಿಸುತ್ತಿದ್ದೀರಿ' ಎಂದು ಚೋಪ್ರಾ ಹೇಳಿದ್ದರು.

ಈ ಸರಾಸರಿ ಪಂದ್ಯ ಗೆಲ್ಲಿಸಿರಲಾರದು

ಈ ಸರಾಸರಿ ಪಂದ್ಯ ಗೆಲ್ಲಿಸಿರಲಾರದು

ಆಕಾಶ್ ಚೋಪ್ರಾ ಹೇಳಿಕೆಯ ವರದಿಯ ಸ್ಕ್ರೀನ್ ಶಾಟ್‌ಅನ್ನು ಹಂಚಿಕೊಂಡಿರುವ ನೀಶಮ್, 90 ಸ್ಟ್ರೈಕ್ ರೇಟ್‌ನಲ್ಲಿ 18.5 ಸರಾಸರಿ ಹೊಂದಿರುವುದು ಅಷ್ಟೇನೂ ಮ್ಯಾಚ್‌ಗಳನ್ನು ಕೂಡ ಗೆಲ್ಲಿಸಿರಲಾರದು' ಎಂದು ಆಕಾಶ್ ಚೋಪ್ರಾ ಅವರ ಏಕದಿನ ಕ್ರಿಕೆಟ್ ಅಂಕಿ ಅಂಶವನ್ನು ಹುಡುಕಿ ವ್ಯಂಗ್ಯವಾಡಿದ್ದರು.

'ವಯಸ್ಸು' ಇತರರಿಗೆ ತಂಡದಿಂದ ಕೈ ಬಿಡಲು ಒಂದು ಕಾರಣ: ಧೋನಿಗೆ ಪರೋಕ್ಷವಾಗಿ ಟಾಂಗ್ ಕೊಟ್ರಾ ಇರ್ಫಾನ್ ಪಠಾಣ್?

ಅದಕ್ಕೇ ನನ್ನ ಆಡಿಸಲಿಲ್ಲ ಗೆಳೆಯ

ಅದಕ್ಕೇ ನನ್ನ ಆಡಿಸಲಿಲ್ಲ ಗೆಳೆಯ

ಜಿಮ್ಮಿ ನೀಶಮ್ ಅವರ ಕುಹಕವನ್ನು ಅರ್ಥ ಮಾಡಿಕೊಂಡ ಆಕಾಶ್ ಚೋಪ್ರಾ ಅಷ್ಟೇ ಬುದ್ಧಿವಂತಿಕೆ ಹಾಗೂ ತೀಕ್ಷ್ಣ ಉತ್ತರ ನೀಡಿದ್ದಾರೆ. 'ಅದು ನಿಜ ನನ್ನ ಗೆಳೆಯ. ಅದಕ್ಕೇ ನನ್ನನ್ನು ಮತ್ತೆಂದೂ ತಂಡಕ್ಕೆ ಆಯ್ಕೆ ಮಾಡಲಿಲ್ಲ. ನನಗೆ ಬೇರೆ ಕೆಲಸ ಮಾಡುತ್ತಿರುವುದಕ್ಕೆ ಹಣ ನೀಡುತ್ತಿದ್ದಾರೆ. ನಿಮ್ಮ ಆಟದ ಕುರಿತಾದ ನನ್ನ ಗ್ರಹಿಕೆ ಬಗ್ಗೆ ನಿಮಗೆ ಆಕ್ಷೇಪವಿಲ್ಲ, ಕೇವಲ ನನ್ನ ಕ್ರಿಕೆಟ್ ಅಂಕಿ ಅಂಶವಷ್ಟೇ ಮುಖ್ಯ ಎಂದು ತಿಳಿದು ಖುಷಿಯಾಯಿತು. ಐಪಿಎಲ್‌ನ ಮುಂದಿನ ಪಂದ್ಯಗಳಲ್ಲಿ ಚೆನ್ನಾಗಿ ಆಡಿ' ಎಂದು ತಿರುಗೇಟು ನೀಡಿದ್ದಾರೆ.

ನಾನು ಆಡಿದ್ದೇ ಕಡಿಮೆ

ನಾನು ಆಡಿದ್ದೇ ಕಡಿಮೆ

ಆದರೂ ನೀಶಮ್ ತಮ್ಮ ವಾದವನ್ನೇನೂ ಕೈಬಿಟ್ಟಿಲ್ಲ. 'ನೀವು ಕೆಟ್ಟದಾಗಿ ಆಡುತ್ತಿದ್ದೀರಿ ಎಂಬುದನ್ನು ಒಪ್ಪಿಕೊಳ್ಳಿ. ಅದನ್ನು ಬಿಟ್ಟು ಮಾಜಿ ಆಟಗಾರನ ಸಾಧನೆ ಕೆದಕಿದರೆ ನಿಮ್ಮ ವೈಫಲ್ಯ ಮುಚ್ಚಿ ಹೋಗುವುದಿಲ್ಲ' ಎಂದು ಅನೇಕರು ನೀಶಮ್ ವಿರುದ್ಧ ಹರಿಹಾಯ್ದಿದ್ದಾರೆ. ನಾನು ಮಾರ್ಚ್‌ನಿಂದ ಬ್ಯಾಟಿಂಗ್ ಮಾಡಿದ್ದು ತೀರಾ ಕಡಿಮೆ. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ನಿಮ್ಮ ಆಟ ಚೆನ್ನಾಗಿಲ್ಲ ಎಂದು ಹೇಳುವುದು ಎಷ್ಟು ಸರಿ ಎಂದು ನೀಶಮ್ ಕಿಡಿಕಾರಿದ್ದಾರೆ.

Story first published: Saturday, October 3, 2020, 20:01 [IST]
Other articles published on Oct 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X