19 ವರ್ಷದ ಈ ಬ್ಯಾಟ್ಸ್‌ಮನ್‌ ಬಾರಿಸಿರೋ 8 ಐಪಿಎಲ್ ಸಿಕ್ಸರ್ ಸಾಮಾನ್ಯದ್ದಲ್ಲ!

ಇಂಡಿಯನ್ ಪ್ರೀಮಿಯರ್ ಲೀಗ್ ಯುವ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಸಿಕ್ಕಿರುವ ಸರಿಯಾದ ವೇದಿಕೆ. ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅವಕಾಶ ಗಿಟ್ಟಿಸಿಕೊಂಡ ಹಲವಾರು ಆಟಗಾರರ ಉದಾಹರಣೆ ನಮ್ಮ ನಿಮ್ಮ ಮುಂದೆಯೇ ಇವೆ. ಇದೀಗ ಮತ್ತೊಂದು ಪ್ರತಿಭೆ ಐಪಿಎಲ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. 19 ವರ್ಷದ ಈ ಬ್ಯಾಟ್ಸ್‌ಮನ್‌ ಸಿಡಿಸಿರುವ ಸಿಕ್ಸರ್ಸ್ ಸಾಮಾನ್ಯವಾದವುಗಳಲ್ಲ. ಯಾಕೆಂದರೆ ಈತ ಸಿಕ್ಸರ್ ಬಾರಿಸಿರುವ ಬೌಲರ್‌ಗಳೆಲ್ಲರೂ ಸ್ಟಾರ್ ಬೌಲರ್‌ಗಳು, ಅನುಭವವುಳ್ಳ ಬ್ಯಾಟ್ಸ್‌ಮನ್‌ಗಳೇ ಸಿಕ್ಸರ್ ಬಾರಿಸಲು ಪರದಾಡುವ ಬೌಲರ್‌ಗಳಿಗೆ ಈ ಆಟಗಾರ ಲೀಲಾಜಾಲವಾಗಿ ಸಿಕ್ಸರ್ ಬಾರಿಸಿದ್ದಾರೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಸಿಕ್ಸರ್ ಬಾರಿಸುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಇಷ್ಟು ದೊಡ್ಡಮಟ್ಟಿಗೆ ಸದ್ದು ಮಾಡುತ್ತಿರುವ ಆಟಗಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್‌ ಅಬ್ದುಲ್ ಸಮದ್. ಜಮ್ಮು ಕಾಶ್ಮೀರದ ಬ್ಯಾಟ್ಸ್‌ಮನ್‌ ಅಬ್ದುಲ್ ಸಮದ್ 2020ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ತಮ್ಮ ಮೊದಲ ಐಪಿಎಲ್ ಪಂದ್ಯವನ್ನಾಡಿದರು. ಇದುವರೆಗೂ ಒಟ್ಟು 13 ಐಪಿಎಲ್ ಪಂದ್ಯ ಗಳನ್ನಾಡಿರುವ ಅಬ್ದುಲ್ ಸಮದ್ ಬ್ಯಾಟಿಂಗ್ ಮಾಡಿರುವುದು ಒಟ್ಟು 9 ಇನ್ನಿಂಗ್ಸ್‌ಗಳಲ್ಲಿ. ಈ 9 ಇನ್ನಿಂಗ್ಸ್‌ಗಳಲ್ಲಿ ಸಮದ್ ಗಳಿಸಿದ ರನ್ 130 ಮತ್ತು 4 ಇನ್ನಿಂಗ್ಸ್‌ಗಳಲ್ಲಿ ಸಮದ್ ಅಜೇಯರಾಗಿ ಉಳಿದಿದ್ದರು. ಸಮದ್ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಒಟ್ಟು 8 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿದ್ದಾರೆ.

ಇದರಲ್ಲೇನು ವಿಶೇಷ ಅಂತೀರಾ? ಖಂಡಿತಾ ವಿಶೇಷವಿದೆ. ಯಾಕೆಂದರೆ ಅಬ್ದುಲ್ ಸಮದ್ ಬಾರಿಸಿರುವ ಈ 8 ಸಿಕ್ಸ್ ಸಾಮಾನ್ಯ ಬೌಲರ್‌ಗಳ ಓವರ್‌ಗಳಲ್ಲಲ್ಲ ಬದಲಾಗಿ ವಿಶ್ವ ಕ್ರಿಕೆಟ್‍ನ ಡೇಂಜರಸ್ ಬೌಲರ್‌ಗಳ ಓವರ್‌ಗಳಲ್ಲಿ. ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ 8 ಎಸೆತಗಳನ್ನು ಎದುರಿಸಿರುವ ಅಬ್ದುಲ್ ಸಮದ್ 3 ಸಿಕ್ಸರ್ ಬಾರಿಸಿದ್ದಾರೆ, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ 6 ಎಸೆತಗಳನ್ನು ಎದುರಿಸಿರುವ ಸಮದ್ ಬಾರಿಸಿರುವುದು 2 ಸಿಕ್ಸರ್, ಅನ್ರಿಕ್ ನಾರ್ಕಿಯಾ ಬೌಲಿಂಗ್‌ನಲ್ಲಿ 8 ಎಸೆತಗಳನ್ನು ಎದುರಿಸಿರುವ ಸಮದ್ 2 ಸಿಕ್ಸರ್ ಬಾರಿಸಿದ್ದಾರೆ ಮತ್ತು ಕಗಿಸೋ ರಬಾಡ ಬೌಲಿಂಗ್‌ನಲ್ಲಿ 5 ಎಸೆತ ಎದುರಿಸಿರುವ ಸಮದ್ 1 ಸಿಕ್ಸರ್ ಬಾರಿಸಿದ್ದಾರೆ. ಬಲಿಷ್ಠ ಬೌಲರ್‌ಗಳ ಎಸೆತಗಳಿಗೆ ಸಿಕ್ಸರ್ ಬಾರಿಸಿರುವ ಅಬ್ದುಲ್ ಸಮದ್ ಅವರ ಈ ಅಂಕಿ ಅಂಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, April 13, 2021, 13:05 [IST]
Other articles published on Apr 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X